BSNL: ಅತೀ ಕಡಿಮೆ ಬೆಲೆಗೆ ಬರೋಬ್ಬರಿ 90 ದಿನಗಳ ರೀಚಾರ್ಜ್ ಪ್ಲಾನ್ ಘೋಷಣೆ!

ಬೆಂಗಳೂರು, ಜನವರಿ 06: ದೇಶದ ಟೆಲಿಕಾಂ ವಲಯದಲ್ಲಿ ಸಂಚಲನ ಸೃಷ್ಟಿಸಿರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಗ್ರಾಹಕರಿಗೆ ಹೊಸ ವರ್ಷದ ಪ್ರಯುಕ್ತ ಬರೋಬ್ಬರಿ 03 ತಿಂಗಳ (90 ದಿನಗಳ) ವ್ಯಾಲಿಡಿಟಿಯ ಯೋಜನೆಯನ್ನು ಅತೀ ಕಡಿಮೆ ಬೆಲೆಗೆ ಪರಿಚಯಿಸಿದೆ. ಹೊಸ ವರ್ಷಕ್ಕೆ ತನ್ನ ಗ್ರಾಹಕರಿಗಾಗಿ ಈ ಯೋಜನೆ ಘೋಷಿಸಿದೆ ಎಂದು ವರದಿ ಆಗಿದೆ.

ಈ ಹೊಸ ಯೋಜನೆಯ ಅವಧಿ ಪರಿಗಣಿಸುವುದಾದರೆ ಬಿಎಸ್‌ಎನ್‌ಎಲ್ ದೇಶದ ಅತೀ ಕಡಿಮೆ ಬೆಲೆಗೆ ಮೂರು ತಿಂಗಳು ಪ್ರಿಪೇಯ್ಡ್ ಸಿಗುವ ಯೋಜನೆ ಎನ್ನಬಹುದು. ಬೇರೆ ಬೇರೆ ಟೆಲಿಕಾಂ ಕಂಪನಿಗಳಲ್ಲಿ ಈ ರೀತಿ ಯೋಜನೆ ಇಲ್ಲದಾಗಿದೆ. 4ಜಿ ಇಂಟರ್‌ನೆಟ್ ಸೇವೆ ಸಮರ್ಪಕವಾಗಿ ಒದಗಿಸುವ ಪ್ರಕ್ರಿಯೆಯಲ್ಲಿ ಕಂಪನಿ ನಿರತವಾಗಿದೆ.

BSNL Introduced 90 Days Mobile Recharge Plan for Rs 439 Know Details

ಸದ್ಯ ಪರಿಪೂರ್ಣ 4ಜಿ ಇಲ್ಲದ್ದರಿಂದ ವರ್ಕ್ ಫ್ರಂ ಹೋಮ್ ಇರುವ ಬಿಎಸ್‌ಎನ್‌ಎಲ್ ಗ್ರಾಹಕರಿಗೆ ಕೊಂಚ ತೊಂದರೆ ಆಗುತ್ತಿದೆ. ಹೀಗಾಗಿಯೇ ಅನೇಕರು ಈ ಸಿಮ್ ಕೊಳ್ಳಲು ಅಥವಾ ಪೋರ್ಟ್ ಮಾಡಿಕೊಳ್ಳಲು ಹಿಂದೆ ಮುಂದೆ ನೋಡುವಂತಾಗಿದೆ.

ಸದ್ಯ 4ಜಿ ಇಂಟರ್‌ನೆಟ್ ಸೇವೆ ನೀಡುತ್ತಿದ್ದಂತೆ ಬಿಎಸ್‌ಎನ್‌ಎಲ್‌ 5ಜಿಗೆ ಅಪ್‌ಗ್ರೇಡ್ ಆಗಲಿದೆ. ಇದೆಲ್ಲದ ಮಧ್ಯ ಕಂಪನಿಯು ತನ್ನ ಗ್ರಾಹಕರಿಗೆ ಅನುಕೂಲಕರ ರೀಚಾರ್ಜ್ ಪ್ಲಾನ್ ಒದಗಿಸುತ್ತಲೇ ಇದೆ. ಸದ್ಯ BSNL ಗ್ರಾಹಕರಿಗೆ ಅಗ್ಗದ ಬೆಲೆಗೆ 90 ದಿನಗಳ ಪ್ರಿಪೇಯ್ಡ್ ಯೋಜನೆ ಒದಗಿಸಿದೆ. ಗ್ರಾಹಕರಿಗೆ ಇದರಿಂದ ಅನಿಯಮಿತ ಕರೆಗಳು, ಪೂರ್ಣ ಅವಧಿವರೆಗೆ 300 ಎಸ್‌ಎಂಎಸ್‌ಗಳನ್ನು ಮಾಡಲು ಅವಕಾಶ ಇದೆ.

BSNL: 500 ರೂ.ಗೂ ಕಡಿಮೆ ಬೆಲೆ ಯೋಜನೆ

BSNL ಗ್ರಾಹಕರಿಗೆ 500 ರೂಪಾಯಿಗಿಂತಲೂ ಕಡಿಮೆ ಬೆಲೆಗೆ ಯೋಜನೆ ಘೋಷಿಸಿದೆ. ಗ್ರಾಹಕರಿಗೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಹೊಸ ಪ್ಲಾನ್ ಸಿಗುತ್ತಿದೆ. ನೀವು 439 ರೂಪಾಯಿ ರೀಚಾರ್ಜ್ ಮಾಡಿದರೆ ಕರೆ, ಎಸ್‌ಎಂಎಸ್ ಮಾಡಬಹುದು. ಆದರೆ ಇದಕ್ಕೆ ಇಂಟರ್‌ನೆಟ್ ಡೇಟಾ ಪ್ರಯೋಜನ ಸಿಗುವುದಿಲ್ಲ. ನೀವು ಅಗತ್ಯವಿರುದ್ಧ ಡೇಟಾ ಪ್ಯಾಕ್‌ ಅನ್ನು ಯಾವಾಗ ಬೇಕಾದರೂ ರೀಚಾರ್ಜ್ ಮಾಡಿಕೊಳ್ಳಬಹುದು. 439 ರೂ. ಪ್ಲಾನ್‌ಗೆ ಪ್ರತ್ಯೇಕ ಡೇಟಾ ಪ್ಯಾಕ್ ಹಾಕಿಸಿಕೊಳ್ಳಲು ಅವಕಾಶ ಇದೆ.

ಈ ಹೊಸ ಪ್ಲಾನ್ ದೇಶದ ಮೂಲೆ ಮೂಲೆಗಳಲ್ಲಿ ಸಂಪರ್ಕ ಸಾಧ್ಯವಾಗಿಸುವ ಉದ್ದೇಶದಿಂದ ಕೇವಲ ಕರೆಯ ಉದ್ದೇಶ ಇಟ್ಟುಕೊಂಡೆ ಘೋಷಿಸಿದ ಯೋಜನೆ ಆಗಿದೆ. ಇನ್ನೂ ಬಳಕೆದಾರರಿಗೆ ಬಿಎಸ್‌ಎನ್‌ಎಲ್ ಎರಡನೇ ಸಿಮ್ ಆಗಿದ್ದಲ್ಲಿ, ಅದರ ರೀಚಾರ್ಜ್‌ಗೆ ಈ ಪ್ಲಾನ್ ಬಳಸಿಕೊಳ್ಳಬಹುದು..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+