ಕೃಷ್ಣಮೃಗ ಬೇಟೆ ಪ್ರಕರಣ: ಇಂದು ಸಲ್ಮಾನ್ ಜಾಮೀನು ಅರ್ಜಿ ವಿಚಾರಣೆ
ಜೋಧಪುರ, ಏಪ್ರಿಲ್ 06: ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ರನ್ನು ಜೋಧಪುರ ನ್ಯಾಯಾಲಯ ನಿನ್ನೆ(ಏ.5) ದೋಷಿ ಎಂದು ಪರಿಗಣಿಸಿದ ಬೆನ್ನಲ್ಲೇ ಅವರು ಇಲ್ಲಿನ ಸೆಶನ್ಸ್ ಕೋರ್ಟಿನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ.
1998 ರಲ್ಲಿ ಕೃಷ್ಣಮೃಗ ಬೇಟೆಯಾಡಿದ ಘಟನೆಗೆ ಸಂಬಂಧಿಸಿದಂತೆ ಬರೋಬ್ಬರಿ 20 ವರ್ಷಗಳ ನಂತರ ಸಲ್ಮಾನ್ ರನ್ನು ದೋಷಿ ಎಂದು ಪರಿಗಣಿಸಿ, 5 ವರ್ಷಗಳ ಜೈಲುಶಿಕ್ಷೆ ವಿಧಿಸಿತ್ತು.
1998 ರಲ್ಲಿ 'ಹಮ್ ಸಾಥ್ ಸಾಥ್ ಹೆ' ಚಿತ್ರದ ಚಿತ್ರೀಕರಣದ ವೇಳೆಯಲ್ಲಿ ನಡೆದ ಈ ಘಟನೆಯ ಸಂದರ್ಭದಲ್ಲಿ ಸಲ್ಮಾನ್ ಖಾನ್ ಅವರೊಂದಿಗಿದ್ದ ಸೈಫ್ ಅಲಿಖಾನ್, ಸೊನಾಲಿ ಬೇಂದ್ರೆ, ನೀಲಂ ಕೊಠಾರಿ ಮತ್ತು ಟಬು ಅವರನ್ನು ನಿರ್ದೋಷಿ ಎಂದು ಕೋರ್ಟು ಖುಲಾಸೆಗೊಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ನಿನ್ನೆಯೆಲ್ಲ ಸಲ್ಮಾನ್ ಖಾನ್ ಜೋಧಪುರ ಜೈಲಿನಲ್ಲೇ ಕಳೆದಿದ್ದರು.












Click it and Unblock the Notifications