ಬಿಜೆಪಿ ಸಂಸ್ಥಾಪನಾ ದಿನ: ಲಕ್ಷ ಜನ ಸೇರಿ ಅರಳಿಸಿದ ಕಮಲ

ನವದೆಹಲಿ, ಏ. 6: ಸೋಮವಾರ ಬಿಜೆಪಿಯ 35 ನೇ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿದಂತೆ ಅನೇಕ ಮುಖಂಡರು ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಕಾರ್ಯಕರ್ತರಿಗೆ ಟ್ವಿಟ್ಟರ್ ಮೂಲಕ ಸಂಸ್ಥಾಪನಾ ದಿನದ ಶುಭಾಶಯ ಕೋರಿದ್ದಾರೆ. ಬಿಜೆಪಿಯ ಇಂದಿನ ಬೆಳವಣಿಗೆಗೆ ಕಾರ್ಯಕರ್ತರ ಶ್ರಮ ಮತ್ತು ದುಡಿಮೆಯೇ ಕಾರಣ. ಇನ್ನು ಹೆಚ್ಚಿನ ಸಂಘಟನೆ ಮುಂದಿನ ದಿನಗಳಲ್ಲಿ ಸಾಧ್ಯವಾಗಲಿ ಎಂದು ಹಾರೈಸಿದ್ದಾರೆ.[ಬೆಂಗಳೂರು ಕಾರ್ಯಕಾರಿಣಿಯಲ್ಲಿ ಮೋದಿ ಹೇಳಿದ್ದೇನು?]

ಸಾಮಾಜಿಕ ಜಾಲತಾಣಗಳಲ್ಲೂ ಬಿಜೆಪಿ ಸಂಸ್ಥಾಪನಾ ದಿನಕ್ಕೆ ವ್ಯಾಪಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗುಜರಾತ್ ನಲ್ಲಿ ಸುಮಾರು ಒಂದು ಲಕ್ಷ ಜನ ಒಂದೆಡೆ ಸೇರಿ ಕೇಸರಿ ವರ್ಣದಲ್ಲಿ ಕಮಲನ್ನು ಅರಳಿಸಿದ್ದು ವಿಶೇಷ. ದೇಶಾದ್ಯಂತ ಕಾರ್ಯಕರ್ತರು ಬಿಜೆಪಿ ಸಂಸ್ಥಾಪನಾ ದಿನವನ್ನು ಆಚರಿಸಿದರು. ನವದೆಹಲಿಯ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಪಾಲ್ಗೊಂಡಿದ್ದರು.

ನಾಯಕರ ಉಪಸ್ಥಿತಿ

ನಾಯಕರ ಉಪಸ್ಥಿತಿ

ಬಿಜೆಪಿಯ 35 ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ದೆಹಲಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಾಜರಿದ್ದ ನಾಯಕರು. ಇತ್ತಿಷೆಗಷ್ಟೇ ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕಾರಣಿ ಮುಗಿಸಿದ್ದ ನಾಯಕರು ಪಕ್ಷ ಸಂಘಟನೆ ಕುರಿತು ಮತ್ತೊಮ್ಮೆ ಚರ್ಚೆ ನಡೆಸಿದರು.

ಅಮಿತ್ ಶಾ ಭಾಷಣ

ಅಮಿತ್ ಶಾ ಭಾಷಣ

ಸಂಸ್ಥಾಪನಾ ದಿನಾಚರಣೆಯಲ್ಲಿ ಪಕ್ಷ ನಡೆದು ಬಂದ ದಾರಿ, ಮುಂದೆ ಸಾಗಬೇಕಾದ ಗುರಿಯ ಬಗ್ಗೆ ವಿವರಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ. ಮುಂಬರುವ ಪಶ್ವಿಮ ಬಂಗಾಳ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಪಕ್ಷ ಬಲಪಡಿಸುವ ಕುರಿತು ಈಗಿನಿಂದಲೇ ನಿರ್ದೇಶನ ಆರಂಭವಾಗಿದೆ.

ಶಿಕಾರಿಪುರದಲ್ಲಿ ಸಂಸ್ಥಾಪನಾ ದಿನ

ಶಿಕಾರಿಪುರದಲ್ಲಿ ಸಂಸ್ಥಾಪನಾ ದಿನ

ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸಂಸ್ಥಾಪನಾ ದಿನವನ್ನು ಮಾಜಿ ಸಿಎಂ, ಸಂಸದ ಬಿಎಸ್ ಯಡಿಯೂರಪ್ಪ ಉದ್ಘಾಟಿಸಿದರು. ಬಿಜೆಪಿ ಕಾರ್ಯಕಾರಣಿಯಿಂದ ತಮ್ನನ್ನು ಹೊರಹಾಕಿದ್ದರೂ ತಳ ಮಟ್ಟದಲ್ಲಿ ಪಕ್ಷ ಬಲಪಡಿಸುವ ಕೆಲಸದಲ್ಲಿ ಬಿಎಸ್ ವೈ ಇದ್ದಾರೆ. ಶಾಶಕ ಬಿವೈ ರಾಘವೇಂದ್ರ ಹಾಜರಿದ್ದರು.

Array

ನರೇಂದ್ರ ಮೋದಿ ಟ್ವೀಟ್

ಎಲ್ಲ ಬಿಜೆಪಿ ಕಾರ್ಯಕರ್ತರಿಗೆ ಟ್ವಿಟ್ಟರ್ ಮೂಲಕ ಸಂದೇಶ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ. ಬಿಜೆಪಿಯ ಇಂದಿನ ಬೆಳವಣಿಗೆಗೆ ಕಾರ್ಯಕರ್ತರ ಶ್ರಮ ಮತ್ತು ದುಡಿಮೆಯೇ ಕಾರಣ ಎಂದು ಹೇಳಲು ಮೋದಿ ಮರೆತಿಲ್ಲ.

ಅರಳಿದ ಕಮಲ

ಗುಜರಾತ್ ನಲ್ಲಿ ಸುಮಾರು ಒಂದು ಲಕ್ಷ ಜನ ಒಂದೆಡೆ ಸೇರಿ ಕೇಸರಿ ವರ್ಣದಲ್ಲಿ ಕಮಲನ್ನು ಅರಳಿಸಿದ್ದು ವಿಶೇಷ. ಇದೇ ಮೊದಲ ಬಾರಿಗೆ ಈ ಬಗೆಯಲ್ಲಿ ಜನರು ಒಂದೆಡೆ ಸೇರಿ ಕಮಲ ಅರಳಿಸಿದ್ದು ಗಮನ ಸೆಳೆಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+