ವಿವಾದಾತ್ಮಕ ಟ್ವೀಟ್: 'ಚೀಚೀ'ಗೆ ಛೀ ಥೂ ಎಂದು ಬೈದ ಟ್ವಿಟ್ಟಿಗರು!

Posted By:
Subscribe to Oneindia Kannada

ಲಂಡನ್, ಜುಲೈ 24: ಬಾಲಿವುಡ್ ನಲ್ಲಿ 'ಚೀಚೀ' ಎಂದೇ ಕರೆಯಲ್ಪಡುವ ಹಿರಿಯ ನಟ ರಿಷಿ ಕಪೂರ್, ಮಹಿಳೆಯರ ಕ್ರಿಕೆಟ್ ತಂಡದ ಬಗ್ಗೆ ಆಕ್ಷೇಪಾರ್ಹವಾಗಿ ಟ್ವೀಟ್ ಮಾಡಿ ವಿವಾದಕ್ಕೊಳಗಾಗಿದ್ದಾರೆ.

ಪಂದ್ಯಕ್ಕೂ ಮುನ್ನ ಹಾಕಲಾಗಿದ್ದ ಈ ಟ್ವೀಟ್ ನಲ್ಲಿ ರಿಷಿ ಕಪೂರ್ ಅವರು, 2002ರಲ್ಲಿ ನಡೆದಿದ್ದ ನ್ಯಾಟ್ ವೆಸ್ಟ್ ಸೀರೀಸ್ ಗೆದ್ದಾಗ ಭಾರತ ಕ್ರಿಕೆಟ್ ತಂಡದ ನಾಯಕ ಸೌರವ್ ಗಂಗೂಲಿ ಲಾರ್ಡ್ಸ್ ಮೈದಾನದ ಬಾಲ್ಕನಿಯಲ್ಲಿ ತಮ್ಮ ಜೆರ್ಸಿ ಬಿಚ್ಚಿ ಕುಣಿದಾಡಿದ್ದ ಫೋಟೋ ಹಾಕಿದ್ದದ್ಲಲ್ಲದೆ, ಆ ಫೋಟೋ ಕೆಳಗೆ, 'ಇಂಥದ್ದೇ ಸಂಭ್ರಮಾಚರಣೆಯನ್ನು ಎದುರು ನೋಡುತ್ತಿದ್ದೇನೆ' ಎಂದು ಹೇಳಿದ್ದರು.

ಇದು ವಿವಾದಕ್ಕೆ ಕಾರಣವಾಯಿತು. ಈ ಬಗ್ಗೆ ಟ್ವಿಟ್ಟಿಗರು ಆಕ್ರೋಶ ವ್ಯಕ್ತಪಡಿಸಿ, ಮಹಿಳೆಯರ ಕ್ರಿಕೆಟ್ ತಂಡ ಹೀಗೆ ಜೆರ್ಸಿ ಬಿಚ್ಚಿ ಬಾಲ್ಕನಿಯಲ್ಲಿ ಕುಣಿಯುವುದನ್ನು ನಿರೀಕ್ಷಿಸುತ್ತಿದ್ದೀರಾ ಎಂದು ಕಿಡಿಕಾರಿದರು.

ತಕ್ಷಣ ರಿಷಿ ಎಚ್ಚೆತ್ತರಾದರೂ, ತಮ್ಮ ಸೋಲೊಪ್ಪಿಕೊಳ್ಳದ ಅವರು ''ಅಯ್ಯೋ ನಾನೇನು ತಪ್ಪು ಹೇಳಿದೆ. ನಾನು ಹೇಳಿದ್ದು, ಗಂಗೂಲಿಯವರು ಇಂಥ ಸಂಭ್ರಮವನ್ನು ಮತ್ತೆ ಆಚರಿಸಲಿ ಎಂದು. ಮಹಿಳಾ ಕ್ರಿಕೆಟಿಗರ ಬಗ್ಗೆ ನಾನು ಹಾಗೆ ಹೇಳಿಲ್ಲ. ಪ್ರಿಯ ಟ್ವಿಟ್ಟಿಗರೇ, ನಿಮ್ಮ ಆಲೋಚನೆಯಲ್ಲಿ ಹುಳುಕಿದೆ'' ಎಂದು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bollywood's senior actor Rishi Kapoor's tweet to wish Indian Woman's Cricket team ahead of Women's World Cup final on July 23, 2017, embedded in controversy.
Please Wait while comments are loading...