ಪ್ರಧಾನಿ ಮೋದಿ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ನಟಿ ಸನ್ನಿ ಲಿಯೋನ್
ಮುಂಬೈ, ಆ 13: ಬಾಲಿವುಡ್ ನಟಿ ಸನ್ನಿ ಲಿಯೋನ್, ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಹಿಂದಿಕ್ಕೆ ನಂಬರ್ ಸ್ಥಾನದಲ್ಲಿ ರಾರಾಜಿಸುತ್ತಿದ್ದಾರೆ.
'ಗೂಗಲ್ ಸರ್ಚ್' ನಲ್ಲಿ ಮೋದಿ ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್, ಶಾರೂಖ್ ಖಾನ್ ಅವರನ್ನು ಮೀರಿಸಿ, ನೆಟ್ಟಿಗರು ಸನ್ನಿ ಲಿಯೋನ್ ಅವರ ಬಗೆಗಿನ ಸುದ್ದಿಯನ್ನು ಹುಡುಕಾಟ ನಡೆಸಿದ್ದಾರೆ.
ಗೂಗಲ್ ಟ್ರೆಂಡ್ಸ್ ವಿಶ್ಲೇಷಣೆಯ ಪ್ರಕಾರ, ಸನ್ನಿ ಲಿಯೋನ್ ಗೆ ಸಂಬಂಧಿಸಿದ ಹೆಚ್ಚಿನ ಸರ್ಚ್ ಗಳು, ಆಕೆಯ ವಿಡಿಯೋಗಳಿಗೆ ಸಂಬಂಧಿಸಿದ್ದಾಗಿದ್ದು, ಇದರ ಜೊತೆಗೆ, ಅವರ ಬಯೋಪಿಕ್ ಸರಣಿ "ಕರೆನ್ಜಿತ್ ಕೌರ್: ದಿ ಅನ್ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್" ವಿಷಯಕ್ಕೆ ಸಂಬಂಧಿಸಿದ್ದಾಗಿದೆ.

ಗೂಗಲ್ ಮಾಹಿತಿಯ ಪ್ರಕಾರ, ಸನ್ನಿಯ ಬಗ್ಗೆ ಹೆಚ್ಚಿನ ಸರ್ಚ್ ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮಣಿಪುರ ಮುಂತಾದ ಭಾಗದಿಂದ ಬಂದಿದೆ. ಕಳೆದ ವರ್ಷವೂ ಸನ್ನಿ ಲಿಯೋನ್ ' ಮೋಸ್ಟ್ ಗೂಗಲ್ಡ್ ಸೆಲೆಬ್ರಿಟಿ' ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರು.
"ನನ್ನ ತಂಡ ಈ ವಿಷಯವನ್ನು ನನ್ನ ಗಮನಕ್ಕೆ ತಂದಿದೆ ನನ್ನ ಜೊತೆ ಇರುವ ಅಭಿಮಾನಿಗಳಿಗೆ ನಾನು ಇದನ್ನು ಅರ್ಪಿಸುತ್ತೇನೆ, ಇದೊಂದು ದೊಡ್ಡ ಭಾವನೆ" ಎಂದು ಸನ್ನಿ ಲಿಯೋನ್ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications