'ಕಾಂಗ್ರೆಸ್ ಮುಕ್ತ ಕೇರಳ' ನಿರ್ಮಾಣಕ್ಕೆ ಅಮಿತ್ ಶಾ ಕರೆ
ಕೊಲ್ಲಂ(ಕೇರಳ), ಸೆ.27: ಕೇರಳ ಪ್ರವಾಸದಲ್ಲಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು 'ದೇವರ ನಾಡಲ್ಲಿ' ಮಿಂಚಿನ ಸಂಚಲನ ಉಂಟು ಮಾಡಿದ್ದಾರೆ.
ಈ ನಡುವೆ ಶಾ ಅವರು ಶನಿವಾರದಂದು ತಮ್ಮದೇ ಆದ ಅಧಿಕೃತ ವೆಬ್ ಸೈಟ್ ಹುಟ್ಟಿಹಾಕಿದ್ದಾರೆ. ಈ ವೆಬ್ ಸೈಟ್ ನ ಪ್ರಪ್ರಥಮ ಲೇಖನವನ್ನು ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾರ್ವಕರ್ ಅವರಿಗೆ ಅರ್ಪಿಸಿದ್ದಾರೆ.
ಬ್ರಿಟಿಷರಿಂದ ಸಂಕಷ್ಟಕ್ಕೀಡಾಗಿ ಸಾವರ್ಕರ್ ಅವರು ಪಟ್ಟ ಯಾತನೆ ಬಗ್ಗೆ ನೆನೆದರೂ ಈಗಲೂ ಕಣ್ಣಾಲಿಗಳು ತುಂಬಿಬರುತ್ತವೆ. ಸ್ವಾತಂತ್ರ್ಯ ಬಂದ ನಂತರ ಕೂಡಾ ಸಾವರ್ಕರ್ ಅವರಿಗೆ ನೆಮ್ಮದಿ ಇರಲಿಲ್ಲ. ಮಹಾತ್ಮಾ ಗಾಂಧೀಜಿ ಅವರ ಹತ್ಯೆಯ ಅರೋಪ ಹೊರೆಸಲಾಗಿತ್ತು ಎಂದು ಶಾ ಹೇಳಿಕೊಂಡಿದ್ದಾರೆ.
ಅಮಿತ್ ಶಾ ಅವರ ವೆಬ್ ಸೈಟ್ (www.amitshah.co.in) ಮೂಲಕ ಜನರ ಜೊತೆ ಹೆಚ್ಚಿನ ರೀತಿಯಲ್ಲಿ ಸ್ಪಂದಿಸುವ ಯೋಜನೆ ಹಾಕಿಕೊಂಡಿದ್ದಾರೆ ಎಂದು ಬಿಜೆಪಿ ಕೇಂದ್ರ ಹೇಳಿದೆ.
ದಕ್ಷಿಣ ಭಾರತದ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಕರ್ನಾಟಕವನ್ನು ಹೆಬ್ಬಾಗಿಲು ಮಾಡಿಕೊಂಡು ತನ್ನ ಕಾರ್ಯಚಟುವಟಿಕೆ ಆರಂಭಿಸಿರುವುದನ್ನು ಸ್ಮರಿಸಬಹುದು. ಇತ್ತೀಚಿನ ಬಿಬಿಎಂಪಿ ಚುನಾವಣೆಯಲ್ಲಿ ಗೆಲುವು ಸಾಧಿಸಿದರೂ ಮೇಯರ್ ಪಟ್ಟ ಪಡೆಯುವಲ್ಲಿ ಬಿಜೆಪಿ ವಿಫಲವಾಗಿತ್ತು. ಈಗ ಕೇರಳದತ್ತ ಮುಖ ಮಾಡಿರುವ ಶಾ ಅವರು ಭಾನುವಾರ ಕೊಲ್ಲಂ ಹಾಗೂ ತ್ರಿಸ್ಸೂರಿನಲ್ಲಿ ಭಾಷಣ ಮಾಡಲಿದ್ದಾರೆ.
ದಕ್ಷಿಣ ಭಾರತ ರಾಜ್ಯಗಳಲ್ಲಿ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಾಗುವುದು. ಪಶ್ಚಿಮ ಬಂಗಾಳ, ಒರಿಸ್ಸಾ, ಅಸ್ಸಾಂ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣಗಳಲ್ಲಿ ಪಕ್ಷ ಸಂಘಟಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ನಮ್ಮ ಮುಂದಿನ ಗುರಿ ಎಂದಿದ್ದಾರೆ.

ಸಿಪಿಐ ಎಂ ಹಾಗೂ ಕಾಂಗ್ರೆಸ್ ವಿರುದ್ಧ ಕಿಡಿ
ಸಿಪಿಐ ಎಂ ಹಾಗೂ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ ಅಮಿತ್ ಶಾ ಅವರು ಬಡತನ ನಿರ್ಮೂಲನೆ, ಸ್ವಚ್ಛ ಕೇರಳಕ್ಕೆ ಕತೆ ನೀಡಿದರು.
|
ಬಿಜೆಪಿ ಕೇರಳದಿಂದಶಾಗೆ ಭರ್ಜರಿ ಸ್ವಾಗತ
ಬಿಜೆಪಿ ಕೇರಳದಿಂದ ಶಾಗೆ ಭರ್ಜರಿ ಸ್ವಾಗತ ಸಿಕ್ಕಿದೆ.
|
ಕೇರಳದಲ್ಲಿ ಭಾಷಣ ಕೇಳಲು ಸೇರಿರುವ ಜನಸ್ತೋಮ
ಕೇರಳದಲ್ಲಿ ಅಮಿತ್ ಶಾ ಭಾಷಣ ಕೇಳಲು ಸೇರಿರುವ ಜನಸ್ತೋಮ
|
ಅಮಿತ್ ಶಾ ಕಾರ್ಯಕ್ರಮದ ಬಗ್ಗೆ ಸ್ಥಳೀಯರ ಪ್ರತಿಕ್ರಿಯೆ
ಅಮಿತ್ ಶಾ ಕಾರ್ಯಕ್ರಮಕ್ಕೆ ಸಿಕ್ಕಿರುವ ಪ್ರತಿಕ್ರಿಯೆಗೆ ಅಚ್ಚರಿ ವ್ಯಕ್ತಪಡಿಸಿರುವ ಸ್ಥಳೀಯರು.
|
ಮಾತಾ ಅಮೃತನಂದಮಯಿ ಕಾರ್ಯಕ್ರಮದಲ್ಲಿ ಶಾ
ಮಾತಾ ಅಮೃತನಂದಮಯಿ ಅವರ 62ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಶಾ ಉಪಸ್ಥಿತಿ. ಮಾತಾ ಅಮೃತನಂದಮಯಿ ಅವರಿಂದ ಸ್ವಚ್ಛ ಭಾರತ ಹಾಗೂ ನಮಾಮಿ ಗಂಗೆ ಕಾರ್ಯಕ್ರಮಕ್ಕೆ ಸಿಕ್ಕಿರುವ ಆರ್ಥಿಕ ನೆರವನ್ನು ಸ್ಮರಿಸಿದ ಶಾ.
ಕೊಲ್ಲಂನಲ್ಲಿ ಅಮಿತ್ ಶಾ ಭಾಷಣ
ಕೊಲ್ಲಂನ ಕಂಟೋನ್ಮೆಂಟ್ ಮೈದಾನದಲ್ಲಿ ಅಮಿತ್ ಶಾ ಅವರ ಭಾಷಣದ ವಿಡಿಯೋ
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications