Bihar Exit Poll 2025: ಎನ್‌ಡಿಗೆ ಮತ್ತೆ ಬಹುಮತ, ಮಹಾಘಟಬಂಧನ್‌ಗೆ ಹಿನ್ನಡೆ: ಮೆಟ್ರಿಜ್ ಸರ್ವೇ
ಪಾಟ್ನಾ, ನವೆಂಬರ್ 11: ಬಿಹಾರ ವಿಧಾನಸಭಾ ಚುನಾವಣೆಗೆ 2025 ಇಂದು ತೆರೆ ಬಿದ್ದಿದೆ. ಇಂದು ಮಂಗಳವಾರ (ನವೆಂಬರ್ 11) ಎರಡನೇ ಹಂತದ ಮತದಾನ ಪೂರ್ಣಗೊಂಡಿದೆ. ನವೆಂಬರ್ 14ರಂದು ಅಂತಿಮ ಫಲಿತಾಂಶ ಬಿಡುಗಡೆಯಾಗಲಿದೆ. ಅದಕ್ಕು ಮುನ್ನವೇ Metriz/IANS Exit Poll 2025 ಬಿಹಾರ ಚುನಾವಣೋತ್ತರ ಸಮೀಕ್ಷೆ (Bihar Exit Poll Results 2025) ಪ್ರಕಟಿಸಿದೆ. ಇದರ ಪ್ರಕಾರ ಬಿಜೆಪಿ ನೇತೃತ್ವದ ಎನ್‌ಡಿಗೆ ಗೆ ಮತ್ತೆ ಅದೃಷ್ಟ ಒಲಿಯಲಿದೆ. ಅಧಿಕಾರದಿಂದ ಕೆಳಗಿಳಿಸಬೇಕು ಎಂಬ ವಿಪಕ್ಷಗಳ ಮೈತ್ರಿಕೂಟಕ್ಕೆ ಮಹಾ ಹಿನ್ನಡೆ ಉಂಟಾಗಲಿದೆ.
Metriz Exit Poll 2025 ಚುನಾವಣೋತ್ತರ ಸಮೀಕ್ಷೆ ಮುಂದುವರಿದು ನೋಡುವುದಾದರೆ, ಬಿಹಾರದ 243 ಕ್ಷೇತ್ರಗಳ ಪೈಕಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಮುನ್ನಡೆ ಸಾಧಿಸಿದೆ. ಎನ್‌ಡಿಎ ಮೈತ್ರಿ ಕೂಟವು 147ರಿಂದ 167 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಇನ್ನೂ ಮಹಾಘಟಬಂಧನ್ 70ರಿಂದ 90 ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಲಿದೆ. ಜಿಎಸ್‌ಪಿ 0 -02 ಹಾಗೂ ಪಕ್ಷೇತರರು 02ರಿಂದ 08 ಸ್ಥಾನಗಳಿಗೆ ತೃಪ್ತಿ ಹೊಂದಲಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಿದೆ.

ಬಿಹಾರದಲ್ಲಿ ಅಧಿಕಾರ ಹಿಡಿಯಲು ಮ್ಯಾಜಿಕ್ 122 ಸ್ಥಾನ ಪಡೆಯಬೇಕು. ಮೆಟ್ರಿಜ್ ಪ್ರಕಾರ, ಎನ್‌ಡಿಎ ಅತ್ಯಧಿಕ ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದಿದೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸರ್ಕಾರದ ಹಲವಾರು ಸಚಿವರು ಸೇರಿದಂತೆ ಒಟ್ಟು 2,616 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಮತದಾರರು ಬರೆಯಲಿದ್ದಾರೆ. ಮೊದಲ ಹಂತದಲ್ಲಿ ಒಟ್ಟು 64.66ರಷ್ಟು ಮತದಾನ ಆಗಿತ್ತು. ನವೆಂಬರ್ 11ರಂದು ಬಿಡುಗಡೆ ಆಗಲಿವೆ ಅಂತಿಮ ಫಲಿತಾಂಶದ ಮೇಲೆ ರಾಜ್ಯ ಜನರ ಕುತೂಹಲ ಮೂಡಿದೆ.
ಬಿಹಾರ ರಾಜ್ಯವು ಒಟ್ಟು 243 ವಿಧಾನಸಭಾ ಸದಸ್ಯ ಸ್ಥಾನಗಳನ್ನು ಹೊಂದಿದೆ. ಮೊದಲ ಹಂತದಲ್ಲಿ ಒಟ್ಟು 121 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 06ರಂದು ಚುನಾವಣೆ ನಡೆದರೆ, ಎರಡನೇ ಹಂತದಲ್ಲಿ ಮತದಾನವು 122 ಕ್ಷೇತ್ರಗಳಿಗೆ ನಡೆಯಿತು. ಮೊದಲ ಹಂತದಲ್ಲಿ 1,314 ಅಭ್ಯರ್ಥಿಗಳು ಕಣದಲ್ಲಿದ್ದರು. ಎರಡನೇ ಹಂತದಲ್ಲಿ ಒಟ್ಟು 1,302 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಇವರೆಲ್ಲ ರಾಜಕೀಯ ಭವಿಷ್ಯ ಚುನಾವಣೆ ಆಯೋಗ ಬಿಡುಗಡೆ ಮಾಡಲಿರುವ ನವೆಂಬರ್ 14ರ ಫಲಿತಾಂಶದ ಮೇಲೆ ನಿಂತಿದೆ.
ಬಿಹಾರ ಚುನಾವಣೆ 2025 ಮುಖ್ಯಾಂಶಗಳು
* ಒಟ್ಟು ಅಭ್ಯರ್ಥಿಗಳು: 2,616
* ಒಟ್ಟು ಮತದಾರರು : 7.42 ಕೋಟಿ
* ಹೊಸ ಮತದಾರರು : 21.53 ಲಕ್ಷ (2.15 ಮಿಲಿಯನ್)
* ಅನರ್ಹ, ಪಟ್ಟಿಯಿಂದ ಕೈ ಬಿಟ್ಟ ಮತದಾರರು: ಒಟ್ಟು 68.66 ಲಕ್ಷ
* ಮೊದಲ ಬಾರಿಗೆ ಮತದಾನ : ಮಾಡಿದವರು: 14 ಲಕ್ಷ (1.4 ಮಿಲಿಯನ್)
* ಒಟ್ಟು ಮಹಿಳಾ ಮತದಾರರು: 3.7 ಕೋಟಿ
* ಎರಡನೇ ಹಂತದಲ್ಲಿ ಮತದಾನ ಮಾಹಿಡಿ ಮಹಿಳೆಯರ ಸಂಖ್ಯೆ :1.75 ಕೋಟಿ












Click it and Unblock the Notifications