ಬಿಜೆಪಿ-ಶಿವಸೇನಾ ಮಧ್ಯೆ ಭಿನ್ನಾಭಿಪ್ರಾಯ: ರಾಜೀನಾಮೆಗೆ ಮುಂದಾದ ಮಹಾರಾಷ್ಟ್ರ ಸಿಎಂ ಪುತ್ರ, ಸಂಸದ ಶ್ರೀಕಾಂತ್ ಶಿಂಧೆ
ಮುಂಬೈ, ಜೂನ್ 10: 2024 ರ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ-ಶಿವಸೇನಾ ಮೈತ್ರಿಗೆ ಧಕ್ಕೆ ಉಂಟಾಗಲಿರುವ ಮುನ್ಸೂಚನೆ ಕಾಣುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಅವರ ಪುತ್ರ ಹಾಗೂ ಶಿವಸೇನಾ ಸಂಸದ ಶ್ರೀಕಾಂತ್ ಶಿಂಧೆ ಅವರು ಬಿಜೆಪಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕರು ತಮ್ಮ ನಡೆಯನ್ನು ಬದಲಿಸಿಕೊಳ್ಳದಿದ್ದರೆ ರಾಜೀನಾಮೆ ನೀಡುತ್ತೇನೆಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
ಡೊಂಬಿವಿಲಿ ಪ್ರದೇಶದ ಸ್ಥಳೀಯ ಭಾರತೀಯ ಜನತಾ ಪಕ್ಷದ ನಾಯಕರು ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ ಎಂದು ಶ್ರೀಕಾಂತ್ ಶಿಂಧೆ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯ ಡೊಂಬಿವಿಲಿ ಪೂರ್ವ ಮಂಡಲದ ಅಧ್ಯಕ್ಷ ನಂದು ಜೋಶಿ ವಿರುದ್ಧ ಶ್ರೀಕಾಂತ್ ಶಿಂಧೆ ಅವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಸ್ಥಳೀಯ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದರು. ಬಿಜೆಪಿ ನಾಯಕರು ತಮ್ಮನ್ನು ದೂಷಿಸಿದ ನಂತರ ಶ್ರೀಕಾಂತ್ ಹೇಳಿಕೆ ಹೊರಬಿದ್ದಿದೆ.
ರಾಜಕೀಯ ದ್ವೇಷದ ಉದ್ದೇಶ ಈ ಕೃತ್ಯದ ಹಿಂದಿದೆ ಎಂದು ಸ್ಥಳೀಯ ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಶಿಂಧೆ ಪಾಳಯವನ್ನು ಚುನಾವಣೆಯಲ್ಲಿ ಬೆಂಬಲಿಸದಿರಲು ಸ್ಥಳೀಯ ಬಿಜೆಪಿ ಮುಖಂಡರು ಬುಧವಾರ ನಿರ್ಣಯ ಅಂಗೀಕರಿಸಿದ್ದಾರೆ.
ಬಿರುಕಿಗೆ ಕಾರಣವೇನು?
2019 ರ ಚುನಾವಣೆಯಲ್ಲಿ ಪಕ್ಷವು ಗೆಲ್ಲುವ ಲೋಕಸಭಾ ಸ್ಥಾನಗಳಲ್ಲಿ ಶಿಂಧೆ ಬಣದ ಸದಸ್ಯರು ಕಣಕ್ಕಿಳಿಯಲಿದ್ದಾರೆ ಎಂದು ಶ್ರೀಕಾಂತ್ ಘೋಷಿಸಿದ್ದಾರೆ. ಇದು ಬಿಜೆಪಿ ಹಾಗೂ ಶಿವಸೇನಾ ನಡುವಿನ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸಿದೆ. ಲೋಕಸಭಾ ಸದಸ್ಯರ ಸೂಚನೆ ಮೇರೆಗೆ ಜೋಶಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇದನ್ನು ದಾಖಲಿಸಿದ ಪೊಲೀಸ್ ಇನ್ಸ್‌ಪೆಕ್ಟರ್ ಶೇಖರ್ ಬಗಾಡೆ ಅವರನ್ನು ವರ್ಗಾವಣೆ ಮಾಡುವಂತೆ ಆಗ್ರಹಿಸಿ ಬಿಜೆಪಿ ಸ್ಥಳೀಯ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀಕಾಂತ್ ಶಿಂಧೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಶ್ರೀಕಾಂತ್ ಶಿಂಧೆ ಯಾರು?
ಸಿಎಂ ಶಿಂಧೆ ಅವರ ಪುತ್ರ ಶ್ರೀಕಾಂತ್ ಅವರು ಮಹಾರಾಷ್ಟ್ರದ ಕಲ್ಯಾಣ್ ಕ್ಷೇತ್ರದಿಂದ ಲೋಕಸಭಾ ಸಂಸದರಾಗಿದ್ದಾರೆ. ಕಲ್ಯಾಣ-ಡೊಂಬಿವಿಲಿ ಮಹಾನಗರ ಪ್ರದೇಶದ ಭಾಗವಾಗಿದೆ. ಮೂಳೆ ಶಸ್ತ್ರಚಿಕಿತ್ಸಕ ರಾಜಕಾರಣಿಯನ್ನು ಪಕ್ಷದ ಯುವ ಮುಖವಾಗಿ ಪೋಷಿಸಲಾಗುತ್ತಿದೆ ಎಂದು ವರದಿಯಾಗಿದೆ. ಇದು ಆದಿತ್ಯ ಠಾಕ್ರೆ ಅವರಿಗೆ ಪ್ರತ್ಯುತ್ತರವಾಗಿ ಶಿಂಧೆ ಬಣ ತಂತ್ರ ರೂಪಿಸಿದೆ.
ಕಲ್ಯಾಣ್‌ನಿಂದ ಎರಡು ಅವಧಿಯ ಸಂಸದರಾಗಿರುವ ಶ್ರೀಕಾಂತ್, ಶಿಂಧೆ ಕುಟುಂಬದ ಪ್ರಬಲ ನಾಯಕರಾಗಿ ಹೊರಹೊಮ್ಮಿದ್ದಾರೆ. ಅವರು ಪಕ್ಷದ ಸಾಂಸ್ಥಿಕ ವಿಷಯಗಳು ಮತ್ತು ರಾಜಕೀಯ ನಿರ್ವಹಣೆಯನ್ನು ನಿರ್ವಹಿಸುವುದರಿಂದ ಪಕ್ಷದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
36 ವರ್ಷದ ಸಂಸದ ತಮ್ಮ ತಂದೆಯ ಮಹತ್ವಾಕಾಂಕ್ಷಿ ಯೋಜನೆಗಳಾದ ಮುಂಬೈ ನಗರದ ಸುಂದರೀಕರಣ ಮತ್ತು ಇತರ ಸಮಸ್ಯೆಗಳನ್ನು ಮುನ್ನಡೆಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅವರು ತಮ್ಮ ತಂದೆಯ ನಿರ್ಧಾರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ನವದೆಹಲಿಯಲ್ಲಿ ಶಿಂಧೆ ಅವರ ಪಾಯಿಂಟ್ ಪರ್ಸನ್ ಆಗಿ ಕಾರ್ಯನಿರ್ವಹಿಸುತ್ತಾರೆ ಎಂದು ವರದಿಯಾಗಿದೆ.












Click it and Unblock the Notifications