ಛೆ, ಛೆ! ರಾಹುಲ್ ಕಾಲೆಳೆಯೋಕೆ ಬಿಜೆಪಿ ಹೀಗೆಲ್ಲ ಸುಳ್ಳು ಹೇಳೋದಾ?

Recommended Video

      ಮತ್ತೆ ರಾಹುಲ್ ಗಾಂಧಿ ಕಾಲೆಳೆದ ಬಿಜೆಪಿ | Oneindia Kannada

      ಭೋಪಾಲ್, ಸೆಪ್ಟೆಂಬರ್ 19: ರಾಹುಲ್ ಗಾಂಧಿ ಅವರು ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳುತ್ತಾರೆ ಎಂಬಲ್ಲಿಂದ ಅವರು ವಾಪಸ್ಸಾಗುವವರೆಗೂ ಅವರ ಕಾಲೆಳೆಯುವ ಕೆಲಸ ನಡೆಯುತ್ತಲೇ ಇದೆ.

      ಆದರೆ ಮಂಗಳವಾರ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದ ನಂತರ ಅವರನ್ನು ಮಹಿಳೆಯೊಬ್ಬರು ಕೈಲಾಸ ಮಾನಸ ಸರೋವರ ಯಾತ್ರೆಯ ಬಗ್ಗೆ ಪ್ರಶ್ನಿಸಿದ್ದರು. ಈ ಸಂದರ್ಭದಲ್ಲಿ ಕೆಲಹೊತ್ತು ಯಾವ ಪ್ರತಿಕ್ರಿಯೆಯನ್ನೂ ನೀಡದೆ ಸುಮ್ಮನಿದ್ದ ರಾಹಲ್ ಗಾಂಧಿ ಅವರ ವಿಡಿಯೋವನ್ನಿಟ್ಟುಕೊಂಡು ಅವರನ್ನು ಮತ್ತೊಮ್ಮೆ ಟ್ರೋಲ್ ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ.

      ಆದರೆ ಮಾಧ್ಯಮಗಳು ಈ ವಿಡಿಯೋ ಸತ್ಯಾಸತ್ಯತೆ ಪರೀಕ್ಷಿಸಿದಾಗ ತಿಳಿದಿದ್ದು ಏನಂದ್ರೆ, ರಾಹುಲ್ ಗಾಂಧಿ ಅವರು ಕೆಲ ಕಾಲ ಸುಮ್ಮನಿದ್ದರೂ, ನಂತರ ತಮ್ಮ ಮಾನಸ ಸರೋವರ ಯಾತ್ರೆಯ ಅನುಭವಗಳನ್ನು ಹಂಚಿಕೊಂಡರು. ಆದರೆ ವಿಡಿಯೋದಲ್ಲಿ ಈ ಭಾಗವನ್ನು ಕತ್ತರಿಸಿದ ಕೆಲ ಬಿಜೆಪಿ ಬೆಂಬಲಿಗರು ರಾಹುಲ್ ಗಾಂಧಿ ಅವರನ್ನು ಟ್ರೋಲ್ ಮಾಡಿದ್ದರು.

      ಅಮಿತ್ ಮಾಳವೀಯ ಟ್ವೀಟ್

      ರಾಹುಲ್ ಗಾಂಧಿ ಅವರ ಬಳಿ ಅವರ ಕೈಲಾಸ ಮಾನಸ ಸರೋವರ ಯಾತ್ರೆಯ ಅನುಭವಗಳನ್ನು ಕೇಳಿದರೆ, ಯಾವ ಪ್ರತಿಕ್ರಿಯೆಯನ್ನೂ ನೀಡದೆ ಸುಮ್ಮನಾದರು! ಅವರ ಹಿಂದಿನಿಂದ ಬರುತ್ತಿರುವ 'ನರೇಂದ್ರ ಮೋದಿ' ಎಂಬ ಘೋಷಣೆಯನ್ನೂ ಕೇಳುವುದಕ್ಕೆ ಮರೆಯಬೇಡಿ ಎಂದು ಬಿಜೆಪಿಯ ಐಟಿ ಸೆಲ್ ಮುಖಂಡ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ.

      ಮಹೇಶ್ ವಿಕ್ರಂ ಹೆಗಡೆ

      ರಾಗಾ ಅವರನ್ನು ಭೋಪಾಲ್ rally ಯಲ್ಲಿ ಮಹಿಳೆಯೊಬ್ಬರು ಪ್ರಶಸ್ನಿಸಿದರು, 'ರಾಹುಲ್ ಜೀ, ಕಾರ್ಯಕರ್ತರು ನಿಮ್ಮ ಕೈಲಾಸ ಮಾನಸ ಸರೋವರ ಯಾತ್ರೆಯ ಅನುಭವಗಳನ್ನು ಕೇಳಲು ಉತ್ಸುಕರಾಗಿದ್ದಾರೆ' ಎಂದು. ಆದರೆ ರಾಗಾ ಮಾತ್ರ ಬಾಯನ್ನೆ ತೆರೆಯದೆ ಮೌನವಾಗಿ ಉಳಿದರು! ರಾಹುಲ್ ಗಾಂಧಿ ಅವರ ಪ್ರತಿಕ್ರಿಯೆಗಾಗಿ ಕಾದಿದ್ದ ಜನ ಅವರ ಮೌನ ಕಂಡು, ಮೋದಿ ಜಿಂದಾಬಾದ್ ಎಂದು ಕೂಗುವುದಕ್ಕೆ ಶುರು ಮಾಡಿದರು. ರಾಹುಲ್ ಗಾಂಧಿ ಕೈಲಾಸ ಯಾತ್ರೆಗೆ ಹೋಗಲೇ ಇಲ್ಲ ಎಂಬುದಕ್ಕೆ ಇದೇ ಸಾಕ್ಷಿ' ಎಂದು ಪೋಸ್ಟ್ ಕಾರ್ಡ್ ಮುಖ್ಯಸ್ಥ ಮಹೇಶ್ ವಿಕ್ರಂ ಹೆಗಡೆ ಟ್ವೀಟ್ ಮಾಡಿದ್ದಾರೆ.

      Array

      ಸತ್ಯವಾಗಿಯೂ ನಡೆದಿದ್ದೇನು?

      ಆದರೆ ರಾಹುಲ್ ಗಾಂಧಿ ಅವರು ಮಾತನಾಡಿದ ಈ ವಿಡಿಯೋವನ್ನು ಸಂಪೂರ್ಣ ವೀಕ್ಷಿಸಿದರೆ, ಕೆಲ ಕ್ಷಣದ ಮೌನದ ನಂತರ ಅವರು ತಮ್ಮ ಕೈಲಾಸ ಮಾನಸ ಸರೋವರ ಯಾತ್ರೆಯ ಅನುಭವಗಳನ್ನು ಹಂಚಿಕೊಂಡಿದ್ದು ವಿಡಿಯೋದಲ್ಲಿ ದಾಖಲಾಗಿದೆ. ಆದರೆ ಬಿಜೆಪಿಯ ಕೆಲ ಬೆಂಬಲಿಗರು ಆ ಭಾಗವನ್ನು ಕತ್ತರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡುತ್ತಿರುವುದು ಕಾಂಗ್ರೆಸ್ಸಿಗರ ಆಕ್ರೋಶಕ್ಕೆ ಕಾರಣವಾಗಿದೆ. ರಾಹುಲ್ ಅವರು ಮಾತನಾಡುವುದಕ್ಕೆ ಹೋದಾಗ ಸ್ವಲ್ಪ ಗಲಾಟೆ ಇದ್ದಿದ್ದರಿಂದ ತಮ್ಮ ಧ್ವನಿ ಕೇಳುತ್ತಿಲ್ಲ ಎಂಬ ಕಾರಣಕ್ಕೆ ಅವರು ಕೆಲ ಕಾಲ ಮೌನವಾಗಿ, ಜನರ ಗಲಾಟೆ ಕಡಿಮೆಯಾದ ನಂತರ ಮಾತನಾಡಿದ್ದರು.

      ರಾಹುಲ್ ಯಾತ್ರೆಯ ಅನುಭವವವೇನು?

      ರಾಹುಲ್ ಯಾತ್ರೆಯ ಅನುಭವವವೇನು?

      ಈ ವಿಡಯೋದಲ್ಲಿ ತಮ್ಮ ಕೈಲಾಸ ಮಾನಸ ಯಾತ್ರೆಯ ಅನುಭವವನ್ನು ಹಂಚಿಕೊಂಡ ರಾಹುಲ್ ಗಾಂಧಿ, ಒಬ್ಬ ವ್ಯಕ್ತಿ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದರೆ ಆಗುವ ಅನುಭವವೇ ಬೇರೆ. ಕೈಲಾಸ ಮಾನಸ ಸರೋವರ ಯಾತ್ರೆಯಿಂದ ಹಿಂದಿರುಗುತ್ತಿದ್ದಂತೆಯೇ ಆ ವ್ಯಕ್ತಿಯಲ್ಲಿ ಸಂಪೂರ್ಣ ಪರಿವರ್ತನೆಯಾಗಿರುತ್ತದೆ. ಅವರ ವೈಚಾರಿಕತೆಯೂ ಆಳವಾಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದು ಈ ವಿಡಿಯೋದಲ್ಲಿ ದಾಖಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+