• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮತಎಣಿಕೆ ಮುಗಿಯುವವರೆಗೆ ಯಾವುದೂ ಮುಗಿಯೋಲ್ಲ: ಬಿಜೆಪಿ ಖಚಿತ ವಿಶ್ವಾಸದ ಮಾತು

|

ನವದೆಹಲಿ, ನ 10: ಕರ್ನಾಟಕ, ಮಧ್ಯಪ್ರದೇಶ, ಗುಜರಾತ್ ರಾಜ್ಯದ ಅಸೆಂಬ್ಲಿ ಉಪಚುನಾವಣೆಯಲ್ಲಿ ಬಿಜೆಪಿ ಆರಂಭಿಕ ಮುನ್ನಡೆ ಸಾಧಿಸಿದೆ. ಇನ್ನು, ಬಿಹಾರದಲ್ಲಿ ಮಹಾಘಟಬಂಧನ್ ಮತ್ತು ಎನ್ಡಿಎ ಮೈತ್ರಿಕೂಟದ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ.

   ಎಲ್ಲಾಕಡೆ ಅರಳಿದ ಕಮಲ!! | BJP | Oneindia Kannada

   ಬಿಹಾರದಲ್ಲಿ ಎನ್ಡಿಎ ಮತ್ತು ಮಹಾಘಟಬಂಧನ್ ತಲಾ 111 ಕ್ಷೇತ್ರದಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಟ್ವೆಂಟಿ20 ಫಲಿತಾಂಶದಂತೆ, ಕೊನೆಗೆ, ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದೆ ಎನ್ನುವುದು ಭಾರೀ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

   ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ: ಇಲ್ಲಿದೆ ಕ್ಷಣಕ್ಷಣದ ಮಾಹಿತಿ

   ಬಿಜೆಪಿ ಕೇಂದ್ರ ಐಟಿ ಶೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಈ ಸಂಬಂಧ ಟ್ವೀಟ್ ಮಾಡಿದ್ದು, "ಬಿಜೆಪಿ ಎಲ್ಲಾ ಕಡೆಯಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದು, ಒಟ್ಟಾರೆಯಾಗಿ ಮತಎಣಿಕೆ ಮುಗಿಯುವವರೆಗೆ ಯಾವುದೂ ಮುಗಿಯುವುದಿಲ್ಲ"ಎಂದು ಹೇಳಿದ್ದಾರೆ.

   "ಮಧ್ಯಪ್ರದೇಶ, ಗುಜರಾತ್, ಉತ್ತರ ಪ್ರದೇಶ ಮತ್ತು ಕರ್ನಾಟಕದಲ್ಲಿ ಬಿಜೆಪಿ ಲೀಡ್ ನಲ್ಲಿದೆ. ತೆಲಂಗಾಣದಲ್ಲೂ ನಮ್ಮ ಪಕ್ಷ ಮುನ್ನಡೆಯಲ್ಲಿದೆ. ಬಿಹಾರದಲ್ಲೂ ನಮ್ಮ ಮೈತ್ರಿಕೂಟ ಉತ್ತಮ ಪ್ರದರ್ಶನ ನೀಡುತ್ತಿದೆ"ಎಂದು ಅಮಿತ್ ಮಾಳವೀಯ ಹೇಳಿದ್ದಾರೆ.

   ಆರ್. ಆರ್. ನಗರ, ಶಿರಾ ಉಪ ಚುನಾವಣೆ ಫಲಿತಾಂಶ

   "ಮತಗಟ್ಟೆ ಸಮೀಕ್ಷೆಯಲ್ಲಿ ಏನು ಬಂದಿತ್ತೋ, ಅದಕ್ಕಿಂತ ಉತ್ತಮ ಪ್ರದರ್ಶನವನ್ನು ನಮ್ಮ ಮೈತ್ರಿಕೂಟ ಬಿಹಾರದಲ್ಲಿ ನೀಡುತ್ತಿದೆ"ಎಂದು ಅಮಿತ್ ಮಾಳವೀಯ ವಿಶ್ವಾಸದ ಮಾತನ್ನಾಡಿದ್ದಾರೆ.

   ವಿವಿಧ ವಾಹಿನಿಗಳು ನೀಡಿದ್ದ ಎಕ್ಸಿಟ್ ಪೋಲ್ ಸಮೀಕ್ಷೆಯಲ್ಲಿ ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ ಒಂದೋ ಅಧಿಕಾರಕ್ಕೆ ಬರುತ್ತೆ, ಇಲ್ಲವೋ, ಅಲ್ಲಿ ಅತಂತ್ರ ಫಲಿತಾಂಶ ಬರಲಿದೆ ಎಂದು ವರದಿ ಮಾಡಿದ್ದವು.

   English summary
   BJP IT Cell Head Amit Malviya Tweeted, Not over till it's over,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X