ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಆಪಲ್ ಆಯ್ತು, ಈಗ ಬ್ಲಾಕ್‌ ಬೆರಿ ಉತ್ಪಾದನಾ ಘಟಕ

ಜಾಗತಿಕ ಮಾರುಕಟ್ಟೆಯಲ್ಲಿ ಮತ್ತೆ ಪ್ರಗತಿ ಸಾಧಿಸಲು ಭಾರತದ ಮಾರುಕಟ್ಟೆಯಲ್ಲಿ ನಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಮೇಕ್ ಇನ್‌ ಇಂಡಿಯಾ ಅಭಿಯಾನದ ಅಡಿ ಭಾರತದಲ್ಲಿ ಬ್ಲಾಕ್‌ಬೆರಿ ತನ್ನ ಉತ್ಪಾದನಾ ಘಟಕ ಆರಂಭಿಸಲಿದೆ.

By Ramesh
|
Google Oneindia Kannada News

ನವದೆಹಲಿ, ಫೆಬ್ರವರಿ. 06 : ಸ್ಯಾಮ್ ಸಂಗ್‌, ಆಪಲ್ ಫೋನುಗಳ ಭರಾಟೆಯಲ್ಲಿ ಮಂಕಾಗಿರುವ ಬ್ಲಾಕ್‌ಬೆರಿ ಆಂಡ್ರಾಯ್ಡ್ ಫೋನುಗಳ ಮೂಲಕ ಮಾರುಕಟ್ಟೆಯಲ್ಲಿ ಪ್ರಭುತ್ವ ಸಾಧಿಸಲು ಭಾರತವನ್ನು ವೇದಿಕೆಯಾಗಿಸಿಕೊಳ್ಳಲು ಬ್ಲಾಕ್‌ ಬೆರಿ ಮುಂದಾಗಿದೆ.

ಕೆನಡಾದ ಸ್ಮಾರ್ಟ್‌ಪೋನ್‌ ಕಂಪನಿ ಬ್ಲಾಕ್‌ ಬೆರಿಯು ಇನ್‌ಫ್ರಾಕಾಮ್ ಕಂಪೆನಿಯೊಂದಿಗಿನ ಒಪ್ಪಂದದೊಂದಿಗೆ 'ಮೇಕ್ ಇನ್‌ ಇಂಡಿಯಾ' ಅಭಿಯಾನದ ಅಡಿ ಶೀಘ್ರದಲ್ಲೇ ಭಾರತದಲ್ಲಿ ತನ್ನ ಉತ್ಪಾದನಾ ಘಟಕ ಆರಂಭಿಸಲಿದೆ.

ಇತ್ತೀಚೆಗೆ ಪ್ರತಿಷ್ಠಿತ ಆಪಲ್ ಐಫೋನ್ ಉತ್ಪಾದನಾ ಘಟಕವನ್ನು ಬೆಂಗಳೂರಿನಲ್ಲಿ ಕಾರ್ಯಾರಂಭ ಮಾಡುವುದಾಗಿ ಘೋಷಿಸಿತ್ತು. ಭಾರತ ಸೇರಿದಂತೆ ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶದಲ್ಲೂ ತನ್ನ ಮಾರುಕಟ್ಟೆ ಅಭಿವೃದ್ಧಿಪಡಿಸಿಕೊಳ್ಳಲು ಬ್ಲಾಕ್‌ ಬೆರಿ ಈ ಪ್ರಯತ್ನ ನಡೆಸಿದೆ. [ಐಟಿ ಸಿಟಿಗೆ ಮತ್ತೊಂದು ಗರಿಮೆ: ಆಪಲ್ ಐಒಎಸ್ ಘಟಕ]

BlackBerry to manufacture smartphones in India in partnership with Optiemus

ಭಾರತದಲ್ಲಿ ಅಧಿಕೃತ ಸೇವೆ ಪ್ರಾರಂಭಿಸಲು ನಿರ್ಧರಿಸಿರುವ ಬ್ಲಾಕ್‌ಬೆರಿ ಈ ಮೂಲಕ ತನ್ನ ಉದ್ಯಮವನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸಲು ಮುಂದಾಗಿದೆ.

ಸೆಕ್ಯುರಿಟಿ ಸಾಫ್ಟ್‌ವೇರ್‌, ಸೇವಾ ಮಳಿಗೆಗಳನ್ನು ಆಪ್ಟಿಮಸ್ ಜತೆ ಜಂಟಿ ಒಪ್ಪಂದದೊಂದಿಗೆ ಪ್ರಾರಂಭಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

'ಜಾಗತಿಕ ಮಾರುಕಟ್ಟೆಯಲ್ಲಿ ಮತ್ತೆ ಪ್ರಗತಿ ಸಾಧಿಸಲು ಭಾರತದ ಮಾರುಕಟ್ಟೆಯಲ್ಲಿ ನಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಮೇಕ್ ಇನ್‌ ಇಂಡಿಯಾ ಅಭಿಯಾನದ ಅಡಿ ಸೇವೆ ಒದಗಿಸಲು ಸಿದ್ಧರಾಗಿದ್ದೇವೆ ಎಂದು ಬ್ಲಾಕ್‌ಬೆರಿ ಉಪಾಧ್ಯಕ್ಷ ಅಲೆಕ್ಸ್‌ ಥರ್ಬರ್ ತಿಳಿಸಿದ್ದಾರೆ.

English summary
BlackBerry has announced its partnership with Optiemus Infracom Ltd for an agreement to license BlackBerry software and services for manufacturing BlackBerry Android handsets in more global markets including India, Sri Lanka, Nepal and Bangladesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X