ಸುಖೋಯ್‌ ಯುದ್ಧ ವಿಮಾನದಿಂದ ಬ್ರಹ್ಮೋಸ್‌ ಕ್ಷಿ‍‍ಪಣಿ ಯಶಸ್ವಿ ಉಡಾವಣೆ

ನವದೆಹಲಿ, ನವೆಂಬರ್ 22: ಭಾರತದ ರಕ್ಷಣಾ ಇಲಾಖೆ ಬುಧವಾರ ಹೊಸ ದಾಖಲೆ ಬರೆದಿದೆ. ಸುಖೋಯ್‌ ಯುದ್ಧ ವಿಮಾನದಿಂದ ಅತ್ಯಾಧುನಿಕ ಸೂಪರ್‌ಸಾನಿಕ್ ಬ್ರಹ್ಮೋಸ್‌ ಕ್ಷಿಪಣಿಯನ್ನು ಯಶಸ್ವೀ ಉಡಾವಣೆ ಮಾಡಲಾಗಿದೆ.

ಇದೇ ಮೊದಲ ಬಾರಿಗೆ ಭಾರತೀಯ ವಾಯು ಸೇನೆಯ ಸುಖೋಯ್‌-30ಎಂಕೆಐ ಯುದ್ಧ ವಿಮಾನದಿಂದ ಬ್ರಹ್ಮೋಸ್‌ (Air Launched Cruise Missile -ALCM) ಕ್ಷಿಪಣಿ ಉಡಾವಣೆ ಮಾಡಲಾಗಿದೆ. ಮೊದಲ ಉಡಾವಣೆಯೇ ಯಶಸ್ವಿಯಾಗಿದ್ದು ಭಾರತ ಹೊಸ ದಾಖಲೆ ನಿರ್ಮಿಸಿದೆ.

 BrahMos successfully test fired from Sukhoi; cruise missile triad achieved

ಬುಧವಾರ ನಡೆಸಲಾದ ಪರೀಕ್ಷಾರ್ಥ ಉಡಾವಣೆಯಲ್ಲಿ ಬ್ರಹ್ಮೋಸ್ ಕ್ಷಿಪಣಿ ಸುಖೋಯ್ ವಿಮಾನದಿಂದ ಶಬ್ದಾತೀತವಾಗಿ ಮುನ್ನುಗ್ಗಿ ಬಂಗಾಳ ಕೊಲ್ಲಿಯಲ್ಲಿ ನಿಗದಿ ಪಡಿಸಿದ್ದ ಗುರಿಯನ್ನು ಯಶಸ್ವಿಯಾಗಿ ತಲುಪಿತು.

ಕ್ಷಿಪಣಿ ಉಡಾವಣೆಗೆ ಎಚ್‌ಎಎಲ್‌ ಸುಖೋಯ್‌-30ಎಂಕೆಐ ಯುದ್ಧವಿಮಾನದಲ್ಲಿ ಕೆಲ ಬದಲಾವಣೆಗಳನ್ನು ಮಾಡಿತ್ತು. ಈ ಬದಲಾಣೆ ಮಾಡಲಾದ ಸುಖೋಯ್ ಮೂಲಕ 2.5 ಟನ್‌ ತೂಕದ ಗಂಟೆಗೆ 3,400 - 3,700 ಕಿ.ಮೀ. ಚಲಿಸುವ ಕ್ಷಿಪಣಿಯ ಪ್ರಯೋಗ ನಡೆಸಲಾಯಿತು.

ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಹಾಗೂ ರಷ್ಯಾದ ಎನ್‌ಪಿಒಎಂ ಜಂಟಿಯಾಗಿ ಈ ಕ್ಷಿಪಣಿ ಅಭಿವೃದ್ಧಿಪಡಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+