BSNL: ಕೈಗೆಟುಕುವ ಬೆಲೆಗೆ 30 ದಿನಗಳ ಭರ್ಜರಿ ಪ್ಲಾನ್, ಬಳಕೆದಾರರ ಗಮನಕ್ಕೆ
ಬೆಂಗಳೂರು, ಜೂನ್ 02: ಕೇಂದ್ರ ಸರ್ಕಾರಿ ಸ್ವಾಧೀನದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ದೇಶಾದ್ಯಂತ 4ಜಿ ಸೇವೆ ಜೊತೆಗೆ ಟವರ್ ನಿರ್ಮಾಣದಲ್ಲಿ ಪ್ರಗತಿ ಸಾಧಿಸುತ್ತಿದೆ. ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಜನಸ್ನೇಹಿ ಯೋಜನೆ ಘೋಷಿಸಿತ್ತುದೆ. ಇದೀಗ ಕೈಗೆಟುಕುವ ಬೆಲೆಗೆ ಬರೋಬ್ಬರಿ 30 ದಿನ ವ್ಯಾಲಿಡಿಟಿಯ ಪ್ಲಾನ್ ನೀಡುತ್ತಿದೆ. ಈ ಹಿಂದೆಯು ಇದೇ ರೀತಿ ಕಡಿಮೆ ಬೆಲೆಗೆ ನೀಡಿದ್ದ ಉತ್ತಮ ಯೋಜನೆಗಳ ಸಾಲಿಗೆ ಮತ್ತೊಂದು ಹೊಸ ಪ್ಲಾನ್ ಸೇರ್ಪಡೆ ಆದಂತಾಗಿದೆ.
ಬಳಕೆದಾರರಿಗೆ ಕಡಿಮೆ ಬೆಲೆಗೆ ಉತ್ತಮ ಯೋಜನೆ ತಂದಿರುವ BSNL ಕೇವಲ 147 ರೂಪಾಯಿಗೆ ಯೋಜನೆ ಒಂದು ತಿಂಗಳ ಅವಧಿಗೆ (30 ದಿನಗಳ) ಸಕ್ರಿಯವಿರುವ ಯೋಜನೆ ಪರಿಚಯಿಸಿದೆ. ಬಜೆಟ್ ಸ್ನೇಹಿ ಪ್ರಿಪೇಯ್ಡ್ ಪ್ಲಾನ್ ರಿಚಾರ್ಜ್ ಮಾಡಿಕೊಳ್ಳುವ ಗ್ರಾಹಕರಿಗೆ ಇದೊಂದು ಉತ್ತಮ ಪ್ಯಾನ್ ಆಗಿದೆ ಎಂದು ಕಂಪನಿ ಅಭಿಪ್ರಾಯಪಟ್ಟಿದೆ.

BSNL ಕೇವಲ 147 ರೂಪಾಯಿ ರೀಚಾರ್ಜ್ ಮಾಡಿದರೆ 10 ಜಿಬಿ 4ಜಿ ಇಂಟರ್‌ನೆಟ್ ಡೇಟಾದೊಂದಿಗೆ ಅನಿಯಮಿತ ಧ್ವನಿ ಕರೆ ಸೌಲಭ್ಯಗಳು ಇವೆ. ಡೇಟಾ ಪ್ರಯೋಜನದ ನಂತರ ಬಳಕೆದಾರರಿಗೆ ಲಭ್ಯವಿರುವ ವೇಗವು 40 ಕೆಬಿಪಿಎಸ್ ವರೆಗೆ ಲಭ್ಯ ಇರುತ್ತದೆ. ಇಷ್ಟು ಕಡಿಮೆ ಬೆಲೆಗೆ ಉತ್ತಮ ಪ್ಲಾನ್ ಪಡೆಯಬೇಕಿದ್ದರೆ, ಕೂಡಲೇ ರೀಚಾರ್ಜ್ ಮಾಡಿಸಿಕೊಳ್ಳಬಹುದು.
ಇತರ ಕೈಗೆಟುಕುವ ರೀಚಾರ್ಜ್ ಯೋಜನೆ ಬೇಕಾದಲ್ಲಿ ರೂಪಾಯಿ 247 ಮತ್ತು 299 ರೂಪಾಯಿ ಪ್ರಿಪೇಯ್ಡ್ ಪ್ಲಾನ್ ಪಡೆಯಬಹುದಾಗಿದೆ. ಇವು ಸಹ ಉತ್ತಮ ಆಯ್ಕೆಗಳಾಗಿವೆ ಎಂದು ಕಂಪನಿ ತಿಳಿಸಿದೆ. ಬಿಎಸ್‌ಎನ್‌ಎಲ್ 247 ರೂಪಾಯಿ ರಿಚಾರ್ಜ್ ಮಾಡಿಸಿದರೆ ನೀವು 30 ದಿನಗಳವರೆಗೆ ಅನ್‌ಲಿಮಿಟೆಡ್ ಕರೆಗಳನ್ನು ಮಾಡಬಹುದು. ಜೊತೆಗೆ 50 GB FUP (ಫೇರ್ ಯೂಸೇಜ್ ಪಾಲಿಸಿ) ಡೇಟಾದೊಂದಿಗೆ ಪ್ರತಿ ದಿನ 100 ಎಸ್‌ಎಂಎಸ್ ಸೌಲಭ್ಯ ಪಡೆಯಬಹುದಾಗಿದೆ. ಒಂದು ವೇಳೆ ನೀಡಲಾದ ಇಂಟರ್‌ನೆಟ್ ಸೇವೆ ಕೊನೆಗೊಂಡರೂ ಸಹಿತ ನೀವು 40 ಕೆಬಿಪಿಎಸ್ ವರೆಗೆ ಡೇಟಾ ಲಭ್ಯ ಇದೆ.
ಬಿಎಸ್‌ಎನ್‌ಎಲ್ ರೂ. 299 ಪ್ಲಾನ್ ವಿವರ
BSNL ಮತ್ತೊಂದು ಬೆಸ್ಟ್ ಪ್ಲಾನ್ 299 ರೂಪಾಯಿಗೆ ಸಿಗುತ್ತದೆ. ಯೋಜನೆಯು 30 ದಿನಗಳವರೆಗೆ ಮಾನ್ಯವಾಗಿರುತ್ತದೆ. ಉಚಿತ ಅನ್‌ಲಿಮಿಟೆಡ್ ನಿತ್ಯ 3ಜಿಬಿ ಇಂಟರ್‌ನೆಟ್, ದೈನಂದಿನ 100 ಸಂದೇಶ ಸೌಲಭ್ಯಗಳು ಇರುತ್ತದೆ. ಡೇಟಾ ಖಾಲಿಯಾದರೆ ತುರ್ತು ಸೇವೆಗೆ 40 ಕೆಬಿಪಿಎಸ್ ವರೆಗೆ ಇಂಟರ್‌ನೆಟ್ ಸೇವೆ ಸಿಗುತ್ತದೆ. ಗ್ರಾಹಕರು ಕೂಡಲೇ ಅಗತ್ಯತೆ ನೋಡಿಕೊಂಡು ಈ ಮೇಲಿನ ರೀಚಾರ್ಜ್ ಯೋಜನೆ ಮಾಡಿಕೊಳ್ಳಬಹುದು.












Click it and Unblock the Notifications