ರಾಜಸ್ಥಾನ ಚುನಾವಣೆಯಲ್ಲಿ ವಸುಂಧರಾ ರಾಜೆಗೆ ಕೊನೆಗೂ ಟಿಕೆಟ್ ಕನ್ಫರ್ಮ್

ತೀವ್ರ ಕುತೂಹಲ ಕೆರಳಿಸಿರುವ, ರಾಜಸ್ಥಾನ ರಾಜ್ಯದ ಚುನಾವಣೆ ಇನ್ನೇನು ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ನವೆಂಬರ್ 25 ಕ್ಕೆ ರಾಜಸ್ಥಾನ ವಿಧಾನಸಭೆಗೆ ಮತದಾನವು ನಡೆಯಲಿದ್ದು, ಡಿಸೆಂಬರ್ 3 ರಂದು ರಿಸಲ್ಟ್ ಹೊರಬೀಳಲಿದೆ. ಇದೇ ಸಂದರ್ಭದಲ್ಲಿ ರಾಜಸ್ಥಾನ ಮಾಜಿ ಸಿಎಂ ವಸುಂಧರಾ ರಾಜೆಗೆ ಟಿಕೆಟ್ ವಿಚಾರದಲ್ಲಿ ಕೇಂದ್ರದ ಬಿಜೆಪಿ ನಾಯಕರು ಸರ್ಪ್ರೈಸ್ ಕೊಟ್ಟಿದ್ದಾರೆ.

ರಾಸ್ಥಾನದಲ್ಲಿ ಬಿಜೆಪಿ ಬಲವಾಗಿ ಬೆಳೆಯಲು ವಸುಂಧರಾ ರಾಜೆ ಪಾತ್ರ ದೊಡ್ಡದಾಗಿದೆ. ಇದೇ ಕಾರಣಕ್ಕೆ ವಸುಂಧರಾ ರಾಜೆ ಅವರು ರಾಜಸ್ಥಾನದಲ್ಲಿ ಎರಡು ಬಾರಿ ಸಿಎಂ ಆಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ ಎರಡೂ ಬಾರಿ ಕೂಡ ಅವರು ಅಧಿಕಾರ ಅವಧಿಯ ಪೂರ್ಣಗೊಳಿಸಿದ್ದಾರೆ. ಆದ್ರೆ ಕಳೆದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದ ಕಾರಣ, ವಸುಂಧರಾ ರಾಜೆ ಸಿಎಂ ಪಟ್ಟದಿಂದ ಕೆಳಗಿಳಿದರು. ಈಗ ಟ್ರೆಂಡ್ ಚೇಂಜ್ ಆಗಿದ್ದು ರಾಜಸ್ಥಾನದಲ್ಲಿ ಬಿಜೆಪಿ ಮತ್ತೆ ಭರ್ಜರಿ ಗೆಲುವು ಸಾಧಿಸಲಿದೆ ಅಂತಾ ಸಮೀಕ್ಷೆಗಳು ಭವಿಷ್ಯ ಹೇಳಿವೆ.

bjp-announced-2nd-list

ವಸುಂಧರಾ ರಾಜೆಗೆ ಟಿಕೆಟ್ ಪಕ್ಕಾ!

ಹೌದು ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಬಿಜೆಪಿ ಇಂದು 83 ಅಭ್ಯರ್ಥಿಗಳ 2ನೆ ಪಟ್ಟಿ ರಿಲೀಸ್ ಮಾಡಿದೆ. ಇದೇ ಪಟ್ಟಿಯಲ್ಲಿ ರಾಜಸ್ಥಾನದ ಮಾಜಿ ಸಿಎಂ, ವಸುಂಧರಾ ರಾಜೆ ಅವರಿಗೂ ಟಿಕೆಟ್ ಕನ್ಫರ್ಮ್ ಮಾಡಿದೆ. ಜಲ್ರಾಪಟನ್ ಕ್ಷೇತ್ರದಿಂದ ವಸುಂಧರಾ ರಾಜೆಗೆ ಟಿಕೆಟ್ ನೀಡಲಾಗಿದ್ದು, ರಾಜಸ್ಥಾನ ರಣಕಣ ಈಗ ಮತ್ತಷ್ಟು ರಂಗೇರಿದೆ. ಕಾಂಗ್ರೆಸ್‌ಗೆ ಇದು ಅಳಿವು & ಉಳಿವಿನ ಪ್ರಶ್ನೆಯಾಗಿದ್ದರೆ, ಬಿಜೆಪಿ ಮತ್ತೊಮ್ಮೆ ರಾಜಸ್ಥಾನ ಅಧಿಕಾರ ಪಡೆಯಲು ರಣತಂತ್ರ ರೂಪಿಸಿದೆ.

ಕಾಂಗ್ರೆಸ್ ಪಕ್ಷದಿಂದಲೂ ಪಟ್ಟಿ ಪ್ರಕಟ

ಒಂದು ಕಡೆ ಬಿಜೆಪಿ ಇದೀಗ 2ನೇ ಪಟ್ಟಿ ರಿಲೀಸ್ ಮಾಡಿದ್ದರೆ, ರಾಜಸ್ಥಾನ ವಿಧಾನಸಭೆ ಚುನಾವಣೆಗೆ 33 ಅಭ್ಯರ್ಥಿಗಳ ಮೊದಲನೇ ಪಟ್ಟಿಯನ್ನು ಕಾಂಗ್ರೆಸ್‌ನ ನಾಯಕರು‌ ಇಂದು ರಿಲೀಸ್ ಮಾಡಿದೆ. ರಾಜಸ್ಥಾನದ ಹಾಲಿ ಸಿಎಂ ಹಾಗೂ ಕಾಂಗ್ರೆಸ್ ನಾಯಕ ಅಶೋಕ್‌ ಗೆಹಲೋಟ್ ಅವರು ಸರ್ದಾರಪುರ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆ ನಡೆಸಲಿದ್ದು, ಹಾಗೇ ಟೋಂಕ್‌ ಕ್ಷೇತ್ರದಲ್ಲಿ ಸಚಿನ್‌ ಪೈಲಟ್ ಸ್ಪರ್ಧೆ ಪಕ್ಕಾ ಆಗಿದೆ.

ಒಟ್ನಲ್ಲಿ ಈ ಬಾರಿ ರಾಜಸ್ಥಾನದ ಬಿಜೆಪಿ ನಾಯಕರಿಗೆ ಹೊಸ ಹುಮ್ಮಸ್ಸು ಬಂದಿದ್ದು, ಇದೇ ಸಮಯದಲ್ಲಿ ಕಾಂಗ್ರೆಸ್ ನಾಯಕರು ಚಿಂತೆಯಲ್ಲಿ ಮುಳುಗಿದ್ದಾರೆ. ಸಮೀಕ್ಷೆಗಳು ಹೇಳುವಂತೆ ರಾಜಸ್ಥಾನದಲ್ಲಿ ಬಿಜೆಪಿಗೆ ಭರ್ಜರಿ ಗೆಲುವು ಪಕ್ಕಾ ಎನ್ನಲಾಗಿದೆ. ಇದೆಲ್ಲಾ ನಡೆಯುವಾಗ ಕಾಂಗ್ರೆಸ್ ಪಕ್ಷ, ಹಲವು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಈ ಕಾರಣ ಕುತೂಹಲ ದುಪ್ಪಟ್ಟಾಗಿದ್ದು, 200 ವಿಧಾನಸಭೆ ಕ್ಷೇತ್ರ ಇರುವ ರಾಜಸ್ಥಾನದಲ್ಲಿ ಅಧಿಕಾರ ಹಿಡಿಯುವುದು ಯಾರು? ಎಂಬುದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+