• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಯೋತ್ಪಾದನೆ ಮೂಲೋತ್ಪಾಟನೆಗೆ ಜಾಗತಿಕ ವೇದಿಕೆಯಲ್ಲಿ ಸುಷ್ಮಾ ಧ್ವನಿ

|

ನವದೆಹಲಿ, ಸೆಪ್ಟೆಂಬರ್ 27: ಬ್ರಿಕ್ಸ್ ಮತ್ತು ಸಾರ್ಕ್ ಶೃಂಗಸಭೆಯಲ್ಲಿ ಜಪಾನ್ ಮತ್ತು ಸಿರಿಯಾ ದೇಶದ ಜತೆಗೆ ಮಾತುಕತೆ ನಡೆಸಲಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಭಯೋತ್ಪಾದನೆ, ಜಾಗತಿಕ ಮಟ್ಟದಲ್ಲಿ ಹಾಗೂ ದಕ್ಷಿಣ ಏಷ್ಯಾ ವ್ಯಾಪ್ತಿಯಲ್ಲಿ ಅದು ವ್ಯಾಪಿಸುತ್ತಿರುವ ವೇಗದ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಜಪಾನ್ ನೊಂದಿಗೆ ಸದ್ಯದ ಸಹಕಾರ ಮುಂದುವರಿಸುವ ಬಗ್ಗೆ, ಭದ್ರತೆ ಮತ್ತು ವ್ಯಾಪಾರ ಒಪ್ಪಂದದ ಬಗ್ಗೆ ಸಿರಿಯಾ ಜತೆ ಚರ್ಚೆ ನಡೆಸಲಿದ್ದಾರೆ. ಸಚಿವೆ ಸುಷ್ಮಾ ಸ್ವರಾಜ್ ಜತೆಗೆ ತ್ರಿಪಕ್ಷೀಯ ಸಚಿವರ ನಿಯೋಗ ಕೂಡ ಇರಲಿದೆ. ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಜತೆಗೆ ಭಾರತ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದ ತ್ರಿಪಕ್ಷೀಯ ನಿಯೋಗದ ಚರ್ಚೆ ಕೂಡ ನಡೆಯಲಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.

ಸುಷ್ಮಾ ಸ್ವರಾಜ್ ಟ್ರೋಲ್: ಟ್ವಿಟ್ಟಿಗರಿಗೆ ಛೀಮಾರಿ ಹಾಕಿದ ಒಮರ್ ಅಬ್ದುಲ್ಲಾ

ಸುರಕ್ಷತೆ ಮತ್ತು ವ್ಯಾಪಾರದ ಹೊರತಾಗಿ ವಿಶ್ವಸಂಸ್ಥೆಯ ಗುರಿಯ ಭಾಗವಾಗಿ ದಕ್ಷಿಣ ಏಷ್ಯಾ ಭಾಗದಲ್ಲಿ ಬಡತನ ಮತ್ತು ಹಸಿವಿನ ನಿರ್ಮೂಲನೆ ಮಾಡುವ ಬಗ್ಗೆ ಚರ್ಚೆ ನಡೆಯಲಿದೆ. ಬ್ರೆಜಿಲ್, ರಷ್ಯಾ, ಚೀನಾ ಮತ್ತು ದಕ್ಷಿಣ ಆಫ್ರಿಕಾದ ವಿದೇಶಾಂಗ ಮಂತ್ರಿಗಳನ್ನು ಕೂಡ ಸುಷ್ಮಾ ಸ್ವರಾಜ್ ಭೇಟಿ ಮಾಡಲಿದ್ದಾರೆ.

Bilateral meeting with Syrian deputy PM with Sushma Swaraj

ಪಾಕಿಸ್ತಾನ ಕೂಡ ಭಾಗವಾಗಿರುವ ಸಾರ್ಕ್ ಸಭೆಯಲ್ಲಿ ಕೂಡ ಸುಷ್ಮಾ ಸ್ವರಾಜ್ ಪಾಲ್ಗೊಳ್ಳಲಿದ್ದಾರೆ. ಗಡಿಯಾಚೆಗಿನ ಭಯೋತ್ಪಾದನೆ ನಿಲ್ಲಿಸುವಂತೆ ಪಾಕಿಸ್ತಾನವನ್ನು ಭಾರತ ಕೇಳುತ್ತಿದ್ದು, ಬಹಳ ಕಾಲದಿಂದ ಆ ದೇಶದ ಜತೆಗೆ ಮಾತುಕತೆ ಸಾಧ್ಯವಾಗಿಲ್ಲ. ಪಾಕಿಸ್ತಾನದ ವಿದೇಶಾಂಗ ಸಚಿವರು ಸಾರ್ಕ್ ನಲ್ಲಿ ಭಾಗವಹಿಸಲಿದ್ದಾರೆ. ಜತೆಗೆ ನೇಪಾಳದ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಕೂಡ ಭಾಗವಹಿಸಲಿದ್ದಾರೆ.

ಜಪಾನ್ ನ ವಿದೇಶಾಂಗ ಸಚಿವರ ಜತೆಗೆ ದ್ವಿಪಕ್ಷೀಯ ಮಾತುಕತೆ ಹೆಚ್ಚು ಮಹತ್ವ ಪಡೆದಿದೆ. ವಾಣಿಜ್ಯ, ಭದ್ರತೆ ಹಾಗೂ ತಾಂತ್ರಿಕ ನೆರವಿನ ಬಗ್ಗೆ ಮಹತ್ವದ ಚರ್ಚೆ ಆಗಲಿದೆ. ಅದೇ ರೀತಿ ಭದ್ರತಾ ಕಾರಣಗಳಿಗಾಗಿ ಸಿರಿಯಾದ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವರಾದ ವಲಿದ್ ಅಕ್ ಮುವಾಲಿಮ್ ಜತೆಗಿನ ಮಾತುಕತೆ ಬಹಳ ಮಹತ್ವದ್ದಾಗಿದೆ.

ವಿಶ್ವಸಂಸ್ಥೆ ಸಾಮಾನ್ಯ ಸಭೆ ವೇಳೆ ಭಾರತ-ಪಾಕ್ ಮಾತುಕತೆ

ಸೆಪ್ಟೆಂಬರ್ ಎರಡನೇ ವಾರದಲ್ಲಿ ಸುಷ್ಮಾ ಸ್ವರಾಜ್ ಸಿರಿಯಾಗೆ ಭೇಟಿ ನೀಡಬೇಕಿತ್ತು. ಆದರೆ ಅದು ರದ್ದಾಯಿತು. ಸಿರಿಯಾವು ಭಾರತದ ಮಿತ್ರ ದೇಶ. ಅಲ್ಲಿ ದೊಡ್ಡ ಮಟ್ಟದ ಬಂಡವಾಳ ದೇಶಕ್ಕೆ ಹೂಡಿಕೆ ಆಗುವ ನಿರೀಕ್ಷೆ ಇದೆ. ಆದ್ದರಿಂದಲೇ ಸಿರಿಯಾದ ಡಮಾಸ್ಕಸ್ ನಲ್ಲಿ ನಡೆದ ವ್ಯಾಪಾರ ಮೇಳದಲ್ಲಿ ಭಾರತದ ನಲವತ್ತಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದವು.

ವಿಶ್ವಸಂಸ್ಥೆ ಸಾಮಾನ್ಯ ಸಭೆ ವೇಳೆ ಭಾರತ-ಪಾಕ್ ಮಾತುಕತೆ

ಯುದ್ಧಪೀಡಿತ ಸಿರಿಯಾವು ಕೇವಲ ಭದ್ರತೆ ಸಹಕಾರಕ್ಕಾಗಿ ಮಾತ್ರವಲ್ಲ, ಜತೆಗೆ ವಾಣಿಜ್ಯ ಮತ್ತು ಹೂಡಿಕೆ ದೃಷ್ಟಿಯಿಂದಲೂ ಭಾರತದ ಕಡೆಗೆ ನೋಡುತ್ತಿದೆ.

ಇನ್ನಷ್ಟು sushma swaraj ಸುದ್ದಿಗಳುView All

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
External affairs minister of India Sushma Swaraj is likely to discuss issues related to terrorism, its growing expansion in the South Asian region besides global expansion in the bilateral meetings with her Japanese and Syrian counterparts and in the meetings of organizations like BRICS and SAARC.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more