BRICS Summit: ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಭದ್ರತೆಗೆ 15,000 ಪೊಲೀಸ್: ಈ ವಿಷಯದಲ್ಲಿ ಮೋದಿ ಮಿಂಚಿಂಗ್!

BRICS Summit: ಬ್ರಿಕ್ಸ್‌ ಶೃಂಗಸಭೆಯ ವಿಚಾರಗಳ ಬಗ್ಗೆ ಇಡೀ ವಿಶ್ವವೇ ಗಮನಿಸುತ್ತಿದೆ. ಕಳೆದ 7 ವರ್ಷಗಳ ಅವಧಿಯಲ್ಲಿ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಇದೇ ಮೊದಲ ಬಾರಿ ಭಾರತಕ್ಕೆ ಭೇಟಿ ನೀಡಿದ್ದಾರೆ. ಸೆಪ್ಟೆಂಬರ್ 12ರ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ವ್ಯಾಪಾರ ಹಾಗೂ ಹೂಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ದ್ವಿಪಕ್ಷೀಯ ಮಾತುಕತೆಯನ್ನು ನಡೆಸಲಿದ್ದಾರೆ. ಬ್ರಿಕ್ಸ್‌ ಶೃಂಗ ಸಭೆಯು ಹಲವು ಕಾರಣಗಳಿಗೆ ವಿಶೇಷವಾಗಿದೆ. ಇದರಲ್ಲಿ ಚೀನಾದ ಅಧ್ಯಕ್ಷರಿಗೆ ನೀಡಿರುವ ಭಾರೀ ಭದ್ರತೆಯೂ ಒಂದಾಗಿದೆ. ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರಿಗೆ 15,000 ಪೊಲೀಸರು ಮತ್ತು ಅರೆಸೇನಾ ಪಡೆಯಿಂದ ಬಿಗಿ ಭದ್ರತೆ ಮತ್ತು ಹೋಟೆಲ್ ಸುತ್ತಮುತ್ತಲಿನ ಪ್ರದೇಶದಲ್ಲಿ ಹಾರಾಟ ನಿಷೇಧ ವಲಯ ಎಂದೂ ಘೋಷಿಸಲಾಗಿದೆ.

ಬ್ರಿಕ್ಸ್‌ ಶೃಂಗಸಭೆಯು ಭಾರತಕ್ಕೆ ಮಹತ್ವದ್ದಾಗಿದೆ. ಅಲ್ಲದೆ ಬ್ರಿಕ್ಸ್‌ ರಾಜತಾಂತ್ರಿಕ ಬೆಳವಣಿಗೆಯಲ್ಲಿ, ಬ್ರಿಕ್ಸ್‌ ಗ್ರೂಪ್‌ನ ಸದಸ್ಯ ರಾಷ್ಟ್ರಗಳು ಶನಿವಾರ ಪಶ್ಚಿಮ ಏಷ್ಯಾ ಸಂಘರ್ಷದ ಕುರಿತು ಇರಾನ್ ಮತ್ತು ಅಮೆರಿಕದ ನಡುವಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಿ ಒಮ್ಮತದ ಜಂಟಿ ಘೋಷಣೆಯನ್ನು ಅಂಗೀಕರಿಸಿವೆ.

BRICS Summit 15 000 Police Deployed for Xi Jinping s Security What Did PM Modi Say

ನವದೆಹಲಿ ನಡೆದ ಶೃಂಗಸಭೆಯಲ್ಲಿ ಬ್ರಿಕ್ಸ್ ದೆಹಲಿ ಘೋಷಣೆಯನ್ನು ಅಂಗೀಕರಿಸಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಪಶ್ಚಿಮ ಏಷ್ಯಾ ಸಂಘರ್ಷದ ಕುರಿತು ಇರಾನ್-ಅಮೆರಿಕದ ನಡುವಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಿ ಮತ್ತು ಪರಮಾಣು ಅಪಾಯಗಳಂತಹ ಜಾಗತಿಕ ಕಾಳಜಿಗಳ ಬಗ್ಗೆ ಮಹತ್ವದ ಚರ್ಚೆ ನಡೆದಿದೆ.

ನವದೆಹಲಿಯಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಜಂಟಿ ಘೋಷಣೆಯ ಕುರಿತು ಒಮ್ಮತಕ್ಕೆ ಬಂದಿವೆ, ಪ್ರಧಾನಿ ನರೇಂದ್ರ ಮೋದಿ ಶನಿವಾರ ಬ್ರಿಕ್ಸ್ ದೆಹಲಿ ಘೋಷಣೆಯನ್ನು ಅಂಗೀಕರಿಸುವುದಾಗಿ ಘೋಷಿಸಿದ್ದಾರೆ. ಶೃಂಗಸಭೆಯನ್ನು ಉದ್ಘಾಟಿಸಿದ ಮೋದಿ, ಬ್ರಿಕ್ಸ್ ಗ್ರೂಪ್ "ಪ್ರೌಢಾವಸ್ಥೆಗೆ ಬಂದಿದೆ" ಎಂದು ಹೇಳಿದರು ಮತ್ತು ಜಾಗತಿಕ ವೇದಿಕೆಯಲ್ಲಿ ಅದರ ಏಕತೆ ಮತ್ತು ಒಮ್ಮತದ ಹಂತಕ್ಕೆ ಬಂದಿವೆ ಎಂದಿದ್ದಾರೆ.

ಪರಮಾಣು ಸಂಘರ್ಷದ ಹೆಚ್ಚುತ್ತಿರುವ ಅಪಾಯಗಳು ಮತ್ತು ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಬ್ರಿಕ್ಸ್‌ ಘೋಷಣೆಯು "ಏಕಪಕ್ಷೀಯ" ಬಲವಂತದ ಕ್ರಮಗಳನ್ನು ಹೇರುವುದನ್ನು ಖಂಡಿಸುತ್ತದೆ, ಅವುಗಳನ್ನು ಅಂತರರಾಷ್ಟ್ರೀಯ ಕಾನೂನಿಗೆ ವಿರುದ್ಧವೆಂದು ನಂಬಿದೆ. ಒಪ್ಪಂದವು ಗಮನಾರ್ಹ ಪ್ರಗತಿಯನ್ನು ಸೂಚಿಸುತ್ತದೆ, ವಿಶೇಷವಾಗಿ ಇರಾನ್ ಮತ್ತು ಅಮೆರಿಕದ ನಡುವಿನ ನಡೆಯುತ್ತಿರುವ ಯುದ್ಧದ ವಿಚಾರವಾಗಿದೆ ಎಂದು ಹೇಳಲಾಗಿದೆ.

BRICS Summit: ಪ್ರಧಾನಿ ನರೇಂದ್ರ - ಷಿ ಜಿನ್‌ಪಿಂಗ್

ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಬ್ರಿಕ್ಸ್‌ ಶೃಂಗಸಭೆಯಲ್ಲಿ ಭೇಟಿಯಾಗಿದ್ದಾರೆ. ನವದೆಹಲಿಯಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಹಲವು ಪ್ರಮುಖ ಚರ್ಚೆಗಳು ನಡೆದಿವೆ. 2025ರ ಆಗಸ್ಟ್‌ನಲ್ಲಿ ಟಿಯಾಂಜಿನ್‌ನಲ್ಲಿ ನಡೆದ ಕೊನೆಯ ಸಭೆಯ ನಂತರ ಭಾರತ-ಚೀನಾ ದ್ವಿಪಕ್ಷೀಯ ಸಂಬಂಧಗಳಲ್ಲಿ ಸ್ಥಿರವಾದ ಪ್ರಗತಿಯನ್ನು ಇಬ್ಬರೂ ನಾಯಕರು ಸ್ವಾಗತಿಸಿದ್ದಾರೆ. ಎರಡೂ ದೇಶಗಳು ತಮ್ಮ ಸಂಬಂಧಗಳ ಕಾರ್ಯತಂತ್ರದ ಮತ್ತು ದೀರ್ಘಕಾಲೀನ ದೃಷ್ಟಿಕೋನವನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+