ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ವೆ ಆಗಿದೆ, ಜಶೋದಾಬೆನ್ ನನ್ನ ಹೆಂಡ್ತಿ: ನರೇಂದ್ರ ಮೋದಿ!

By Srinath
|
Google Oneindia Kannada News

ವಡೋದರಾ, ಏ.10: ಪ್ರಜಾಪ್ರಭುತ್ವದ ಮಹತ್ವವೇ ಅಂತಹುದು. ಸುಮಾರು ವರ್ಷಗಳಿಂದ ಮರೆಮಾಚಿದ್ದ ಬಹಿರಂಗ ಸತ್ಯವೊಂದು ಚುನಾವಣೆ ಸಂದರ್ಭದಲ್ಲಿ ಜಗಜ್ಜಾಹೀರಾಗಿದೆ. ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ವಡೋದರಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಿನ್ನೆ ನಾಮಪತ್ರ ಸಲ್ಲಿಸುವಾಗ ತಮ್ಮ ಅಫಿಡವಿಟ್ ನಲ್ಲಿ 'ತಾನು ಮದುವೆಯಾಗಿದ್ದು, ನನ್ನ ಪತ್ನಿಯ ಹೆಸರು ಜಶೋದಾಬೆನ್' ಎಂದು ಘೋಷಿಸಿದ್ದಾರೆ.

17 ನೆಯ ವರ್ಷಕ್ಕೇ ನನ್ನದೇ ವಯಸ್ಸಿನ ಬಾಲಕಿಯ ಜತೆ ಮದುವೆಯಾಗಿದ್ದೇನೆ. ಜಶೋದಾಬೆನ್ (Jashodaben) ಹೆಸರಿನ ಆಕೆ ನನ್ನೂರಾದ ವಡ್ನಾಗರದಿಂದ 35 ಕಿಮೀ ದೂರದಲ್ಲಿರುವ ಬ್ರಹ್ಮನವಾಡಾ ಗ್ರಾಮದಲ್ಲಿ ನಿವೃತ್ತ ಶಿಕ್ಷಕಿಯಾಗಿ ಜೀವನ ನಡೆಸುತ್ತಿದ್ದಾರೆ ಎಂದು ತಮ್ಮ ಅಫಿಡವಿಟ್ ನಲ್ಲಿ ಮೋದಿ ಪ್ರಮಾಣ ಮಾಡಿದ್ದಾರೆ.

ಮೋದಿ ಮದುವೆ ಕಾಲಂ ಈಗ ಭರ್ತಿಯಾಯ್ತು

ಮೋದಿ ಮದುವೆ ಕಾಲಂ ಈಗ ಭರ್ತಿಯಾಯ್ತು

ಗಮನಾರ್ಹವೆಂದರೆ 63 ವರ್ಷದ ಮೋದಿ ಅವರು ವಿಧಾನಸಭಾ ಚುನಾವಣೆಗಳ ವೇಳೆ ಸಲ್ಲಿಸುತ್ತಿದ್ದ ಅಫಿಡವಿಟ್ ನಲ್ಲಿ ಮದುವೆ ಎಂಬ ಕಾಲಂನಲ್ಲಿ ಏನನ್ನೂ ನಮೂದಿಸದೆ ಖಾಲಿ ಬಿಡುತ್ತಿದ್ದರು. ವಿರೋಧ ಪಕ್ಷಗಳಿಗೆ ಇದೇ ಬಹುದೊಡ್ಡ ಅಸ್ತ್ರವಾಗಿತ್ತು. ಕಾಕತಾಳೀಯವೋ ಎಂಬಂತೆ ನಿನ್ನೆ ಸಹ ಸೋನಿಯಾ ಗಾಂಧಿ ಮತ್ತು ಎಚ್ ಡಿ ದೇವಗೌಡ ಅವರುಗಳು ಮೋದಿ ಮೇಲೆ ಸಮಾ ಮುಗಿಬಿದ್ದಿದ್ದರು. ಇದೀಗ ಆಸ್ತಿವ ವಿವರ ಸಲ್ಲಿಸುವ ಅಫಿಡವಿಟ್ ನಲ್ಲಿ ತಮ್ಮ ಮದುವೆ ಮತ್ತು ಪತ್ನಿಯ ಹೆಸರನ್ನು ಪ್ರಸ್ತಾಪಿಸುವ ಮೂಲಕ ಬಹುದೊಡ್ಡ ಆಸ್ತಿ ಘೋಷಿಸಿದಂತಾಗಿದೆ.

ಮೋದಿ ಪತ್ನಿ ಜಶೋದಾಬೆನ್ ಆಸ್ತಿ ವಿವರ ಗೊತ್ತಿಲ್ಲ

ಮೋದಿ ಪತ್ನಿ ಜಶೋದಾಬೆನ್ ಆಸ್ತಿ ವಿವರ ಗೊತ್ತಿಲ್ಲ

Representation of the People Act, 1951 ಪ್ರಕಾರ ಪ್ರತಿಯೊಬ್ಬ ಅಭ್ಯರ್ಥಿಯೂ ತಮ್ಮ ಪತ್ನಿಯ ಹೆಸರಿನಲ್ಲಿರುವ ಆಸ್ತಿ ವಿವರವನ್ನು ಘೋಷಿಸುವುದು ಕಡ್ಡಾಯ. ಅದರಂತೆಯೇ ತಮ್ಮ nomination formನಲ್ಲಿ ಮೋದಿ ಕೊನೆಗೂ ತಮ್ಮ ಪತ್ನಿಯ ವಿವರ ನೀಡಿದ್ದಾರೆ. ಆದರೆ ಅದರಲ್ಲಿ ಆಸ್ತಿ ವಿವರ ನಮೂದಿಸಿಲ್ಲ. ಏಕೆಂದರೆ ತಮ್ಮ ಪತ್ನಿ ಜಶೋದಾಬೆನ್ ಅವರ ಆದಾಯ ವಿವರ, ಆದಾಯ ತೆರಿಗೆ ಪಾವತಿ ವಿವರ ಹಾಗೂ ಪ್ಯಾನ್ ಕುರಿತಾದ ಮಾಹಿತಿ ತಮ್ಮ ಬಳಿ ಇಲ್ಲವೆಂದು ಮೋದಿ ತಿಳಿಸಿದ್ದಾರೆ.

ಮೋದಿ ಮದುವೆ ತಕರಾರು PIL ಸುಪ್ರೀಂಕೋರ್ಟಿನಲ್ಲಿ ತಿರಸ್ಕೃತವಾಗಿತ್ತು

ಮೋದಿ ಮದುವೆ ತಕರಾರು PIL ಸುಪ್ರೀಂಕೋರ್ಟಿನಲ್ಲಿ ತಿರಸ್ಕೃತವಾಗಿತ್ತು

2012ರ ವಿಧಾನಸಭಾ ಚುನಾವಣೆಯಲ್ಲಿ ಮಣಿನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮೋದಿ ಅವರು ನಾಮಪತ್ರ ಸಲ್ಲಿಸುವಾಗ ಮದುವೆ ಕಾಲಂ ಅನ್ನು ಖಾಲಿ ಬಿಟ್ಟಿರುವುದನ್ನು ಆಕ್ಷೇಪಿಸಿ, ಸುಪ್ರೀಂಕೋರ್ಟಿನಲ್ಲಿ PIL ಸಲ್ಲಿಸಲಾಗಿತ್ತು. ಆದರೆ ಸುಪ್ರೀಂಕೋರ್ಟ್ ಕಳೆದ ನವೆಂಬರಿನಲ್ಲಿ PIL ಅರ್ಜಿಯನ್ನು ತಿರಸ್ಕರಿಸಿತ್ತು. ಮುಖ್ಯನಾಯಾಧೀಶರಾದ ಪಿ ಸದಾಶಿವಂ ಮತ್ತು ಜಸ್ಟೀಸ್ ರಂಜನ್ ಗೊಗೋಯ್ ಅವರು ಇಂತಹ ವಿಚಾರಗಳನ್ನು ಚುನಾವಣಾ ಆಯೋಗವೇ ನಿರ್ಧರಿಸಬೇಕು ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿದ್ದರು.

ಮೋದಿ ಚರಾಸ್ತಿ ಸ್ಥಿರಾಸ್ತಿ ವಿವರವೂ ಲಭ್ಯವಾಗಿದೆ

ಮೋದಿ ಚರಾಸ್ತಿ ಸ್ಥಿರಾಸ್ತಿ ವಿವರವೂ ಲಭ್ಯವಾಗಿದೆ

ಇನ್ನು ಮೋದಿ ಅವರ ಚರಾಸ್ತಿ ಸ್ಥಿರಾಸ್ತಿ ವಿವರವೂ ಲಭ್ಯವಾಗಿದೆ. ಮೋದಿ ಬಳಿ 1.50 ಕೋಟಿ ರೂ ಆಸ್ತಿಯಿದೆ. 29,700 ರೂ ನಗದು, 44 ಲಕ್ಷ ರೂ ಬ್ಯಾಂಕ್ ಠೇವಣಿ, ಸುಮಾರು 4.5 ಲಕ್ಷ ರೂ ಮೌಲ್ಯದ ಬಾಂಡ್ ಗಳು, ಪ್ರಸ್ತುತ 1 ಕೋಟಿ ರೂ. ಮೌಲ್ಯದ ಮನೆ ಇದೆ ಎಂದು ಮೋದಿ ಘೋಷಿಸಿದ್ದಾರೆ.

English summary
Lok Sabha polls 2014 - BJP Prime Minister candidate Narendra Modi declares married and Jashodaben his wife. In an affidavit submitted along with his nomination papers filed Wednesday for Vadodara Lok Sabha seat, Bharatiya Janata Party's prime ministerial nominee Narendra Modi declared himself as a married man and revealed that his wife's name is Jashodaben.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X