Rekha Gupta: ಕೆಲವೇ ಕ್ಷಣಗಳಲ್ಲಿ 4ನೇ ಮಹಿಳಾ ಸಿಎಂ ಆಗಿ ರೇಖಾ ಗುಪ್ತಾ ಅಧಿಕಾರ ಸ್ವೀಕಾರ!
ದೆಹಲಿ, ಫೆಬ್ರವರಿ 20: ದೆಹಲಿಯಲ್ಲಿ 27 ವರ್ಷದ ಬಳಿಕ ಗೆದ್ದು ಬೀಗಿದ ಬಿಜೆಪಿಯು ಅಚ್ಚರಿಯ ರೀತಿಯಲ್ಲಿ ಮಹಿಳಾ ಶಾಸಕಿಯನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಿದೆ. ಎಬಿವಿಬಿಯಿಂದ ಮುನ್ನೆಲೆಗೆ ಬಂದು ರಾಜಕೀಯದಲ್ಲಿ ನೆಲೆ ಕಂಡು ಕೊಂಡು ಮಹಿಳೆ ರೇಖಾ ಗುಪ್ತಾ ಅವರಿಗೆ ಮುಖ್ಯಮಂತ್ರಿ ಪಟ್ಟಿ ನೀಡಿದೆ. ಇವರು ಇಂದು ಗುರುವಾರ (ಫೆಬ್ರವರಿ 20) ದೆಹಲಿ ನಾಲ್ಕನೇ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಹೌದು, ಈ ಹಿಂದೆಯು ಎಎಪಿಯಿಂದ ಅತಿಶಿ ಮರ್ಲೆನಾ ಅವರು ಮುಖ್ಯಮಂತ್ರಿ ಆಗಿದ್ದರು. ಅದರ ನಂತರ ಅಧಿಕಾರಕ್ಕೆ ಬಂದ ಬಿಜೆಪಿಯು ನಾಯಕಿ ರೇಖಾ ಗುಪ್ತಾ ಅವರಿಗೆ ಸಿಎಂ ಸ್ಥಾನ ನೀಡಿದೆ. ಇದು ಕೆಲವರಿಗೆ ಭಾರಿ ಅಚ್ಚರಿಸಿದೆ. ಇಂದು ಸಿಎಂ ಪ್ರಮಾಣ ವಚನ ಜೊತೆಗೆ ಇಬ್ಬರು ಉಪಮುಖ್ಯಮಂತ್ರಿಗಳು ಹಾಗೂ ಹಲವು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ನಡೆಯಲಿದೆ.

27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರತೀಯ ಜನತಾ ಪಕ್ಷದ ಆಡಳಿತ ಆರಂಭಕ್ಕೆ ಅಧಿಕೃತ ಮುದ್ರೆ ಇಂದು ಬೀಳಲಿದೆ. ರೇಖಾ ಗುಪ್ತಾ ಅವರ ಬೆಂಬಲಿಗರ ಸಂತೋಷ, ಸಂಭ್ರಮ ಮುಗಿಲು ಮುಟ್ಟಿದೆ. ಇನ್ನೂ ಈ ಕಾರ್ಯಕ್ರಮ, ಕೇಂದ್ರ ಬಿಜೆಪಿ ಪ್ರಮುಖ ನಾಯಕರು, ಗಣ್ಯರು, ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ದೆಹಲಿಯಲ್ಲಿ ಮಹಿಳಾ ಸಿಎಂ ಆಡಳಿತ ಬಗ್ಗೆ ಕೂತುಹಲದಲ್ಲಿದ್ದಾರೆ. ಅಲ್ಲದೇ ಈ ಹಿಂದೆ ಕಾಂಗ್ರೆಸ್, ಎಎಪಿಯಿಂದ ಮಹಿಳಾ ಸಿಎಂಗಳು ಇಲ್ಲಿ ಅಧಿಕಾರ ನಡೆಸಿದ್ದಾರೆ. ಬಿಜೆಪಿಯಿಂದ ಮೊದಲ ಬಾರಿಗೆ ಮಹಿಳಾ ಸಿಎಂ ಅಧಿಕಾರ ನಡೆಸಲಿದ್ದಾರೆ. ಚುನಾವಣೆ ಮೊದಲು ನೀಡಿದ್ದ ಹಲವು ಭರವಸೆಗಳು ಸಾಕಾರಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ದೆಹಲಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 70 ಸೀಟುಗಳಿಗೆ 48 ಬಿಜೆಪಿ ಪಾಲಾದರೆ, 20 ಆಮ್ ಆದ್ಮಿ ಪಕ್ಷದ ಪಾಲಾಗಿವೆ. ಕಾಂಗ್ರೆಸ್ ಗೆ ಹ್ಯಾಟ್ರಿಕ್ ಸೋಲಾಗಿದೆ.












Click it and Unblock the Notifications