ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬಿಗ್ ಕ್ಯಾಟ್, ನಿಂಜಾ ಫಾಕ್ಸ್' ಗುಜರಾತ್ ಐಸಿಸ್ ಉಗ್ರರ ಕೋಡ್ ವರ್ಡ್

ಗುಜರಾತಿನಲ್ಲಿ ಬಂಧಿತರಾದ ಶಂಕಿತ ಉಗ್ರ ಸಹೋದರರಿಗೆ ಐಸಿಸ್ ಸಂಘಟನೆಯಲ್ಲಿ 'ಬಿಗ್ ಕ್ಯಾಟ್' ಮತ್ತು 'ನಿಂಜಾ ಫಾಕ್ಸ್' ಎಂಬ ಅಡ್ಡ ಹೆಸರಿಡಲಾಗಿತ್ತು. ಈ ಕೋಡ್ ವರ್ಡ್ ಮೂಲಕವೇ ಕಾರ್ಯಾಚರಣೆ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.

By ವಿಕಾಸ್ ನಂಜಪ್ಪ
|
Google Oneindia Kannada News

ಅಹಮದಾಬಾದ್, ಮಾರ್ಚ್ 1: ಗುಜರಾತಿನಲ್ಲಿ ಬಂಧಿತರಾದ ಶಂಕಿತ ಉಗ್ರ ಸಹೋದರರಿಗೆ ಐಸಿಸ್ ಸಂಘಟನೆಯಲ್ಲಿ 'ಬಿಗ್ ಕ್ಯಾಟ್' ಮತ್ತು 'ನಿಂಜಾ ಫಾಕ್ಸ್' ಎಂಬ ಅಡ್ಡ ಹೆಸರಿಡಲಾಗಿತ್ತು. ಈ ಕೋಡ್ ವರ್ಡ್ ಮೂಲಕವೇ ಅವರು ಕಾರ್ಯಾಚರಣೆ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.

ಗುಜರಾತಿನಲ್ಲಿ ಬಂಧಿತರಾದ ನಯೀಮ್ ಮತ್ತು ವಸೀಮ್ ರಾಮೋದಿಯಾ ಮತ್ತು ಅವರ ಸೂತ್ರದಾರರ ಜತೆ ಈ ಎರಡು ಹೆಸರುಗಳೊಂದಿಗೆ ಸಂಭಾಷಣೆ ನಡೆಯುತ್ತಿತ್ತು ಎಂದು ಗುಪ್ತಚರ ಮೂಲಗಳಿಂದ ತಿಳಿದು ಬಂದಿದೆ.[ಸಿಮಿ ಸಂಘಟನೆಯ ನಾಯಕ ಹಾಗೂ 10 ಮಂದಿಗೆ ಜೀವಾವಧಿ ಶಿಕ್ಷೆ]

ಟೆಲಿಗ್ರಾಂ ಆ್ಯಪ್ ಮೂಲಕ 'ಎಂಡ್ ಟು ಎಂಡ್' ಗುಪ್ತ ಭಾಷೆಯಲ್ಲಿ ಸಂಭಾಷಣೆಗಳನ್ನು ನಡೆಸುತ್ತಿದ್ದರು. ಸಂಭಾಷಣೆ ಹಿಂದಿ ಭಾಷೆಯಲ್ಲಿದ್ದು ಇವರ ಸೂತ್ರದಾರ ಭಾರತೀಯನೇ ಇರಬಹುದು ಎಂದುಕೊಳ್ಳಲಾಗಿದೆ. ಗುಜರಾತ್ ಎಟಿಎಸ್ ಮುಖ್ಯಸ್ಥ ಹಿಮಾಂಶು ಶುಕ್ಲಾ ಪ್ರಕಾರ ಸೂತ್ರದಾರ ಭಾರತದಿಂದ ಹೊರಗೆ ಇರಬಹುದು ಎಂದು ಅಂದಾಜು ಮಾಡಿದ್ದಾರೆ. ಆತನ ಮೂಲ ಯಾವುದು, ಆತ ಎಲ್ಲಿರಬಹುದು ಎಂಬುದನ್ನು ಪತ್ತೆ ಹಚ್ಚುವ ಕೆಲಸದಲ್ಲಿ ಪೊಲೀಸರು ನಿರತರಾಗಿದ್ದಾರೆ.[ಪಾಕ್ ಪೌರತ್ವ ಪಡೆದ ಗೋವಾ ಪ್ರಜೆಗಳ 100 ಕೋಟಿ ರು. ಆಸ್ತಿ ಪತ್ತೆ!]

Big cat, Ninja fox' were profiles used by Gujarat Islamic State operatives

ತಂತ್ರಜ್ಞಾನ ತಂದ ಸಮಸ್ಯೆಗಳು

ಸದ್ಯ ಉಗ್ರರು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಸಂಭಾಷಣೆಗೆ ಬಳಸುತ್ತಿದ್ದು ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳಿಗೆ ಕಗ್ಗಂಟಾಗಿದೆ. ಅದರಲ್ಲೂ ಲಷ್ಕರ್ ಎ ತಯ್ಯಾಬಾದಂಥ ಸಂಘಟನೆಗಳು ಮುಂದುವರಿದ ಜಪಾನ್ ತಂತ್ರಜ್ಞಾನಗಳಲ್ಲಿ ಸಂಭಾಷಣೆ ನಡೆಸುತ್ತಿವೆ.[ಜಾರಿ ನಿರ್ದೇಶನಾಲಯದ ಸಮನ್ಸ್ ಸಿಕ್ಕಿಲ್ಲ ಎಂದ ಜಾಕಿರ್ ನಾಯಕ್]

ಇತ್ತೀಚೆಗೆ ಸೇನೆ ಬಂಧಿಸಿದ ಲಷ್ಕರ್ ಉಗ್ರ ಸಾಜಿದ್ ಅಹ್ಮದ್ ಬಳಿಯಲ್ಲಿ ರೇಡಿಯೋ ಜತೆ ಸಂಪರ್ಕಿಸಿದ ಮೊಬೈಲ್ ಫೋನ್ ಗಳು ಸಿಕ್ಕಿವೆ. ವಿಚಾರಣೆ ವೇಳೆ ಹೀಗೆ ಮಾಡುವಂತೆ ಆತನಿಗೆ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಸೂಚಿಸಿದ್ದಾಗಿ ಹೇಳಿದ್ದಾನೆ.

ಹೀಗೆ ಅತ್ಯಾಧುನಿಕ ಸಂಭಾಷಣೆಗಳ ಮೂಲಕ ಸಂಭಾಷಣೆಗಳು ನಡೆಯುತ್ತಿರುವುದರಿಂದ ಉಗ್ರರನ್ನು ಬೆನ್ನಟ್ಟುವುದು ಗುಪ್ತಚರ ಇಲಾಖೆಗಳ ಪಾಲಿಗೆ ಕಗ್ಗಂಟಾಗಿದೆ.

English summary
Big cat and Ninja Fox' were the two profile names that were used by a handler of South Asian origin to communicate with the two brothers who were arrested in Gujarat for their alleged links with the Islamic State. Messages exchanged between the handler and Vaseem Ramodiya had come under the scanner of the Intelligence Bureau following which was arrested along with his brother Naeem.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X