Get Updates
Get notified of breaking news, exclusive insights, and must-see stories!

ಬುಡಕಟ್ಟು ನಿವಾಸಿಗಳಿಗಾಗಿ ಬೋಟ್‌ ಅಂಬುಲೆನ್ಸ್‌ ಕಾರ್ಯಾಚರಣೆ, ಎಲ್ಲಿ ಗೊತ್ತಾ?

ಮಧ್ಯಪ್ರದೇಶ ನರ್ಮದಾ ತೀರದಲ್ಲಿ ವಾಸಿಸುವ ಬುಡಕಟ್ಟು ಜನರು ತುರ್ತು ಆರೋಗ್ಯ ಸೌಲಭ್ಯಗಳನ್ನು ಪಡೆಯಲು ವಿಂಧ್ಯಾಚಲ ಮತ್ತು ಸಾತ್ಪುರದ ಗುಡ್ಡಗಾಡು ಪ್ರದೇಶಗಳ ನಡುವೆ ಬೋಟ್ ಆಂಬ್ಯುಲೆನ್ಸ್ ಚಲಿಸುತ್ತದೆ.

ಶಿಮ್ಲಾ, ಮಾರ್ಚ್‌ 20: ಮಧ್ಯಪ್ರದೇಶದ ಧಾರ್, ಅಲಿರಾಜಪುರ ಮತ್ತು ಬರ್ವಾನಿ ಜಿಲ್ಲೆಗಳಲ್ಲಿ ನರ್ಮದಾ ನದಿಯ ದಡದಲ್ಲಿ ವಾಸಿಸುವ ಬುಡಕಟ್ಟು ಜನರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಬೋಟ್ ಆಂಬ್ಯುಲೆನ್ಸ್ ಯೋಜನೆಯನ್ನು ಪ್ರಾರಂಭಿಸಲಾಗಿದೆ.

ಈ ಜಿಲ್ಲೆಗಳಲ್ಲಿ ಮಧ್ಯಪ್ರದೇಶ ನರ್ಮದಾ ತೀರದಲ್ಲಿ ವಾಸಿಸುವ ಬುಡಕಟ್ಟು ಜನರು ತುರ್ತು ಆರೋಗ್ಯ ಸೌಲಭ್ಯಗಳನ್ನು ಪಡೆಯಲು ವಿಂಧ್ಯಾಚಲ ಮತ್ತು ಸಾತ್ಪುರದ ಗುಡ್ಡಗಾಡು ಪ್ರದೇಶಗಳ ನಡುವೆ ಬೋಟ್ ಆಂಬ್ಯುಲೆನ್ಸ್ ಚಲಿಸುತ್ತದೆ.

Boat ambulance operation in Madhya Pradesh for tribal residents

ನರ್ಮದಾ ಸಮಗ್ರ ನ್ಯಾಸ್ ಸಂಸ್ಥೆಯಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಇದು ಆರೋಗ್ಯ, ಶಿಕ್ಷಣ ಮತ್ತು ಕೃಷಿ ಸಂಬಂಧಿತ ಸೇವೆಗಳನ್ನು ಒದಗಿಸಲು ಕಳೆದ 15 ವರ್ಷಗಳಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರತಿಯೊಬ್ಬ ವ್ಯಕ್ತಿಗೂ ಉತ್ತಮ ಆರೋಗ್ಯ ಸೇವೆ ಒದಗಿಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಈ ಬಗ್ಗೆ ಮಾತನಾಡಿದ ಮಧ್ಯಪ್ರದೇಶ ಕ್ಯಾಬಿನೆಟ್ ಸಚಿವ ರಾಜವರ್ಧನ್ ಸಿಂಗ್ ದತ್ತಿಗಾಂವ್, "ನರ್ಮದಾ ಸಮಗ್ರ ನ್ಯಾಸ್ ಉತ್ತಮ ಕೆಲಸ ಮಾಡಿದೆ. ಕೆಲಸವನ್ನು ಮುಂದುವರಿಸಲು ಸ್ಫೂರ್ತಿ ನೀಡಿದ ಬಿಜೆಪಿಯ ಮಾಜಿ ರಾಜ್ಯಸಭಾ ಸಂಸದ ದಿವಂಗತ ಅನಿಲ್ ಕುಮಾರ್ ದವೆ ಅವರ ಪ್ರಯತ್ನವನ್ನು ನಾನು ನೆನಪಿಸಿಕೊಳ್ಳಲು ಬಯಸುತ್ತೇನೆ. 2011 ರಲ್ಲಿ ಈ ಉಪಕ್ರಮವನ್ನು ಪ್ರಾರಂಭಿಸಲಾಯಿತು ಮತ್ತು ಆ ಸಮಯದಲ್ಲಿ ಗ್ರಾಮಸ್ಥರು ಇದು ಯಶಸ್ವಿಯಾಗುವುದಿಲ್ಲ ಎಂದು ಭಯಪಟ್ಟರು. ಆದರೆ, ಅದು ಯಶಸ್ವಿಯಾಯಿತು ಮತ್ತು ಗ್ರಾಮಸ್ಥರು ಅದರ ಪ್ರಯೋಜನವನ್ನು ಪಡೆದರು ಎಂದು ಹೇಳಿದ್ದಾರೆ.

ಈ ಹೊಸ ಬೋಟ್ ಆಂಬ್ಯುಲೆನ್ಸ್ ಹೆಚ್ಚು ಸುಧಾರಿತವಾಗಿದ್ದು, ಇದು 1.5 ಪಟ್ಟು ಹೆಚ್ಚು ಜಾಗವನ್ನು ಹೊಂದಿದೆ. ಆಂಬ್ಯುಲೆನ್ಸ್ 40 ಎಚ್‌ಪಿ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು, ಅದು ಸದ್ದಿಲ್ಲದೆ ಚಲಿಸುತ್ತದೆ. ಆಂಬ್ಯುಲೆನ್ಸ್ ತನ್ನ ಮಾರ್ಗ ನಕ್ಷೆಯ ಪ್ರಕಾರ ಒಂದು ವಾರದಲ್ಲಿ ಸುಮಾರು 100 ಕಿಮೀ ವ್ಯಾಪ್ತಿಯನ್ನು ಕ್ರಮಿಸುತ್ತದೆ. ಅದರಲ್ಲಿ ಒಬ್ಬ ನಿವಾಸಿ ವೈದ್ಯರು ಇರುತ್ತಾರೆ, ಅಗತ್ಯ ಜೀವ ಉಳಿಸುವ ಸೇವೆಗಳನ್ನು ಒದಗಿಸಲಾಗುವುದು ಮತ್ತು ಅದರ ಐದು ದಿನಗಳ ಮಾರ್ಗವನ್ನು ಸಹ ಪೂರ್ವ ಯೋಜಿಸಲಾಗಿದೆ ಎಂದು ಅವರು ಹೇಳಿದರು.

ಆಂಬ್ಯುಲೆನ್ಸ್ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, 108 ಆಂಬ್ಯುಲೆನ್ಸ್ ಸೇರಿದಂತೆ ಸರ್ಕಾರದ ತಂಡವನ್ನು ಒಳಗೊಂಡಂತೆ ಎಲ್ಲಾ ಅಗತ್ಯ ಬೆಂಬಲವನ್ನು ಅವರಿಗೆ ನೀಡಲಾಗುವುದು ಎಂದು ಸಚಿವರು ಹೇಳಿದರು.

ಮೂರು ರಾಜ್ಯಗಳ ಗಡಿ ಇಲ್ಲಿ ಸೇರುತ್ತಿರುವುದರಿಂದ ಮಧ್ಯಪ್ರದೇಶ ಮಾತ್ರವಲ್ಲದೆ ಗುಜರಾತ್ ಮತ್ತು ಮಹಾರಾಷ್ಟ್ರದ ಜಿಲ್ಲೆಗಳಿಗೂ ಬೋಟ್ ಆಂಬ್ಯುಲೆನ್ಸ್‌ನಿಂದ ಪ್ರಯೋಜನವಾಗಲಿದೆ. ಬೋಟ್ ಆಂಬ್ಯುಲೆನ್ಸ್ ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ತುಂಬಾ ಸಹಾಯಕವಾಗಲಿದೆ ಎಂದು ಅವರು ಹೇಳಿದರು.

ಈ ಕಾರ್ಯಕ್ರಮ ಮೊಬೈಲ್ ಟವರ್‌ಗಳ ಅಲಭ್ಯತೆಯಿಂದಾಗಿ ನಾವು ಸರಿಯಾಗಿ ಸಂವಹನ ನಡೆಸದಿರುವ ಈ ಪ್ರದೇಶದಲ್ಲಿ ನಾವು ಸವಾಲನ್ನು ಎದುರಿಸುತ್ತೇವೆ. ಹಾಗಾಗಿ ಹಳೆ ಬೋಟ್‌ ನಲ್ಲಿ ತಾತ್ಕಾಲಿಕ ರೇಡಿಯೋ ಕೇಂದ್ರ ಸ್ಥಾಪಿಸಲು ಯೋಜನೆ ರೂಪಿಸಿದ್ದೇವೆ. ಪೊಲೀಸ್ ಇಲಾಖೆಯೊಂದಿಗೆ ಆವರ್ತನದ ಬಗ್ಗೆ ಚರ್ಚೆ ನಡೆಯುತ್ತಿದೆ. ಸಂವಹನವನ್ನು ಸುಧಾರಿಸಲು ಈ ಪ್ರದೇಶದಲ್ಲಿ ಕೆಲವು ಟವರ್‌ಗಳನ್ನು ಸ್ಥಾಪಿಸಲು ನಾವು ಬಿಎಸ್‌ಎನ್‌ಎಲ್‌ಗೆ ವಿನಂತಿಸಿದ್ದೇವೆ ಎಂದು ದತ್ತಿಗಾಂವ್ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+