ಕಡ್ಲೇಕಾಯಿ ಪರಿಷೆಯಿಂದ ದೆಹಲಿ ಆಜಾದ್ ಪುರ್ ಮಂಡಿವರೆಗೆ ನೋಟು ನೋಟ

Posted By:
Subscribe to Oneindia Kannada

ಬೆಂಗಳೂರಿನ ಬಸವನಗುಡಿ ರಸ್ತೆಯಲ್ಲಿ ಜಾತ್ರೆ ವಾತಾವರಣ. ದೊಡ್ಡ ಗಣೇಶನ ದರ್ಶನಕ್ಕೆ ಜನವೋಜನ. ಅದರ ಜತೆಗೆ ವಿವಿಧ ವಸ್ತುಗಳ ಖರೀದಿಯಲ್ಲೂ ತಲ್ಲೀನರಾದ ಮಂದಿ ಅದೆಷ್ಟೋ. ಒಟ್ಟಿನಲ್ಲಿ ಕಳೆದ ಶನಿವಾರದಿಂದ ಈಚೆಗೆ ಪರಿಷೆಯಲ್ಲಿ ಮಾರಾಟಗಾರರಿಗೆ ಸುಗ್ಗಿ ಕಾಲ. ಯಾವ ನೋಟು ರದ್ದು ವಿಚಾರವೂ ಈ ಮಾರಾಟಗಾರರ ವ್ಯಾಪಾರದ ಭರಾಟೆ ತಗ್ಗಿಸಲಿಲ್ಲ.

ಆದರೆ ದೆಹಲಿಯ ಆಜಾದ್ ಪುರ್ ಮಂಡಿಯಲ್ಲಿ ಕ್ಷೌರಿಕರ ಆದಾಯವೇ ಕುಸಿದುಹೋಗಿದೆಯಂತೆ. ಎಲ್ಲ ನೋಟು ರದ್ದು ಪರಿಣಾಮ ಅಂತಿದ್ದಾರೆ. ಇನ್ನು ಚಿಕ್ಕಮಗಳೂರಿನಲ್ಲಿ ಆಕ್ರೋಶ್ ದಿವಸ್ ಪ್ರತಿಯಾಗಿ ಸಂಭ್ರಮ ದಿವಸ ಅದ್ಧೂರಿಯಾಗಿ ಆಚರಿಸಲಾಗಿದೆ. ಬ್ಯಾಂಕ್ ನೌಕರರಿಗೆ ಸನ್ಮಾನ, ಸಿಹಿ-ರೋಜಾ ಹೂವು ವಿತರಣೆ... ಓಹ್, ಒಟ್ಟಿನಲ್ಲಿ ಯಶಸ್ವಿ ಸಂಭ್ರಮ ದಿವಸ ಆಚರಣೆ.

ಕೋಲ್ಕತ್ತಾದಲ್ಲಿ ಆಕ್ರೋಶ್ ದಿವಸ್ ದಲ್ಲಿ ಕಾಂಗ್ರೆಸ್ ನಿಂದ ಭಾರೀ ಆಕ್ರೋಶ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಪ್ರತಿಕೃತಿಗೆ ಬೆಂಕಿ ಹೊತ್ತಿಸಿ, ಕೋಪ ವ್ಯಕ್ತಪಡಿಸಿದ್ದಾರೆ ಆ ಪಕ್ಷದ ಕಾರ್ಯಕರ್ತರು. ಮದುರೈನಲ್ಲಿ ಸೆರೆ ಹಿಡಿದ ಶಂಕಿತ ಉಗ್ರರ ಸಂಬಂಧಿಕರಿಗೆ ದಿಗ್ಭ್ರಮೆ. ನಮ್ಮ ಮನೆ ಹುಡುಗರು ಹಾಗಲ್ಲ, ಒಳ್ಳೆಯವರು ಅನ್ನೋದು ಅವರ ಸಮಜಾಯಿಷಿ. ಎಲ್ಲವನ್ನೂ ಫೋಟೋ ಸಹಿತ ನೋಡಿ-ಓದಿ.

ಕಾರ್ತೀಕದ ಕಡ್ಲೇಕಾಯಿ ಪರಿಷೆ

ಕಾರ್ತೀಕದ ಕಡ್ಲೇಕಾಯಿ ಪರಿಷೆ

ಬೆಂಗಳೂರಿನ ಬಸವನಗುಡಿಯಲ್ಲಿ ಕಾರ್ತೀಕ ಮಾಸದ ಪ್ರಯುಕ್ತ ನಡೆದ ವಾರ್ಷಿಕ ಕಡ್ಲೇಕಾಯಿ ಪರಿಷೆಯಲ್ಲಿ ಪಾಲ್ಗೊಂಡ ಹೆಣ್ಣುಮಕ್ಕಳ ಸಂಭ್ರಮ ಕಂಡಿದ್ದು ಹೀಗೆ.

ಸಾಲು ಖರೀದಿ

ಸಾಲು ಖರೀದಿ

ಕಾರ್ತೀಕ ಮಾಸದ ಕಡೇ ಸೋಮವಾರದ ದಿನ ಪ್ರತಿ ವರ್ಷ ಆಯೋಜಿಸುವ ಬಸವನಗುಡಿಯ ಪರಿಷೆ ವೇಳೆ ಕಡ್ಲೇಕಾಯಿ ಖರೀದಿಯಲ್ಲಿ ತೊಡಗಿದ್ದವರು ಸಾಲಾಗಿ ಫೊಟೋ ಕಣ್ಣಿಗೆ ಸೆರೆ ಸಿಕ್ಕರು.

ಕ್ಷೌರಕ್ಕೂ ನೋಟು ರದ್ದು ಹೊಡೆತ

ಕ್ಷೌರಕ್ಕೂ ನೋಟು ರದ್ದು ಹೊಡೆತ

ನವದೆಹಲಿಯ ಆಜಾದ್ ಪುರ್ ನ ಮಂಡಿಯಲ್ಲಿ ನೋಟು ರದ್ದು ಪರಿಣಾಮ ಕ್ಷೌರಿಕರ ಮೇಲೂ ಆಗಿದೆ. ವ್ಯಾಪಾರವಿಲ್ಲದೆ ಕಳೆಗುಂದಿರುವ ಮಂಡಿಯಲ್ಲಿ ಮೂರು ಮತ್ತೊಂದು ಜನ ಇದ್ದರು.

ಸಂಭ್ರಮ ದಿವಸದ ಸನ್ಮಾನ

ಸಂಭ್ರಮ ದಿವಸದ ಸನ್ಮಾನ

ಬ್ಯಾಂಕ್ ನೌಕರರನ್ನು ಗೌರವಿಸಿ ಹಾಗೂ ಸಿಹಿ, ರೋಜಾ ಹೂವು ಹಂಚುವ ಮೂಲಕ ಚಿಕ್ಕಮಗಳೂರಿನಲ್ಲಿ ಸೋಮವಾರ ಸಂಭ್ರಮ ದಿವಸದ ಅಚರಿಸಲಾಯಿತು.

ಮದುರೈ ಕೋರ್ಟ್ ಹೊರಗೆ

ಮದುರೈ ಕೋರ್ಟ್ ಹೊರಗೆ

ಮದುರೈನಲ್ಲಿ ಸೋಮವಾರ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಶಂಕಿತ ಅಲ್ ಕೈದಾ ಉಗ್ರರನ್ನು ವಶಕ್ಕೆ ಪಡೆದರು. ಬಂಧಿತರ ಸಂಬಂಧಿಕರು, ಬೆಂಬಲಿಗರು ಕೋರ್ಟ್ ಹೊರಭಾಗದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು ಹೀಗೆ

ಆರೋಪಿ ಪೊಲೀಸರ ವಶಕ್ಕೆ

ಆರೋಪಿ ಪೊಲೀಸರ ವಶಕ್ಕೆ

ನಭಾ ಜೈಲು ದಾಳಿ ಮಾಡಿದವರ ಪೈಕಿ ಒಬ್ಬನಾದ ಪರ್ಮಿಂದರ್ ಸಿಂಗ್ ನನ್ನು ಉತ್ತರಪ್ರದೇಶದ ಶಮ್ಲಿ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದರು.

ಕಾಂಗ್ರೆಸ್ ಆಕ್ರೋಶ

ಕಾಂಗ್ರೆಸ್ ಆಕ್ರೋಶ

ಕೋಲ್ಕತ್ತಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಪ್ರತಿಕೃತಿ ದಹಿಸಿ ಅಕ್ರೋಶ ವ್ಯಕ್ತಪಡಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Demonetisation decision playng vital role in various places and events. Apart from that other events also representing through PTI photos.
Please Wait while comments are loading...