• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಹೊರಬಿದ್ದ ಭಯಾನಕ ಸತ್ಯಗಳು!

By ಒನ್ಇಂಡಿಯಾ ಡೆಸ್ಕ್
|

ಪಾಟ್ನಾ, ಜುಲೈ 31 : ಬಿಹಾರದ ಬಾಲಿಕಾ ಗೃಹದಲ್ಲಿ ಬಾಲಕಿಯರ ಮೇಲೆ ನಡೆದ ಅತ್ಯಾಚಾರ ಆರೋಪದ ಪ್ರಕರಣದ ಭಯಾನಕ ರಹಸ್ಯಗಳು ಒಂದೊಂದಾಗಿ ಹೊರಬೀಳುತ್ತಿವೆ. ತೀರಾ ಏಳು ವರ್ಷದ ಬಾಲಕಿಗೆ ಮತ್ತು ಬರುವಂಥ ಮಾತ್ರೆ ಅಥವಾ ಔಷಧ ಕೊಟ್ಟು, ಬೆತ್ತಲೆ ಮಲಗುವಂತೆ ಒತ್ತಡ ಹಾಕುತ್ತಿದ್ದದ್ದು, ಬಿಸಿ ನೀರು ಹಾಕಿದ್ದು...ಇಂಥ ಅಮಾನವೀಯ ಕೃತ್ಯಗಳ ಬಗ್ಗೆ ಬಾಲಕಿಯರು ಹೇಳಿಕೊಂಡಿದ್ದಾರೆ.

ಮುಜಾಫರ್ ಪುರ್ ನ ರಾಜಕಾರಣಿಗಳ ಜತೆ ನಂಟು ಹೊಂದಿದ್ದ ಮಾಲೀಕರು ಹಾಗೂ ಅವರ ಸಿಬ್ಬಂದಿಯಿಂದ ಈ ಬಾಲಿಕಾ ಗೃಹದಲ್ಲಿ ಮೂವತ್ತಕ್ಕೂ ಹೆಚ್ಚು ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ. ಅಂದ ಹಾಗೆ ಇದು ಬಿಹಾರದ ರಾಜ್ಯ ಸರಕಾರ ನಡೆಸುತ್ತಿರುವ ಬಾಲಿಕಾ ಗೃಹ. ಈ ಬಗ್ಗೆ ಪೊಲೀಸರು ಚಾರ್ಜ್ ಶೀಟ್ ದಾಖಲಿಸಿದ್ದಾರೆ.

ಬಿಹಾರ: ಆಶ್ರಮದಲ್ಲಿ 34 ಬಾಲಕಿಯರ ಮೇಲೆ ಅತ್ಯಾಚಾರ

ಮಾಲೀಕ ಬ್ರಜೇಶ್ ಠಾಕೂರ್ ಮತ್ತು ಇತರ ಹತ್ತು ಮಂದಿ ವಿರುದ್ಧ ಚಾರ್ಜ್ ಶೀಟ್ ಆಗಿದೆ. ಅದರಲ್ಲಿ ಪೊಲೀಸರು, ರಾಜಕಾರಣಿಗಳು ಆಡಳಿತ ಮತ್ತು ಕ್ರಿಮಿನಲ್ ಗಳು ಕೂಡ ಬಾಲಕಿಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದರು ಹಾಗೂ ಶೋಷಣೆ ಮಾಡುತ್ತಿದ್ದರು ಎಂದು ದಾಖಲಿಸಲಾಗಿದೆ.

ಬ್ರಜೇಶ್ ಠಾಕೂರ್ ಲಾಭರಹಿತವಾದ ಹಲವು ಸಂಸ್ಥೆಗಳನ್ನು ನಡೆಸುತ್ತಿದ್ದು, ಪೊಲೀಸರು ನಲವತ್ತೆಂಟು ಬಾಲಕಿಯರನ್ನು ಪ್ರಶ್ನೆ ಮಾಡಿದ್ದಾರೆ. ಅವರು ದಾಖಲಿಸಿರುವ ಹೇಳಿಕೆಗಳು ಇಂತಿವೆ:

* ನಮಗೆ ನಿದ್ರೆ ಮಾತ್ರೆಗಳನ್ನು ಕೊಡುತ್ತಿದ್ದರು ಮತ್ತು ರಾತ್ರಿ ವೇಳೆ ಅತ್ಯಾಚಾರ ಎಸಗುತ್ತಿದ್ದರು. ಬೆಳಗ್ಗೆ ಹೊತ್ತಿಗೆ ನಮ್ಮ ಖಾಸಗಿ ಭಾಗಗಳು ವಿಪರೀತ ನೋವಾಗುತ್ತಿದ್ದವು.

* ನಾವು ಬೆತ್ತಲೆ ಆಗಿಯೇ ಮಲಗಬೇಕು ಅಂತ ಕಿರಣ್ ಆಂಟಿ ಒತ್ತಡ ಹಾಕುತ್ತಿದ್ದರು. ಅವರು ಕೂಡ ಹಾಗೇ ಮಲಗುತ್ತಿದ್ದರು. ಕಿರಣ್ ಆಂಟಿಯಿಂದಲೂ ನಮ್ಮ ಮೇಲೆ ದೌರ್ಜನ್ಯ ಆಗಿದೆ.

* ನಮ್ಮನ್ನು ಸಿಕ್ಕಾಪಟ್ಟೆ ಹೊಡೆಯುತ್ತಿದ್ದರು, ಬಿಸಿ ನೀರು ಎರಚುತ್ತಿದ್ದರು. ನಮ್ಮಿಂದ ಬಲವಂತವಾಗಿ ರೋಟಿ ಮಾಡಿಸುತ್ತಿದ್ದರು.

* ನಮ್ಮ ಪೈಕಿ ಒಬ್ಬ ಹುಡುಗಿ ಗರ್ಭಿಣಿ ಆದಾಗ ಅವಳಿಗೆ ಸಿಕ್ಕಾಪಟ್ಟೆ ಹೊಡೆದರು. ಅವಳಿಗೇ ಗರ್ಭಪಾತವೇ ಆಗಿಹೋಯಿತು.

* ಹತ್ತಿರದ ಕಟ್ಟಡದಲ್ಲಿ ಕೆಲವರನ್ನು ಕೊಂದು, ಹೂತು ಹಾಕಿದ್ದಾರೆ. (ಇದಕ್ಕೆ ಪೊಲೀಸರಿಗೆ ಯಾವ ಸಾಕ್ಷ್ಯವೂ ಸಿಕ್ಕಿಲ್ಲ).

* ಒಬ್ಬ ಹುಡುಗಿ ಇಲ್ಲಿಂದ ತಪ್ಪಿಸಿಕೊಂಡು ಓಡಿಹೋಗುವುದಕ್ಕೆ ಪ್ರಯತ್ನ ಪಟ್ಟಾಗ ಅವಳನ್ನು ವಾಪಸ್ ಕರೆತಂದು ಬಹಳ ಕ್ರೂರವಾಗಿ ಬಡಿದಿದ್ದರು.

ಇದೀಗ ಬಿಹಾರದಲ್ಲಿ ಈ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಆರೋಪಿಗಳ ಜತೆಗೆ ನೇರವಾಗಿ ಸರಕಾರದ ನಂಟಿರುವುದರಿಂದ ಅವರನ್ನು ರಕ್ಷಿಸುವ ಪ್ರಯತ್ನ ಆಗುತ್ತಿದೆ ಎಂದು ಆರ್ ಜೆಡಿಯ ತೇಜಸ್ವಿ ಯಾದವ್ ಆರೋಪ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Girls as young as seven were drugged, raped, forced to sleep naked and scalded with boiling water at a government-run shelter home in Bihar dubbed the house of horrors. Over 30 girls were raped in the Muzaffarpur home by its politically connected owner and its staff, reveals a police charge-sheet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more