ಬೆಂಗಳೂರಿನ ಜನರಿಗೆ ದಿಢೀರ್ ಚಳಿಯ ಆಘಾತ, ಚಳಿಗಾಲದಲ್ಲಿ ಹಿಮಾಲಯ ಆಗಲಿದೆಯಾ ರಾಜಧಾನಿ? Bengaluru Weather
ಚಳಿ.. ಚಳಿ.. ಹೀಗೆ ಚಳಿಗಾಲದಲ್ಲಿ ಜನರು ಪರದಾಡುತ್ತಿದ್ದು, ಯಾವಾಗ ಚಳಿಗಾಲ ಮುಗಿದು ಬೇಸಿಗೆ ಬರುತ್ತೋ ಅಂತಾ ಕಾಯುತ್ತಿದ್ದಾರೆ. ಇನ್ನು ಬೇಸಿಗೆ ಬಂದಾಗ ತುಂಬಾ ಸೆಕೆ ಅನ್ನೋದು ಕೂಡ ಇದೇ ಜನರು. ಹೀಗೆ ಎಲ್ಲಾ ವಾತಾವರಣ ಅತಿಯಾದರೆ ಮನುಷ್ಯರಿಗೆ ಇಷ್ಟ ಆಗೋದಿಲ್ಲ. ಇಷ್ಟೆಲ್ಲಾ ಪರದಾಟಗಳ ನಡುವೆ ಇದೀಗ ನಮ್ಮ ಬೆಂಗಳೂರಿನಲ್ಲಿ ಚಳಿಯ ಅಬ್ಬರ ಹೆಚ್ಚಾಗುವ & ಚಳಿಯಲ್ಲಿ ಇಡೀ ರಾಜಧಾನಿ ನಡುಗುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ.
ಕನ್ನಡಿಗರ ರಾಜಧಾನಿ ಬೆಂಗಳೂರಿನ ಜನರಿಗೆ ಮುಂಬರುವ ದಿನಗಳಲ್ಲಿ ಚಳಿಯ ಆಘಾತ ಗ್ಯಾರಂಟಿ ಆಗಿದೆ. ದಕ್ಷಿಣ ಕರ್ನಾಟಕ ಇದೀಗ ಚಳಿಯ ಹೊಡೆತಕ್ಕೆ ಸಿಲುಕುವ ಮುನ್ಸೂಚನೆ ನೀಡಲಾಗಿದ್ದು, ಕನಿಷ್ಠ ತಾಪಮಾನ ಕಡಿಮೆಯಾಗುವ ಮುನ್ನೆಚ್ಚರಿಕೆ ನೀಡಲಾಗಿದೆ. ಈ ಬಗ್ಗೆ ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದು, ರಾತ್ರಿಯ ತಾಪಮಾನದಲ್ಲಿ ಮತ್ತಷ್ಟು ಕುಸಿತ ಎದುರಾಗುವುದು ಗ್ಯಾರಂಟಿ ಆಗಿದೆ. ಕಳೆದ 24 ಗಂಟೆಗಳಲ್ಲಿ ಬೆಂಗಳೂರು ಸುತ್ತಮುತ್ತಲ ಪ್ರದೇಶ ಸೇರಿ ಇಡೀ ದಕ್ಷಿಣ ಕರ್ನಾಟಕ ಭಾಗದ ಹಲವು ಸ್ಥಳಗಳಲ್ಲಿ ಕನಿಷ್ಠ ತಾಪಮಾನ ಮತ್ತಷ್ಟು ಕುಸಿತ ಕಂಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಚಳಿಯ ಸಮಸ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.

ವಿಮಾನ ನಿಲ್ದಾಣ ಸಮೀಪ ಚಳಿ.. ಚಳಿ...
ಬೆಂಗಳೂರು ಚಳಿಯ ಬಗ್ಗೆ ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ, ಮಹಾನಗರಿ ಬೆಂಗಳೂರಿನಲ್ಲಿ 14.5 ಡಿಗ್ರಿ ಸೆಲ್ಸಿಯಸ್‌ನಿಂದ 16.4 ಡಿಗ್ರಿ ಸೆಲ್ಸಿಯಸ್ ತನಕ ಕನಿಷ್ಠ ತಾಪಮಾನ ಕುಸಿಯುವ ಆತಂಕ ಈಗ ಆವರಿಸಿದೆ. ಆದರೆ ಇದೇ ಸಮಯದಲ್ಲಿ KIAL ಅಂದರೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ 9.6 ಡಿಗ್ರಿ ಸೆಲ್ಸಿಯಸ್‌ನಿಂದ 14 ಡಿಗ್ರಿ ಸೆಲ್ಸಿಯಸ್ ತನಕ ತಾಪಮಾನ ಕುಸಿತ ಕಾಣಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಈ ಮೂಲಕ ಬೆಂಗಳೂರು ಹೊರ ವಲಯದಲ್ಲಿ ತಾಪಮಾನ ಕುಸಿತ ಹೊಸ ಸಮಸ್ಯೆ ತರುವ ಆತಂಕ ಆವರಿಸಿದೆ.
ಮುಂದಿನ 48 ಗಂಟೆಗಳಲ್ಲಿ ಹೇಗಿರಲಿದೆ ವಾತಾವರಣ?
ಕರ್ನಾಟಕ ರಾಜ್ಯಾದ್ಯಂತ, ದಕ್ಷಿಣ ಕರ್ನಾಟಕದ ಕೆಲವು ಸ್ಥಳಗಳಲ್ಲಿ ತಾಪಮಾನ ಗಮನಾರ್ಹವಾಗಿ ಕುಸಿಯುವ ಮುನ್ಸೂಚನೆ ಮಧ್ಯೆ ಕರ್ನಾಟಕದ ಒಳಭಾಗದ ಪ್ರತ್ಯೇಕ ಸ್ಥಳಗಳಲ್ಲಿ ಕನಿಷ್ಠ ತಾಪಮಾನ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಕುಸಿತ ಕಂಡಿದೆ. ಅದರಲ್ಲೂ ಬೆಳಗಿನ ಸಮಯದಲ್ಲಿ ಚಳಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಕರ್ನಾಟಕದ ಬಯಲು ಸೀಮೆ ಭಾಗದಲ್ಲಿ 12.4 ಡಿಗ್ರಿ ಸೆಲ್ಸಿಯಸ್‌ಗೆ ತಾಪಮಾನ ಕುಸಿದಿದೆ. ಮುಂದಿನ 48 ಗಂಟೆಗಳಲ್ಲಿ ಮೋಡ ರಹಿತ ಆಕಾಶ ಇದ್ದರೂ ಚಳಿ ಆರ್ಭಟ ಮಾತ್ರ ಕಡಿಮೆ ಆಗುವುದಿಲ್ಲ. ಹೀಗಾಗಿ ನಿಮ್ಮ ಕಂಬಳಿ & ಬ್ಲಾಂಕೆಟ್ ರೆಡಿ ಮಾಡಿಕೊಂಡರೆ ಈಗಿನ ಪರಿಸ್ಥಿತಿಯಲ್ಲಿ ಉತ್ತಮ!












Click it and Unblock the Notifications