ಎಲ್ಲಾ ವೋಟಿಗಾಗಿ? ಬಿಹಾರದಲ್ಲಿ ಮತ್ತೊಂದು ಮೈತ್ರಿಕೂಟ ಅಸ್ತಿತ್ವಕ್ಕೆ
ಲಕ್ನೋ, ಸೆ 18 (ಪಿಟಿಐ) : ಬಿಹಾರ ಚುನಾವಣೆಗೆ ದಿನಾಂಕ ಘೋಷಣೆಯಾದ ನಂತರ ಈಗ ಮತ್ತೊಂದು ಮೈತ್ರಿಕೂಟ ಅಸ್ತಿತ್ವಕ್ಕೆ ಬಂದಿದೆ.
ಬಿಜೆಪಿ ನೇತೃತ್ವದ ಎನ್ದಿಎ ಮೈತ್ರಿಕೂಟವನ್ನು ಶತಾಯುಗತಾಯು ಮಣಿಸಲು ಬಿಹಾರದಲ್ಲಿ ಜೆಡಿಯು, ಆರ್ಜೆಡಿ, ಎಸ್ಪಿ, ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳ ಮಹಾಮೈತ್ರಿಕೂಟ ಅಸ್ತಿತ್ವಕ್ಕೆ ಬಂದಿತ್ತು.
ಇದಾದ ನಂತರ ಚುನಾವಣೆಗೆ ದಿನಾಂಕ ಘೋಷಣೆಯಾಗುವು ಮುನ್ನವೇ ಮುಲಾಯಂ ಸಿಂಗ್ ಮುಖಂಡತ್ವದ ಎಸ್ಪಿ ಮೈತ್ರಿಕೂಟದಿಂದ ಹೊರಗೆ ಬಂದು ಶಾಕ್ ನೀಡಿತ್ತು. (ಬಿಹಾರ ಸಮೀಕ್ಷೆ: ಜಿದ್ದಾಜಿದ್ದಿನ ಫೈಟ್)
ಈಗ ಮುಲಾಯಂ ಸಿಂಗ್ ಇತರ ಮೂರು ಪಕ್ಷಗಳ ಜೊತೆಗೂಡಿ ಇನ್ನೊಂದು ಮೈತ್ರಿಕೂಟಕ್ಕೆ ಚಾಲನೆ ನೀಡಿದ್ದಾರೆ. ಇದು ಎನ್ಡಿಎ ಮತ್ತು ಮಹಾಮೈತ್ರಿಕೂಟಕ್ಕೆ ಪರ್ಯಾಯ ಶಕ್ತಿಯಾಗಲಿದೆ ಎಂದು ಮುಲಾಯಂ ಘೋಷಣೆ ಮಾಡಿದ್ದಾರೆ.
ಮೈತ್ರಿಕೂಟದಲ್ಲಿ ಇದ್ದರೂ, ರಾಹುಲ್ ಗಾಂಧಿ ಸಭೆಗೆ ಲಾಲೂ ಬರೋಲ್ಲಾಂತೆ, ಮುಂದೆ ಓದಿ..

ಸಮಾಜವಾದಿ ಪಾರ್ಟಿ
ಮಹಾಮೈತ್ರಿಕೂಟದಿಂದ ಹೊರಬಂದ ಮುಲಾಯಂ ಸಿಂಗ್ ಈಗ ಹೊಸ ಮೈತ್ರಿಕೂಟಕ್ಕೆ ಚಾಲನೆ ನೀಡಿದ್ದಾರೆ. ಸಮಾಜವಾದಿ ಪಕ್ಷ, ಸಮಾಜವಾದಿ ಜನತಾದಳ ಡೆಮೊಕ್ರೆಟಿಕ್, ಎನ್ಸಿಪಿ ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ ಸೇರಿ ಹೊಸರಂಗ ಅಸ್ತಿತ್ವಕ್ಕೆ ಬಂದಿದೆ.

ಸೀಟ್ ಹಂಚಿಕೆಯ ವಿವಾದ
ಸೀಟ್ ಹಂಚಿಕೆಯ ವಿವಾದದಿಂದ ಬೇಸತ್ತು ಮುಲಾಯಂ ಸಿಂಗ್ ಮಹಾಮೈತ್ರಿಕೂಟದಿಂದ ಹೊರನಡೆದಿದ್ದರು. 243 ಶಾಸಕರ ಬಿಹಾರ ಅಸೆಂಬ್ಲಿ ಚುನಾವಣೆಯಲ್ಲಿ ಎಸ್ಪಿಗೆ ಐದು ಸ್ಥಾನ ನೀಡಲು ಮೈತ್ರಿಕೂಟ ನಿರ್ಧರಿಸಿತ್ತು.

ಲಾಲೂ ಸಂಧಾನ ವಿಫಲ
ಯಾದವ್ ಸಮುದಾಯದ ಒಗ್ಗಟ್ಟನ್ನೇ ಬಿಹಾರ ಚುನಾವಣೆಯಲ್ಲಿ ಅಸ್ತ್ರವಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದ ಲಾಲೂ ಪ್ರಸಾ ಯಾದವ್ ಗೆ ಮುಲಾಯಂ ಸಿಂಗ್ ಯಾದವ್ ಮೈತ್ರಿಕೂಟದಿಂದ ಹೊರಬಂದಿದ್ದು ತೀವ್ರ ಮುಜುಗರ ತಂದಿತ್ತು. ಮುಲಯಾಂ ಜೊತೆ ಲಾಲೂ ನಡೆಸಿದ ಫಲಕೊಡಲಿಲ್ಲ.

ರಾಹುಲ್ ಗಾಂಧಿ ಸಭೆಯಲ್ಲಿ ಲಾಲೂ ಭಾಗವಹಿಸುತ್ತಿಲ್ಲ
ಕಾಂಗ್ರೆಸ್ ಪಕ್ಷಕ್ಕೆ ಬಿಹಾರದಲ್ಲಿ ಅಷ್ಟೇನೂ ನೆಲೆಯಿಲ್ಲ. ಆದರೆ ಮಹಾಮೈತ್ರಿಕೂಟದಲ್ಲಿ ಕಾಂಗ್ರೆಸ್ ಪಕ್ಷ ಕೂಡಾ ಒಂದು. ಇದೇ ಶನಿವಾರ (ಸೆ 19) ನಡೆಯಲಿರುವ ರಾಹುಲ್ ಗಾಂಧಿ ಭಾಗವಹಿಸುವ ಸಾರ್ವಜನಿಕ ಸಭೆಯಲ್ಲಿ ಲಾಲೂ ಭಾಗವಹಿಸದೇ ತನ್ನ ಮಗನನ್ನು ಸಭೆಯಲ್ಲಿ ಭಾಗವಹಿಸಲು ಸೂಚಿಸಿದ್ದಾರೆ ಎನ್ನುವ ಮಾಹಿತಿಯಿದೆ.

ನಾಳೆ ಎಸ್ಪಿ ಅಭ್ಯರ್ಥಿಗಳ ಘೋಷಣೆ
ಬಿಹಾರ ಅಸೆಂಬ್ಲಿಗೆ ಅಕ್ಟೋಬರ್ ಹನ್ನೆರಡರಂದು ನಡೆಯುವ ಮೊದಲ ಹಂತದ ಚುನಾವಣೆಗೆ (49 ಕ್ಷೇತ್ರ) ಎಸ್ಪಿ ನೇತೃತ್ವದ ಮೈತ್ರಿಕೂಟ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಶುಕ್ರವಾರ ( ಸೆ 18) ಪ್ರಕಟಿಸಲಿದೆ. ಈ ಮಧ್ಯೆ, ಲಾಲೂ ಪಕ್ಷದ ಪ್ರಭಾವಿ ಮುಖಂಡರಾಗಿದ್ದ ರಘುನಾಥ್ ಝಾ ಎಸ್ಪಿ ಮೈತ್ರಿಕೂಟಕ್ಕೆ ಜೈ ಎಂದಿದ್ದಾರೆ.












Click it and Unblock the Notifications