ಮಿಡ್ನಾಪುರದ ಕಚೇರಿಯೊಳಗೆ ಪಕ್ಷದ ಸಹೋದ್ಯೋಗಿಯಿಂದ ಬಂಗಾಳ ಬಿಜೆಪಿ ನಾಯಕನಿಗೆ ಥಳಿತ
ಮಿಡ್ನಾಪುರ, ನವೆಂಬರ್ 6: ಮಿಡ್ನಾಪುರದ ಕಚೇರಿಯೊಳಗೆ ಪಕ್ಷದ ಸಹೋದ್ಯೋಗಿ ಬಂಗಾಳ ಬಿಜೆಪಿ ನಾಯಕನಿಗೆ ಥಳಿಸಿದ ವಿಡಿಯೋ ವೈರಲ್ ಆಗಿದೆ. ಮಿಡ್ನಾಪುರದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರನ್ನು ಪಕ್ಷದ ಸಹೋದ್ಯೋಗಿಯೊಬ್ಬರು ಜಿಲ್ಲಾ ಪಕ್ಷದ ಕಚೇರಿಯೊಳಗೆ ಥಳಿಸಿದ್ದಾರೆ. ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಶನಿವಾರ ಸಂಜೆ ಮಂಡಲ ಅಧ್ಯಕ್ಷರಾದ ಠಾಕೂರ್ ದಾಸ್ ಮಿಡ್ಡಾ ಅವರು ಮಿಡ್ನಾಪುರದ ಜಿಲ್ಲಾ ಪಕ್ಷದ ಪ್ರಧಾನ ಕಚೇರಿಯಲ್ಲಿ ಸಹೋದ್ಯೋಗಿಯೊಂದಿಗೆ ವಾದಕ್ಕೆ ಮುಂದಾದರು. ಘಟನೆಗಳು ತೀವ್ರ ಸ್ವರೂಪವನ್ನು ಪಡೆದುಕೊಂಡಿತು. ಜಿಲ್ಲಾ ಉಪಾಧ್ಯಕ್ಷ ಶಂಕರ ಗುಚ್ಚೈತ್ ಅವರು ಕೆಲವು ಧ್ವಜಗಳನ್ನು ಸಂಗ್ರಹಿಸಲು ಪಕ್ಷದ ಕಚೇರಿಗೆ ಆಗಮಿಸಿದರು. ಇದಕ್ಕಾಗಿ ಅವರ ಹಿಂದಿನ ಖರ್ಚುಗಳ ವೆಚ್ಚದ ವರದಿಯನ್ನು ಸಲ್ಲಿಸುವಂತೆ ಕೇಳಲಾಯಿತು.
ಈ ವೇಳೆ ವಾಗ್ವಾದ ನಡೆದು. ಮಾತಿನ ಚಕಮಕಿ ನಡೆಯಿತು. ವಿಡಿಯೊದಲ್ಲಿ ಇತರ ಪಕ್ಷದ ಕಾರ್ಯಕರ್ತರು ಮಧ್ಯಪ್ರವೇಶಿಸುವವರೆಗೂ ಮಿಡ್ಡಾ ಶಂಕರ್ ಅವರನ್ನು ಥಳಿಸುತ್ತಿರುವುದನ್ನು ಕಾಣಬಹುದು. ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಟಿಎಂಸಿ, ಇದು ಬಿಜೆಪಿಯೊಂದಿಗಿನ ಸಂಘರ್ಷವನ್ನು ತೋರಿಸುತ್ತದೆ ಎಂದು ಹೇಳಿದೆ. ಇದು ಅವರ ಸಂಸ್ಕೃತಿ' ಎಂದು ಸ್ಥಳೀಯ ಟಿಎಂಸಿ ನಾಯಕ ಅಜಿತ್ ಮೈತಿ ಕಿಡಿ ಕಾರಿದ್ದಾರೆ.

ಈ ವಿಚಾರವಾಗಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಂಕರ ಗುಚ್ಚೈತ್ ಮಾತನಾಡಿ, 'ಸಿಸಿಟಿವಿ ದೃಶ್ಯಾವಳಿಗಳನ್ನು ಉನ್ನತ ನಾಯಕರಿಗೆ ಸಲ್ಲಿಸಿದ್ದೇನೆ' ಎಂದಿದ್ದಾರೆ.












Click it and Unblock the Notifications