ಕಾಂಗ್ರೆಸ್ ದರ್ಬಾರ್ ಅಂತ್ಯ, ಕೇಸರಿ ಪಥ ನಿರ್ಮಾಣ
ನವದೆಹಲಿ, ಡಿ.8: ಮುಂಬರುವ ಲೋಕಸಭೆ ಚುನಾವಣೆಗೆ ದಿಕ್ಸೂಚಿ ನೀಡುವ ಮಿನಿ ಮಹಾಸಮರ ಎಂದೇ ಕರೆಯಲಾಗುತ್ತಿರುವ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಪೈಕಿ ನಾಲ್ಕರಲ್ಲಿ ಬಿಜೆಪಿ ಅಭೂತಪೂರ್ವ ಸಾಧನೆ ದಾಖಲಿಸಿದೆ. ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಸಿಕ್ಕಿದೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಮತ್ತೆ ಅಧಿಕಾರದ ಗದ್ದುಗೆ ಏರಿದ್ದಾರೆ. ದೆಹಲಿ ಹಾಗೂ ಛತ್ತೀಸ್ ಗಢದಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿ ಸಿದ್ದತೆ ನಡೆಸಿದೆ.
ರಾಜಸ್ಥಾನದಲ್ಲಿಕಾಂಗ್ರೆಸ್ ಕೋಟೆಯನ್ನ ಛಿದ್ರಗೊಳಿಸಿರುವ ವಸುಂಧರಾ ರಾಜೆ ನೇತೃತ್ವದ ಕೇಸರಿ ಪಡೆ ಅಧಿಕಾರದ ಗದ್ದುಗೆ ಏರಿದೆ. ದೆಹಲಿಯಲ್ಲಿ ಅತಂತ್ರ ವಿಧಾನಸಭೆ ಸೂಚನೆ ಸಿಕ್ಕಿದ್ದು, 31ಕ್ಕೂ ಹೆಚ್ಚು ಸ್ಥಾನ ಪಡೆದಿರುವ ಬಿಜೆಪಿ ಮತ್ತು 25ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪೈಪೋಟಿ ನಡೆಸಿದೆ. ಇತ್ತ ಛತ್ತೀಸ್ ಗಡದಲ್ಲಿ ಆಡಳಿತರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಮಬಲದ ಹೋರಾಟ ನಡೆದಿದೆ.
ಆದರೆ, ಹದಿನೈದು ವರ್ಷ ರಾಷ್ಟ್ರ ರಾಜಧಾನಿ ದೆಹಲಿ ಅಧಿಕಾರದ ಗದ್ದುಗೆ ಮೇಲೆ ಪಾರುಪತ್ಯ ಮೆರೆದಿದ್ದ ಕಾಂಗ್ರೆಸ್ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಧೂಳೀಪಟವಾಗಿದೆ. ಸೋಲಿನ ನೈತಿಕ ಹೊಣೆಹೊತ್ತು ಮುಖ್ಯಮಂತ್ರಿ ಶೀಲಾ ದೀಕ್ಷಿತ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಸ್ಪಷ್ಟ ಬಹುಮತ ಪಡೆದಿದ್ದ ಕಾಂಗ್ರೆಸ್ ಬಿಜೆಪಿ ಮತ್ತು ಎಎಪಿ ಅಬ್ಬರಕ್ಕೆ ಸಿಲುಕಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಸಂಪುಟದ ಅನೇಕ ಸಚಿವರು ಮತ್ತು ಶಾಸಕರು ಸೋತು ಸುಣ್ಣವಾಗಿದ್ದಾರೆ. ದೆಹಲಿಯಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಇರುವುದು ಫಲಿತಾಂಶದಿಂದ ಸ್ಪಷ್ಟವಾಗಿದ್ದು, ಮಾಧ್ಯಮಗಳ ಸಮೀಕ್ಷೆಯು ನಿರೀಕ್ಷೆಯಂತೆ ಫಲಿತಾಂಶ ಬಂದಿದೆ.

ವಿಧಾನಸಭಾ ಚುನಾವಣೆಗಳಲ್ಲಿ ದೆಹಲಿಯಲ್ಲಿ ಶೇ.65, ಮಿಜೋರಾಂನಲ್ಲಿ ಶೇ.81, ರಾಜಸ್ಥಾನದಲ್ಲಿ ಶೇ.74 ಹಾಗೂ ಮಧ್ಯಪ್ರದೇಶ ಹಾಗೂ ಛತ್ತೀಸ್ ಗಡ ಗಳಲ್ಲಿ ಶೇ.70ರಷ್ಟು ಮತದಾನವಾಗಿತ್ತು. ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ ಗಡಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆಯಿತ್ತು, ದಿಲ್ಲಿಯಲ್ಲಿ ಹೊಸ ಪಕ್ಷ ಎಎಪಿಯ ಪ್ರವೇಶದೊಂದಿಗೆ ತ್ರಿಕೋನ ಹೋರಾಟ ನಡೆದಿತ್ತು.
ಒಂದೂವರೆ ದಶಕದಿಂದ ಕಾಂಗ್ರೆಸ್ ವಶದಲ್ಲಿದ್ದ ದೆಹಲಿ ಗದ್ದುಗೆಯನ್ನು ಬಿಜೆಪಿ ಮತ್ತು ಆಮ್ ಆದ್ಮಿ ಪಾರ್ಟಿ ಹಿಡಿಯಲು ಭಾರೀ ಪೈಪೋಟಿ ಆರಂಭಿಸಿವೆ. ಸ್ಪಷ್ಟ ಬಹುಮತ ಪಡೆದಿದ್ದ ಕಾಂಗ್ರೆಸ್ ಬಿಜೆಪಿ ಮತ್ತು ಎಎಪಿ ಅಬ್ಬರಕ್ಕೆ ಸಿಲುಕಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಸಂಪುಟದ ಅನೇಕ ಸಚಿವರು ಮತ್ತು ಶಾಸಕರು ಸೋತು ಸುಣ್ಣವಾಗಿದ್ದಾರೆ. ದೆಹಲಿಯಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಇರುವುದು ಫಲಿತಾಂಶದಿಂದ ಸ್ಪಷ್ಟವಾಗಿದ್ದು, ಮಾಧ್ಯಮಗಳ ಸಮೀಕ್ಷೆಯು ನಿರೀಕ್ಷೆಯಂತೆ ಫಲಿತಾಂಶ ಬಂದಿದೆ.ಶೀಲಾ ದೀಕ್ಷಿತ್ ಸಂಪುಟದ 10ಕ್ಕೂ ಹೆಚ್ಚು ಸಚಿವರು ಸೋಲಿನ ಸುಳಿಗೆ ಸಿಲುಕಿದ್ದರೆ, 20ಕ್ಕೂ ಹೆಚ್ಚು ಶಾಸಕರು ಪರಾಭವಗೊಂಡಿದ್ದಾರೆ.
ಅರವಿಂದ ಕೇಜ್ರಿವಾಲರ ಎಎಪಿ, ಕಠಿಣ ಸವಾಲಾಗಿ ಈ ಎರಡು ಪಕ್ಷಗಳ ನಿದ್ದೆಗೆಡಿಸಿದ್ದಂತೂ ಸತ್ಯ. ದೆಹಲಿಯ 70 ಸ್ಥಾನಗಳಿಗೆ 810 ಮಂದಿ ಸ್ಪರ್ಧಿಸಿದ್ದಾರೆ. ಕಳೆದ 5 ವರ್ಷಗಳಿಂದ ಮುಸ್ಲಿಂ ಅಭ್ಯರ್ಥಿಗಳ ಸಂಖ್ಯೆ ದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಾಗುತ್ತಿದ್ದು, ಈ ಬಾರಿ ಒಟ್ಟು 108 ಮುಸ್ಲಿಂ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಎಲ್ಲಾ ಪಕ್ಷಗಳು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. 2008ರಲ್ಲಿ 92 ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದರು.
ಕಾಂಗ್ರೆಸ್ ಹಾಗೂ ಎಎಪಿ ಎಲ್ಲ ಸ್ಥಾನಗಳಿಗೂ ಸ್ಪರ್ಧಿಸಿದ್ದರೆ, ಬಿಜೆಪಿ 66 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿ, ಉಳಿದವುಗಳನ್ನು ಮಿತ್ರಪಕ್ಷ ಎಸ್‌ಎಡಿಗೆ ಬಿಟ್ಟುಕೊಟ್ಟಿತ್ತು. 2008ರಲ್ಲಿ ಕಾಂಗ್ರೆಸ್ 43 ಸ್ಥಾನ ಗಳಿಸಿತ್ತು, ಬಿಜೆಪಿ 23 ಕ್ಷೇತ್ರದಲ್ಲಿ ಮಾತ್ರ ಜಯಭೇರಿ ಬಾರಿಸಿತ್ತು. 4 ಸ್ಥಾನ ಇತರೆ ಅಭ್ಯರ್ಥಿಗಳ ಪಾಲಾಗಿತ್ತು.
ಸಮಯ 6 : ಮಧ್ಯಪ್ರದೇಶದಲ್ಲಿ 124 ಸ್ಥಾನ ಪಡೆದಿರುವ ಬಿಜೆಪಿ ಕಳೆದ ಬಾರಿಗಿಂತ 22 ಅಧಿಕ ಸ್ಥಾನ ಗಳಿಸಿದೆ. ಕಾಂಗ್ರೆಸ್ 13 ಸ್ಥಾನ ಕಳೆದುಕೊಂಡು 39 ಸ್ಥಾನಕ್ಕೆ ತೃಪ್ತಿಪಟ್ಟಿದೆ. ಇನ್ನೂ 60ಕ್ಕೂ ಅಧಿಕ ಕ್ಷೇತ್ರ ಫಲಿತಾಂಶ ಹೊರಬೀಳಬೇಕಿದೆ.
ರಾಜಸ್ಥಾನದಲ್ಲಿ 157 ಸ್ಥಾನ ಪಡೆದಿರುವ ಬಿಜೆಪಿ ಕಳೆದ ಬಾರಿಗಿಂತ 83 ಹೆಚ್ಚು ಸ್ಥಾನ ಪಡೆದಿದೆ. ಕಾಂಗ್ರೆಸ್ 74 ಸ್ಥಾನ ಕಳೆದುಕೊಂಡು 19 ಸೀಟು ಮಾತ್ರ ಪಡೆದಿದೆ. ಇನ್ನೂ 10ಕ್ಕೂ ಹೆಚ್ಚು ಕ್ಷೇತ್ರದ ಫಲಿತಾಂಶ ಹೊರ ಬೀಳಬೇಕಿದೆ.
ಛತ್ತೀಸ್ ಗಢದಲ್ಲಿ ಬಿಜೆಪಿ 27 ಸೀಟು ಪಡೆದಿದ್ದರೆ, ಕಾಂಗ್ರೆಸ್ 31 ಸ್ಥಾನ ಗಳಿಸಿದೆ. ಇನ್ನೂ 31 ಕ್ಕೂ ಸ್ಥಾನದ ಫಲಿತಾಂಶ ಬಾಕಿ ಇದೆ.












Click it and Unblock the Notifications