Bihar Exit Poll : ಬಿಹಾರದಲ್ಲಿ ಅರಳಿದ NDA, ಮುದುಡಿದ ಇಂಡಿಯಾ ಮೈತ್ರಿಕೂಟ...Poll Diary Survey 2025
ಬಿಹಾರ ವಿಧಾನಸಭಾ ಚುನಾವಣೆಯ 2025 ಮತದಾನ ಪ್ರಕ್ರಿಯೆ ಇಂದು ನವೆಂಬರ್ 11ರಂದು ಪೂರ್ಣಗೊಳ್ಳುತ್ತಿದ್ದಂತೆ Poll Diary Exit Poll ಸಮೀಕ್ಷೆ ಫಲಿತಾಂಶ ಬಿಡುಗಡೆ ಗೊಂಡಿದೆ. ಪೋಲ್ ಡೈರಿ ಪ್ರಕಾರ, ರಾಜ್ಯದಲ್ಲಿ ಮತ್ತೆ ಬಿಜೆಪಿ ಹಾಗೂ ಜೆಡಿಯು ತಮ್ಮ ಸಹಕಾರ ಮುಂದುವರಿಸಿ ಮುಂದಿನ 05 ವರ್ಷ ಆಡಳಿತ ನಡೆಸಲಿವೆ. ಮ್ಯಾಜಿಕ್ ಸಂಖ್ಯೆಯಷ್ಟು ಸ್ಥಾನ ಗಳಿಸಿದ ಮಹಾಘಟಬಂಧನ್ ಮೈತ್ರಿಕೂಟಕ್ಕೆ ಭಾರೀ ಹಿನ್ನಡೆ ಆಗಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ.
ಬಿಹಾರ ರಾಜ್ಯದಲ್ಲಿ ಒಟ್ಟು 243 ಕ್ಷೇತ್ರಗಳ ಪೈಕಿ ಅರ್ಧಕ್ಕಿಂತಲೂ ಹೆಚ್ಚಿನ ಸ್ಥಾನಗಳು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಪಾಲಾಗಲಿವೆ. ಎನ್‌ಡಿಎ ಈ ಬಾರಿಯು ಪ್ರಚಂಡ ಬಹುಮತ ಪಡೆಯಲಿದೆ ಎಂದು ಈ ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಎನ್‌ಡಿಎ 184 ರಿಂದ 209 ಸ್ಥಾನಗಳಲ್ಲಿ ಅರಳಲಿದೆ. ಉಳಿದ ಸ್ಥಾನಗಳ ಪೈಕಿ ಕೇವಲ 32ರಿಂದ 49 ಸ್ಥಾನಗಳು ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದ ಪಾಲಾಗಲಿವೆ. ಇತರೆ ಪಕ್ಷಗಳು ಸುಮಾರು 05 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿವೆ ಎಂದು ಸಮೀಕ್ಷೆ ತಿಳಿಸಿದೆ.

ಈ ಬಾರಿ ಬಿಹಾರ ಚುನಾವಣೆಯಲ್ಲೂ ಇಂಡಿಯಾ ಮೈತ್ರಿಕೂಟದ ಎಲ್ಲ ಪ್ಲಾನ್‌ಗಳು ಉಲ್ಟಾ ಹೊಡೆದಿವೆ. ಅಧಿಕಾರದ ಆಸೆ ಕಮರಿದ್ದು, ವಿಪಕ್ಷ ಸ್ಥಾನವೇ ಗಟ್ಟಿಯಾಗಿದೆ ಎಂದು ಪೋಲ್ ಡೈರಿ ಸಮೀಕ್ಷೆಯಿಂದ ತಿಳಿದು ಬಂದಿದೆ. ಈ ಫಲಿತಾಂಶವೇ ಅಂತಿಮವಲ್ಲ. ಕೇಂದ್ರ ಚುನಾವಣೆ ಆಯೋಗದಿಂದ ಅಂತಿಮ ಮತ್ತು ಅಧಿಕೃತ ಫಲಿತಾಂಶವು ನವೆಂಬರ್ 11ರಂದು ಪ್ರಕಟವಾಗಲಿದೆ. ಸದ್ಯ ಚುನಾವಣೋತ್ತರ ಸಮೀಕ್ಷೆಯು ಎನ್‌ಡಿಎ ಪರವಾಗಿದ್ದು, ಮಹಾಘಟಬಂಧನ್ ಈ ಸಮೀಕ್ಷೆಗಳನ್ನು ತಿರಸ್ಕರಿಸಿವೆ.
ಒಟ್ಟು ಎರಡು ಹಂತಗಳ ಮತದಾನ ನಡೆದಿದೆ. ನವೆಂಬರ್ 06ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ 63.66ರಷ್ಟು ಮತದಾನ ನಡೆದಿದೆ. ಎರಡನೇ ಹಂತದ ಚುನಾವಣೆಯಲ್ಲಿ ಬರೊಬ್ಬರಿ 68.52ರಷ್ಟು ಮತದಾನ ನಡೆದಿದೆ. ಇದರಿಂದಾಗಿ ಎನ್‌ಡಿಎ ಅಭ್ಯರ್ಥಿಗಳು, ಬಿಜೆಪಿ ಮತ್ತು ಜೆಡಿಯು ನಾಯಕರುಗಳು ಈ ಬಾರಿಯು ತಾವು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.
ನವೆಂಬರ್ 11ಕ್ಕೆ 2,616 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
ಒಟ್ಟು 07 ಕೋಟಿಗೂ ಅಧಿಕ ಮತದಾರರಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. ಮೈತ್ರಿಕೂಟ, ಪ್ರಮುಖ ಪಕ್ಷಗಳು ಸೇರಿದಂತೆ ಎಲ್ಲ ಪಕ್ಷಗಳಿಂದ ಒಟ್ಟು ಸುಮಾರು 2,616 ಅಭ್ಯರ್ಥಿಗಳು ಸ್ಫರ್ಧಿಸಿದ್ದರು. ಈ ಬಾರಿ 21.53 ಲಕ್ಷ ಹೊಸ ಮತದಾರರು ಮತದಾನ ಮಾಡಿದ್ದಾರೆ. ಒಟ್ಟು 68.66 ಲಕ್ಷ ಅನರ್ಹ ಮತದಾರರನ್ನು ಪಟ್ಟಿಯಿಂದ ಕೈ ಬಿಟ್ಟಿರುವುದಾಗಿ ಕೇಂದ್ರ ಚುನಾವಣೆ ಆಯೋಗ ಮಾಹಿತಿ ನೀಡಿದೆ.












Click it and Unblock the Notifications