ಹನಿಟ್ರ್ಯಾಪ್: ಏನಿದು ವರುಣ್ ಗಾಂಧಿ ಮೇಲಿನ ಗಂಭೀರ ಆರೋಪ?

Written By:
Subscribe to Oneindia Kannada

ನವದೆಹಲಿ, ಅ 20: ಉತ್ತರಪ್ರದೇಶ ಚುನಾವಣೆಗೆ ಮುನ್ನ ಬಿಜೆಪಿ ಮುಜುಗರಕ್ಕೀಡಾಗುವಂತಹ ಮಾಹಿತಿಯೊಂದು ಬಹಿರಂಗಗೊಂಡಿದೆ. ಪಕ್ಷದ ಪ್ರಮುಖ ಮುಖಂಡ, ಫೈರ್ ಬ್ರ್ಯಾಂಡ್ ಎಂದೇ ಕರೆಯಲ್ಪಡುವ ವರುಣ್ ಗಾಂಧಿ ಹನಿಟ್ರ್ಯಾಪಿಗೆ ಒಳಗಾದ ಆರೋಪ ಕೇಳಿ ಬರುತ್ತಿದೆ.

ರಕ್ಷಣಾ ಇಲಾಖೆಗೆ ಸಂಬಂಧಿಸಿದ ಮಹತ್ವದ ಮಾಹಿತಿಯನ್ನು ವರುಣ್ ಗಾಂಧಿ ನೀಡಿದ್ದಾರೆಂದು, ಅಮೆರಿಕಾ ಮೂಲದ ಎಡ್ಮಂಡ್ ಎಲನ್ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದಾರೆ. (ಉಪ್ರ ಸಮೀಕ್ಷೆ, ರಂಗೇರುತ್ತಿರುವ ಬಿಜೆಪಿ ಕನಸು)

ಈಗ ಜಾಮೀನಿನ ಮೇಲೆ ಹೊರಬಂದಿರುವ ಶಸ್ತ್ರಾಸ್ತ್ರ ದಲ್ಲಾಳಿ ಅಭಿಷೇಕ್ ವರ್ಮಾ, ವರುಣ್ ಗಾಂಧಿಯವರನ್ನು ಹನಿಟ್ರ್ಯಾಪ್ ಮಾಡಿ ಮಹತ್ವದ ಮಾಹಿತಿಯನ್ನು ಪಡೆದುಕೊಂಡಿದ್ದಾರೆಂದು ಎಡ್ಮಂಡ್ ಎಲನ್ ಪಿಎಂ ಕಚೇರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

Varun Gandhi 'Honey Trapped', Leaked Defence Secrets: Letter To PMO

ಇದಲ್ಲದೇ ಕೆಲವೊಂದು ಹುಡುಗಿಯರ ಜೊತೆ ನಿಕಟ ಸಂಬಂಧ ಹೊಂದಿದ್ದಾರೆ ಎನ್ನುವುದನ್ನು ರುಜುವಾತು ಪಡಿಸುವ ಫೋಟೋಗಳನ್ನೂ ಎಲನ್ ಪಿಎಂ ಕಚೇರಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಅಭಿಷೇಕ್ ವರ್ಮಾನ ದಲ್ಲಾಳಿಯಾಗಿದ್ದ ಅಲನ್ 2012ರಲ್ಲಿ ನೀಡಿದ್ದ ದೂರಿನನ್ವಯ, ವರ್ಮಾನನ್ನು ಬಂಧಿಸಿ ತಿಹಾರ್ ಜೈಲಿಗೆ ಕಳುಹಿಸಲಾಗಿತ್ತು. ಜಾಮೀನಿನ ಮೇಲೆ ಬಿಡುಗಡೆಹೊಂದಿ ಹೊರಬಂದಿರುವ ವರ್ಮಾನ ಮೇಲೆ ಅಲನ್ ನೀಡಿದ ದೂರು ಈಗ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ.

ವರುಣ್ ಗಾಂಧಿ ಪ್ರತಿಕ್ರಿಯೆ : ನನ್ನ ಮೇಲಿನ ಈ ಆರೋಪ ಪ್ರತಿಕ್ರಿಯೆ ಕೊಡುವುದಕ್ಕೂ ಅರ್ಹವಾದುದಲ್ಲ. ಇದೊಂದು ನಿರಾಧಾರ ಆರೋಪ, ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಹೇಳಿದ್ದಾರೆ.

ಇನ್ನೊಂದೆಡೆ, ಉತ್ತರಪ್ರದೇಶ ಅಸೆಂಬ್ಲಿ ಚುನಾವಣೆಯನ್ನು ಗೆಲ್ಲಲೇ ಬೇಕೆಂಬ ಪಣ ತೊಟ್ಟಿರುವ ಬಿಜೆಪಿಯನ್ನು ಹತ್ತಿಕ್ಕಲು ಮಾಡಿರುವ ಕುತಂತ್ರವಿದು ಎನ್ನುವ ಮಾತು ಕೇಳಿ ಬರುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP parliamentarian Varun Gandhi leaked crucial information about defence matters to arms manufacturers after being blackmailed with pictures of him with foreign escorts and prostitutes, Prime Minster Narendra Modi's Office has been told in a letter.
Please Wait while comments are loading...