Madhya Pradesh: ಕೇಂದ್ರ ಸಚಿವರಿಗೂ ವಿಧಾನಸಭೆ ಟಿಕೆಟ್ ಘೋಷಣೆ!
ಲೋಕಸಭೆ ಚುನಾವಣೆಗೆ ಮೊದಲು ಮಧ್ಯಪ್ರದೇಶ ಚುನಾವಣೆ ದಂಗಲ್ ನಡೆಯಲಿದೆ. ಈ ರಾಜ್ಯದಲ್ಲಿ ಗೆಲುವು ಸಾಧಿಸುವುದು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು ಗೆಲುವಿಗಾಗಿ ಶಪಥ ಮಾಡಿವೆ. ಇದೀಗ ಬಿಜೆಪಿ ಮಧ್ಯಪ್ರದೇಶ ಚುನಾವಣೆಗೆ ತನ್ನ ಎರಡನೇ ಪಟ್ಟಿ ರಿಲೀಸ್ ಮಾಡಿದೆ. ಕೇಂದ್ರ ಸಚಿವರಿಗೂ ಟಿಕೆಟ್ ಕೊಟ್ಟು ಅಖಾಡದಲ್ಲಿ ಅದೃಷ್ಟದ ಪರಿಕ್ಷೆಗೆ ಕಮಲ ಪಾಳಯ ಸನ್ನದ್ಧವಾಗಿದೆ.
ಮಧ್ಯಪ್ರದೇಶ ಗೆಲುವಿಗೆ ಬಿಜೆಪಿ ವರಿಷ್ಠರೇ ಪಣತೊಟ್ಟು ನಿಂತಿದ್ದು, ಪ್ರಧಾನಿ ಮೋದಿ & ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಘಟಾನುಘಟಿ ನಾಯಕರೇ ಪ್ರಚಾರ ಅಖಾಡ ಪ್ರವೇಶಿಸಿದ್ದಾರೆ. ಇದೀಗ ಬಿಜೆಪಿ ಹೈಕಮಾಂಡ್ ಇನ್ನೊಂದು ಸರ್ಪ್ರೈಸ್ ನೀಡಿದ್ದು, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಆಹಾರ ಸಂಸ್ಕರಣೆ ರಾಜ್ಯ ಸಚಿವ ಪ್ರಹ್ಲಾದ್ ಪಟೇಲ್ ಸೇರಿ ಒಟ್ಟು ಮೂವರು ಕೇಂದ್ರ ಸಚಿವರು ಹಾಗೂ ಸಂಸದರಿಗೆ ಅವಕಾಶ ಕಲ್ಪಿಸಿದೆ. ಹೀಗಾಗಿ ತೋಮರ್ ಅವರು ದಿಮಾನಿ ಕ್ಷೇತ್ರದಿಂದ ಹಾಗೂ ಪ್ರಹ್ಲಾದ್ ಪಟೇಲ್ ನರಸಿಂಘ್‌ಪುರದಿಂದ ಸ್ಪರ್ಧೆ ಮಾಡಲಿದ್ದಾರೆ.

ಕಾಂಗ್ರೆಸ್ ವಿರುದ್ಧ ತೊಡೆತಟ್ಟಿದ ಬಿಜೆಪಿ
ಕೇಂದ್ರ ಸಚಿವ ಸಂಪುಟದಲ್ಲಿ ಸಚಿವರಾಗಿರುವ ಹಿರಿಯ ನಾಯಕರನ್ನ ಕಣಕ್ಕಿಳಿಸುವ ನಿರ್ಧಾರ ಬಿಜೆಪಿ ಹೈಕಮಾಂಡ್ ನಾಯಕರದ್ದು. ಈ ಮೂಲಕ ಕಾಂಗ್ರೆಸ್ ವಿರುದ್ಧ ಬಿಜೆಪಿ ಲೀಡರ್ಸ್ ರಣತಂತ್ರ ರೂಪಿಸುವ ಮುನ್ಸೂಚನೆ ಸಿಕ್ಕಿದೆ. ಗ್ರಾಮೀಣಾಭಿವೃದ್ಧಿ ಖಾತೆಯ ರಾಜ್ಯ ಸಚಿವ ಫಗ್ಗನ್ ಸಿಂಗ್ ಕುಲಸ್ತೆ ಕೂಡ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು ನಿವಾಸ್ ಕ್ಷೇತ್ರದಿಂದ ಅಖಾಡಕ್ಕೆ ಇಳಿಯಲಿದ್ದಾರೆ. ಹೀಗೆ ಕೇಂದ್ರ ಸಚಿವರನ್ನು ಅಖಾಡಕ್ಕೆ ಇಳಿಸುವ ಮೂಲಕ, ಕಾಂಗ್ರೆಸ್ ವಿರುದ್ಧ ತೊಡೆತಟ್ಟಿದೆ ಕಮಲ ಪಾಳಯ.
Union Minister Narendra Singh Tomar to contest from Dimani, party MP Rakesh Singh to contest from Jabalpur West, Union Minister Faggan Singh Kulaste to contest from Niwas, Union Minister Prahlad Singh Patel to contest from Narsingpur and Kailash Vijayvargiya to contest from… https://t.co/ZtiNhMub43
— ANI (@ANI) September 25, 2023
ಕೇಂದ್ರ ಸಚಿವರು ಮಾತ್ರವಲ್ಲ, ಸಂಸದರಾದ ಗಣೇಶ್ ಸಿಂಗ್, ರಾಕೇಶ್ ಸಿಂಗ್, ರಿತಿ ಪಾಠಕ್ ಅವರಿಗೆ ಕೂಡ ಟಿಕೆಟ್ ನೀಡಲಾಗಿದೆ. ಹೊಶಂಗಾಬಾದ್ ಸಂಸದ ಉದಯ್ ಪ್ರತಾಪ್ ಸಿಂಗ್ ಅವರಿಗು ಕೂಡ ಟಿಕೆಟ್ ನೀಡಲಾಗಿದೆ. ಈ ಮೂಲಕ ಬಿಜೆಪಿ 2ನೇ ಪಟ್ಟಿಯಲ್ಲಿ ಒಟ್ಟು 39 ಅಭ್ಯರ್ಥಿಗಳಿದ್ದು, ಹಾಗೇ 6 ಮಹಿಳೆಯರು ಕೂಡ ಈ ಪಟ್ಟಿಯಲ್ಲಿದ್ದಾರೆ. ಈ ಮೂಲಕವೇ ಬಿಜೆಪಿ ತನ್ನ ರಣತಂತ್ರ ಬದಲಿಸಿ, ಮಧ್ಯಪ್ರದೇಶದಲ್ಲಿ ಅಧಿಕಾರ ಉಳಿಸಿಕೊಳ್ಳಲು ಸಿದ್ಧತೆ ನಡೆಸಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಬಂದ ನಂತರ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಯಾಗಿದೆ. ಅದ್ರಲ್ಲು ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕ ಚುನಾವಣೆ ರಿಸಲ್ಟ್ ಬೂಸ್ಟರ್ ಡೋಸ್ ಕೊಟ್ಟಿದೆ. ಈ ಹೊತ್ತಲ್ಲಿ ಮಧ್ಯಪ್ರದೇಶ ವಿಧಾನಸಭೆ ಎಲೆಕ್ಷನ್ ಕೂಡ ಹತ್ತಿರವೇ ಇದ್ದು, ಭಾರಿ ಕುತೂಹಲ ಕೆರಳಿಸಿದೆ. ಯಾರು ಗೆಲ್ಲಬಹುದು ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಎರಡೂ ಪಕ್ಷದ ನಾಯಕರು ಪ್ರಯತ್ನಿಸುತ್ತಿದ್ದು, ಬಿಜೆಪಿ ವರಿಷ್ಟರು ಖುದ್ದಾಗಿ ಅಖಾಡ ಪ್ರವೇಶಿಸಿ ಪ್ರಚಾರ ನಡೆಸುತ್ತಿದ್ದಾರೆ. ಹೀಗಾಗಿ ಸೋಲು ಗೆಲುವಿನ ಲೆಕ್ಕಾಚಾರದ ನಡುವೆ ಅದೃಷ್ಟದ ಆಟದಲ್ಲಿ ಮತದಾರ ಯಾರಿಗೆ ಒಲಿಯುತ್ತಾನೆ? ಅಂತಾ ಕಾದು ನೋಡಬೇಕಿದೆ.












Click it and Unblock the Notifications