ಮಹಿಳೆಯನ್ನು ಒತ್ತೆಯಾಳು ಮಾಡಿಕೊಂಡು ಮದುವೆಗೆ ಉ.ಪ್ರ. ಭೂಪ ಒತ್ತಾಯ
ಭೋಪಾಲ್ (ಮಧ್ಯಪ್ರದೇಶ), ಜುಲೈ 13: ಇಲ್ಲಿನ ಯುವತಿಯೊಬ್ಬರನ್ನು ವ್ಯಕ್ತಿಯೊಬ್ಬ ಪಿಸ್ತೂಲು ತೋರಿಸಿ, ಆಕೆಯ ಮನೆಯಲ್ಲೇ ಒತ್ತೆಯಾಳಾಗಿ ಇರಿಸಿಕೊಂಡಿದ್ದಾನೆ. ಆಕೆಯನ್ನು ಪ್ರೀತಿಸುತ್ತಿರುವ ಆತ ಮದುವೆ ಆಗಬೇಕು ಅಂತ ಬೇರೆ ಹೇಳ್ತಿದ್ದಾನೆ. ಇನ್ನೂ ವಿಚಿತ್ರ ಏನೆಂದರೆ ಆ ಮನೆಯ ಕಿಟಕಿಯಿಂದ ಆಚೆಗೆ ಈ ಆಸಾಮಿ ಗೆಲುವಿನ ಚಿಹ್ನೆ ಬೇರೆ ತೋರಿಸುತ್ತಿದ್ದಾನಂತೆ.
ಕಟ್ಟಡದೊಳಗೆ ನುಗ್ಗಿ, ಯುವತಿ ರಕ್ಷಣೆಗೆ ಯತ್ನಿಸಿದ ಪೊಲೀಸರಿಗೂ ಮೂವತ್ತು ವರ್ಷದ, ಉತ್ತರಪ್ರದೇಶ ಆಲಿಘಡ ಮೂಲದ ಆರೋಪಿ ರೋಹಿತ್ ಹೆದರಿಸಿದ್ದಾನೆ. ಸಬ್ ಇನ್ ಸ್ಪೆಕ್ಟರ್ ಜಿ.ಎಸ್.ರಜಪೂತ್ ಹೇಳುವ ಪ್ರಕಾರ, ಬಂದಿಯಾಗಿರುವ ಆಕೆ ರಕ್ತಸಿಕ್ತವಾಗಿದ್ದಾರೆ. ಅಧಿಕಾರಿ ಮೇಲೂ ಆರೋಪಿ ಹಲ್ಲೆ ನಡೆಸಿದ್ದಾನೆ.

ತನಗೆ ಸ್ಟ್ಯಾಂಪ್ ಪೇಪರ್ ಹಾಗೂ ಮೊಬೈಲ್ ಚಾರ್ಜರ್ ಬೇಕು ಅಂತ ಬೇರೆ ಆರೋಪಿ ಕೇಳಿದ್ದಾನಂತೆ. ಈ ರೀತಿ ಆಗಿದೆ ಎಂದು ಅಕ್ಕಪಕ್ಕದವರು ದೂರು ನೀಡಿದ ನಂತರ ಪೊಲೀಸರು ಸ್ಥಳವನ್ನು ತಲುಪಿದ್ದಾರೆ. ಅದಕ್ಕೂ ಮುನ್ನ ಸ್ಥಳೀಯರೇ ಆರೋಪಿಯ ಮನವೊಲಿಸಲು ಪ್ರಯತ್ನ ಪಟ್ಟಿದ್ದಾರೆ.
ಆರೋಪಿಯ ಸ್ನೇಹಿತರೂ ಬಾಗಿಲು ತೆರೆಯುವಂತೆ ಮನವೊಲಿಸಲು ಯತ್ನಿಸಿದ್ದಾರೆ. ಅದು ಕೂಡ ಸಫಲವಾಗಿಲ್ಲ.












Click it and Unblock the Notifications