Bihar Election 2025: ಬಿಹಾರ್ AI ಮತ್ತು ಸೆಮಿಕಂಡಕ್ಟರ್ ಉತ್ಪಾದನಾ ಘಟಕ ಘೋಷಣೆ: ಸಿಎಂ
ಪಾಟ್ನಾ, ಅಕ್ಟೋಬರ್ 29: ಇತ್ತೀಚೆಗೆ ಗೂಗಲ್ ಎಐ ಹಬ್ ಯೋಜನೆ ಆಂಧ್ರದ ವಿಶಾಖಪಟ್ಟಣಂ ಪಾಲಾಗಿದ್ದಕ್ಕೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸಾಕಷ್ಟು ಚರ್ಚೆ ಆಗಿತ್ತು. ಇದೀಗ ವಿಧಾನಸಭಾ ಚುನಾವಣೆ ಮುನ್ನ ಅಭಿವೃದ್ಧಿ ಯೋಜನೆಗಳ ಘೋಷಣೆ ಮೂಲಕ ಮುಖ್ಯಮಂತ್ರಿ ನಿತೀಶ್ ಕುಮಾರ್ ಗೆಲುವಿನ ಪ್ಲಾನ್ ಮಾಡಿದ್ದಾರೆ. ಇದರಲ್ಲಿ ಅಭಿವೃದ್ಧಿ ಜೊತೆಗೆ ಚುನಾವಣೆ ಉದ್ದೇಶವು ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬಿಹಾರ ಚುನಾವಣೆ 2025ಗೆ ದಿನಗಣನೇ ಶುರುವಾಗಿದೆ. ಈ ಮಧ್ಯ ಬಿಹಾರದಲ್ಲಿ ಹೊಸ ಯುಗ ಆರಂಭವಾಗಲಿದೆ. ಒಡಿಶಾ, ಕರ್ನಾಟಕ ಮತ್ತು ಗುಜರಾತ್ ಮಾದರಿಯಲ್ಲಿ, ಬಿಹಾರದಲ್ಲಿ ಕೃತಕ ಬುದ್ಧಿಮತ್ತೆ (AI) ಮತ್ತು ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳ ಸಮೂಹವನ್ನು ಸ್ಥಾಪಿಸಲಾಗುವುದು. ಕೇಂಧ್ರ ಸರ್ಕಾರದ ಬೆಂಬಲದೊಂದಿಗೆ, ಪ್ರಮುಖ ಸಾರ್ವಜನಿಕ ವಲಯದ ಕಂಪನಿಗಳು ಬಿಹಾರದಲ್ಲಿ ಕೈಗಾರಿಕಾ ಘಟಕಗಳನ್ನು ಸ್ಥಾಪಿಸುತ್ತವೆ ಎಂದು ಸಿಎಂ ನಿತೀಶ್ ಕುಮಾರ್ ಹೇಳಿದರು.

ಬಿಹಾರದಲ್ಲಿ ಹೂಡಿಕೆ, ಉದ್ಯೋಗ ಮತ್ತು ಕೈಗಾರಿಕಾ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ. ಸ್ಥಳೀಯ ಸಂಪನ್ಮೂಲಗಳ ಉತ್ತಮ ಬಳಕೆಯನ್ನು ಖಚಿತಪಡಿಸುತ್ತದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಸ್ವತಃ ಇದನ್ನು ಘೋಷಿಸಿದ್ದಾರೆ. ಈ ಕಾರ್ಯಾಚರಣೆಗೆ ಸೇರುವುದರಿಂದ ಬಿಹಾರದಲ್ಲಿ ಚಿಪ್ ಉತ್ಪಾದನೆ, ಪ್ಯಾಕೇಜಿಂಗ್ ಮತ್ತು ವಿನ್ಯಾಸ ಘಟಕಗಳ ಸ್ಥಾಪನೆ ಸಾಧ್ಯವಾಗುತ್ತದೆ. ಅಲ್ಲದೇ ಹೈಟೆಕ್ ಉದ್ಯೋಗ, ಹೂಡಿಕೆ ಆಕರ್ಷಣೆಗೆ ಮತ್ತು ಕೈಗಾರಿಕೆ ಅಭಿವೃದ್ಧಿ ಸೇರಿದಂತೆ ಸಕಾರಾತ್ಮಕ ಬೆಳವಣಿಗೆಗೆ ಇದು ಉತ್ತೇಜನಕಾರಿಯಾಗಲಿದೆ.
ಭಾರತ ಸೆಮಿಕಂಡಕ್ಟರ್ ಮಿಷನ್‌ಗೆ ಬಿಹಾರ ಸೇರುತ್ತೆ..
ಸಿಎಂ ನಿತೀಶ್ ಕುಮಾರ್ ಅವರು ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಕೇಂದ್ರ ಸರ್ಕಾರದೊಂದಿಗೆ ಯೋಜನೆ ಸಾಕಾರದ ಚರ್ಚೆಗಳು ನಡೆಯುತ್ತಿವೆ ಎಂದು ಬರೆದಿದ್ದಾರೆ. ಬಿಹಾರವನ್ನು ಭಾರತ ಸೆಮಿ ಕಂಡಕ್ಟರ್ ಮಿಷನ್‌ನೊಂದಿಗೆ ಸಂಪರ್ಕಿಸಲು ಚರ್ಚೆಗಳು ನಡೆಯುತ್ತಿವೆ. ಈ ಕಾರ್ಯಾಚರಣೆಗೆ ಸೇರಲು, ಕೈಗಾರಿಕಾ ಕಾರಿಡಾರ್‌ಗಳು, ಉತ್ತಮ ಗುಣಮಟ್ಟದ ಮೂಲಸೌಕರ್ಯ, ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆ, ನೀರು ನಿರ್ವಹಣೆ ಮತ್ತು ಕೌಶಲ್ಯಪೂರ್ಣ ಮಾನವ ಸಂಪನ್ಮೂಲಗಳು ಅತ್ಯಗತ್ಯ, ಇವೆಲ್ಲವೂ ಈಗ ಬಿಹಾರದಲ್ಲಿ ಲಭ್ಯವಿದೆ.
ಈ ಮಿಷನ್ ಅಡಿಯಲ್ಲಿ, ಮಹಾರತ್ನ, ನವರತ್ನ ಮತ್ತು ಮಿನಿರತ್ನ ಉದ್ಯಮಗಳ ಮೂಲಕ ಬಿಹಾರದಲ್ಲಿ ಹೂಡಿಕೆ ಹೆಚ್ಚಿಸಲಾಗುವುದು. ಭಾರತಾದ್ಯಂತ ಅನೇಕ ರಾಜ್ಯಗಳಲ್ಲಿ ಕೈಗಾರಿಕೆಗಳನ್ನು ಯಶಸ್ವಿಯಾಗಿ ನಡೆಸುತ್ತಿರುವ ಬಿಹಾರದ ಉದ್ಯಮಿಗಳು ಮತ್ತು ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ಸಿಎಂ ನಿತೀಶ್ ಕುಮಾರ್ ನೇತೃತ್ವದ ಬಿಹಾರ ರಾಜ್ಯ ಸರ್ಕಾರ ಹೂಡಿಕೆದಾರರ ಆಹ್ವಾನಿಸಲಾಗುತ್ತದೆ. ಹೊಸ ಉದ್ಯೋಗ ಅವಕಾಶ ಸೃಷ್ಟಿಸಲು ಮುಂದಾಗಿದೆ.
ಬಿಹಾರದಲ್ಲಿ ರಕ್ಷಣಾ ಕೈಗಾರಿಕಾ ಕಾರಿಡಾರ್
"ಮೇಕ್ ಇನ್ ಇಂಡಿಯಾ" ಉಪಕ್ರಮದ ಅಡಿಯಲ್ಲಿ ರಕ್ಷಣಾ ಸಚಿವಾಲಯ ಮತ್ತು ರಕ್ಷಣಾ ಶಸ್ತ್ರಾಸ್ತ್ರ ತಯಾರಕರ ಸಹಕಾರದಲ್ಲಿ 'ರಕ್ಷಣಾ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳನ್ನು ತಯಾರಿಸಲು ಬಿಹಾರದಲ್ಲಿ 'ಬಿಹಾರ ರಕ್ಷಣಾ ಕೈಗಾರಿಕಾ ಕಾರಿಡಾರ್' ಅನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು. ಈ ಉದ್ದೇಶಕ್ಕಾಗಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವಕ್ಕೆ ಒತ್ತು ನೀಡಲಾಗುವುದು. "ಇಂದು, ನಮ್ಮ ಸರ್ಕಾರವು ಯುವಕರಿಗೆ ಸರ್ಕಾರಿ ಉದ್ಯೋಗಗಳು ಮತ್ತು ಉದ್ಯೋಗವನ್ನು ಒದಗಿಸಲು ಮಹತ್ವದ ಹೆಜ್ಜೆ ಇಟ್ಟಿದೆ ಎಂದು ತಿಳಿಸಿದರು.












Click it and Unblock the Notifications