ಒಮ್ಮೆ ಹೂಡಿಕೆ ಮಾಡಿದ್ರೆ ಸಾಕು: ಪೋಸ್ಟ್‌ ಆಫೀಸ್‌ ಸ್ಕೀಮ್‌ನಿಂದ ಪ್ರತಿ ತಿಂಗಳು ₹5,001 ಆದಾಯ!

ತಮ್ಮ ಆದಾಯದ ಸ್ವಲ್ಪ ಭಾಗವನ್ನು ಉಳಿತಾಯ ಮಾಡಬೇಕು ಎನ್ನುವುದು ಪ್ರತಿಯೊಬ್ಬರ ಬಯಕೆಯಾಗಿರುತ್ತದೆ. ತಾವು ಉಳಿತಾಯ ಮಾಡುವ ಹಣ ಸುರಕ್ಷಿತವಾಗಿರುವುದು ಮಾತ್ರವಲ್ಲ, ಗಮನಾರ್ಹ ಆದಾಯವನ್ನು ಗಳಿಸಬೇಕು ಎನ್ನುವ ಆಸೆಯೂ ಇರುತ್ತದೆ. ಹಾಗಾಗಿ ಹೂಡಿಕೆಗೆ ಬೆಸ್ಟ್‌ ಜಾಗ ಅಥವಾ ಸ್ಕೀಮ್‌ ಯಾವುದು ಎನ್ನುವ ಹುಡುಕಾಟದಲ್ಲಿ ಇರುತ್ತಾರೆ. ಅಂಥವರಿಗಾಗಿ ಪೋಸ್ಟ್‌ ಆಫೀಸ್‌ನ ಝೀರೋ ರಿಸ್ಕ್‌ ಸ್ಕೀಮ್‌ ಇದೆ.

ನಾವು ಮಾಡುವ ಹೂಡಿಕೆ ಹಣದಿಂದ ಖಚಿತವಾದ ಮಾಸಿಕ ಆದಾಯ ಬೇಕು ಎಂದು ಅಂದುಕೊಳ್ಳುವವರಿಗೆ ಪೋಸ್ಟ್‌ ಆಫೀಸ್‌ ನಡೆಸುವ ಮಾಸಿಕ ಆದಾಯ ಯೋಜನೆ ಉತ್ತಮ ಆಯ್ಕೆಯಾಗಿರಲಿದೆ. ಅಂಚೆ ಕಚೇರಿ ಯೋಜನೆಗಳಲ್ಲಿ ಹೂಡಿಕೆ ಮಾಡುವ ಹಣ ಸುರಕ್ಷಿತವಾಗಿರುವುದು ಮಾತ್ರವಲ್ಲ, ಇದಕ್ಕೆ ಸರ್ಕಾರ ಉತ್ತಮ ಬಡ್ಡಿಯನ್ನು ಕೂಡಾ ನೀಡುತ್ತದೆ. PO MISನಲ್ಲಿ ಮಾಡುವ ಹೂಡಿಕೆ ಪ್ರತೀ ತಿಂಗಳು ನಿಯಮಿತ ಆದಾಯ ತಂದುಕೊಡುತ್ತದೆ. ಇಲ್ಲಿ ಒಮ್ಮೆ ಹೂಡಿಕೆ ಮಾಡಿದರೆ ಸಾಕು, ನಂತರ ಬಡ್ಡಿ ರೂಪದಲ್ಲಿ ಪ್ರತೀ ತಿಂಗಳು ಹಣ ನಿಮ್ಮ ಕೈ ಸೇರುತ್ತಾ ಇರುವುದು.

Best Post Office Scheme Invest One Time IN MIS And Get 5001 Rupees Interest In Every Month

ಇದೊಂದು ಝೀರೋ ರಿಸ್ಕ್‌ ಸ್ಕೀಮ್‌

ಅಂಚೆ ಕಚೇರಿ ನಿರ್ವಹಿಸುವ ಸರ್ಕಾರಿ ಯೋಜನೆಗಳ ವಿಶೇಷತೆಯೆಂದರೆ, ಇದರಲ್ಲಿ ಯಾವುದೇ ಅಪಾಯ ಇರುವುದಿಲ್ಲ ಅಂದರೆ ಇದು ಝೀರೋ ರಿಸ್ಕ್‌ ಸ್ಕೀಮ್.‌ ಇಲ್ಲಿ ಹಣ ಕಳೆದುಕೊಳ್ಳುವ ಭಯ ಇರುವುದಿಲ್ಲ.ಯಾಕೆಂದರೆ ಇಲ್ಲಿ ಮಾಡುವ ಪ್ರತಿಯೊಂದು ಹೂಡಿಕೆಯ ಸುರಕ್ಷತೆ ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ನಾವು ಮಾಡುವ ಹೂಡಿಕೆ ದೊಡ್ಡದಾಗಿರಲಿ, ಸಣ್ಣದಾಗಿರಲಿ ಸರ್ಕಾರ ನಮ್ಮ ಇನ್‌ವೆಸ್ಟ್‌ಮೆಂಟ್‌ನ ಸುರಕ್ಷತೆಗೆ ಗ್ಯಾರಂಟಿ ಕೊಡುತ್ತದೆ. ಜೊತೆಗೆ ಅಂಚೆ ಕಚೇರಿ MIS ನಂತಹ ಯೋಜನೆಗಳ ಮೂಲಕ ಮಾಸಿಕ ಆದಾಯದ ಗ್ಯಾರಂಟಿಯೂ ಇರುತ್ತದೆ.

ಅತಿ ಹೆಚ್ಚು ಬಡ್ಡಿ ಕೂಡಾ ಸಿಗುತ್ತದೆ

ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (MIS) ಒಂದು ಸುರಕ್ಷಿತ ಸ್ಕೀಮ್‌ ಮಾತ್ರವಲ್ಲ ಇದರ ಮೇಲೆ ಮಾಡುವ ಹೂಡಿಕೆಗೆ 7.40% ಬಡ್ಡಿ ಕೂಡಾ ಸಿಗುತ್ತದೆ. 18 ವರ್ಷಕ್ಕಿಂತ ಮೇಲ್ಪಟ್ಟ ಯಾರು ಬೇಕಾದರೂ ಈ ಖಾತೆಯನ್ನು ತೆರೆಯಬಹುದು. ಒಟ್ಟು ಮೊತ್ತದ ಹೂಡಿಕೆಗಳಿಗೆ ಲಾಕ್‌ ಇನ್‌ ಪಿರೀಯೆಡ್‌ ಐದು ವರ್ಷಗಳು.

ಜಂಟಿ ಖಾತೆಯನ್ನೂ ತೆರೆಯಬಹುದು

ಬಹಳ ಕಡಿಮೆ ಮೊತ್ತದೊಂದಿಗೆ ಕೂಡಾ ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಬಹುದು. ಈ ಝೀರೋ ರಿಸ್ಕ್‌ ಇನವೆಸ್ಟ್‌ಮೆಂಟ್‌ ಸ್ಕೀಮ್‌ನಲ್ಲಿ ಕೇವಲ 1,000 ರೂಪಾಯಿಯಿಂದ ಆರಂಭಿಕ ಹೂಡಿಕೆ ಮಾಡಬಹುದು. ಪೋಸ್ಟ್ ಆಫೀಸ್ MIS ಯೋಜನೆಯು ಏಕ ಮತ್ತು ಜಂಟಿ ಖಾತೆ ತೆರೆಯಲು ಅವಕಾಶ ನೀಡುತ್ತದೆ. ಗರಿಷ್ಠ ಮೂವರು ಒಟ್ಟಿಗೆ ಈ ಖಾತೆಯನ್ನು ತೆರೆಯಬಹುದು.

ಬಡ್ಡಿಯಿಂದಲೇ ಉತ್ತಮ ಗಳಿಕೆಗೆ ಅವಕಾಶ

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯ ವಿಶೇಷತೆಯೆಂದರೆ ಇದರಲ್ಲಿ ಒಮ್ಮೆ ಹೂಡಿಕೆ ಮಾಡಿದರೆ ಸಾಕು. ನಂತರ, ಈ ಸ್ಕೀಮ್‌ ಮುಗಿಯುವವರೆಗೆ ನಿಗದಿಪಡಿಸಿದ ಬಡ್ಡಿದರವು ಪ್ರತೀ ತಿಂಗಳು ನಿಮ್ಮ ಕೈ ಸೇರುತ್ತದೆ. ತ್ರೈಮಾಸಿಕ ಬದಲಾವಣೆಗಳ ಸಮಯದಲ್ಲಿ ಸರ್ಕಾರವು ಪೋಸ್ಟ್ ಆಫೀಸ್ MIS ಈ ಸ್ಕೀಮ್‌ನ ನಿಯಮಗಳ ಪ್ರಕಾರ ಒಂದೇ ಖಾತೆಯನ್ನು ತೆರೆಯಲು ಗರಿಷ್ಠ 9 ಲಕ್ಷ ರೂ.ಗಳವರೆಗೆ ಹೂಡಿಕೆ ಮಾಡಬಹುದು. ಆದರೆ, ಜಂಟಿ ಖಾತೆಯಲ್ಲಿ ಗರಿಷ್ಠ 15 ಲಕ್ಷ ರೂ.ಗಳನ್ನು ಹೂಡಿಕೆ ಮಾಡಬಹುದು.

ತಿಂಗಳಿಗೆ 5,001 ರೂ. ಗಳಿಸುವುದು ಹೀಗೆ

ಈ ಪೋಸ್ಟ್ ಆಫೀಸ್ ಯೋಜನೆಯಡಿಯಲ್ಲಿ ತಿಂಗಳಿಗೆ 5,000 ರೂಪಾಯಿಗಳನ್ನು ಗಳಿಸುವುದು ಹೇಗೆ ಎಂದು ಲೆಕ್ಕಾಚಾರ ಹಾಕುತ್ತಿದ್ದರೆ ಅದರ ವಿವರಣೆ ಬಹಳ ಸುಲಭ. ಇದಕ್ಕಾಗಿ ನೀವು ಒಂದೇ ಖಾತೆಯಲ್ಲಿ 8,11,000 ರೂ. ಹೂಡಿಕೆ ಮಾಡಬೇಕಾಗುತ್ತದೆ. ವಾರ್ಷಿಕ 7.4% ಬಡ್ಡಿದರದ ಅಂದಾಜಿನಲ್ಲಿ ಮಾಸಿಕ ಆದಾಯವು 5,001 ಕ್ಕೆ ಸ್ಥಿರವಾಗಿರುತ್ತದೆ. ಅಂದರೆ, ಈ ಆದಾಯ ಬಡ್ಡಿಯಿಂದಲೇ ಬರುವಂಥದ್ದು. ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡುವಾಗ, ಖಾತೆಯನ್ನು ಮುಕ್ತಾಯದವರೆಗೆ ಚಾಲ್ತಿಯಲ್ಲಿಟ್ಟರೆ ಮಾತ್ರ ನೀವು ಅದರ ಸಂಪೂರ್ಣ ಪ್ರಯೋಜನಗಳನ್ನು ಪಡೆಯುವುದು ಸಾಧ್ಯವಾಗುವುದು. ನೀವು ಖಾತೆಯನ್ನು ತೆರೆದ ಒಂದರಿಂದ ಮೂರು ವರ್ಷಗಳ ಒಳಗೆ ಕ್ಲೋಸ್‌ ಮಾಡಿದರೆ ಅಸಲಿನ 2% ಕಡಿತಗೊಳಿಸಲಾಗುತ್ತದೆ. ಮೂರು ಮತ್ತು ಐದು ವರ್ಷಗಳ ನಡುವೆ ಅಕೌಂಟ್‌ ಕ್ಲೋಸ್‌ ಮಾಡಿದರೆ 1% ಹಣವನ್ನು ಕಡಿತಗೊಳಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+