ದಿನಕರನ್ ಶಾಸಕರು ತಂಗಿದ್ದ ಕೂರ್ಗ್ ರೆಸಾರ್ಟ್ ಮೇಲೆ ಪೊಲೀಸ್ ದಾಳಿ

ಕೊಡಗು, ಸೆಪ್ಟೆಂಬರ್ 12: ಎಐಎಡಿಎಂಕೆಯ ಉಪ ಮಹಾಕಾರ್ಯದರ್ಶಿ ಟಿಟಿವಿ ದಿನಕರನ್ ಬೆಂಬಲಿತ ಶಾಸಕರು ತಂಗಿದ್ದ ಪ್ಯಾಡಿಂಗ್ಟನ್ ರೆಸಾರ್ಟ್ ಮೇಲೆ ತಮಿಳುನಾಡು ಪೊಲೀಸರು ಸೋಮವಾರ ಮಧ್ಯಾಹ್ನ ರೈಡ್ ಮಾಡಿದ್ದಾರೆ.

ಸುಮಾರು 200ಕ್ಕೂ ಹೆಚ್ಚು ಜನರು ರೆಸಾರ್ಟ್ ಅನ್ನು ಸುತ್ತುವರಿದಿದ್ದು, ಶಾಸಕರನ್ನು ಬಂಧಿಸಲು ಮುಂದಾಗಿರುವುದಾಗಿ ಸ್ಥಳೀಯ ಮೂಲಗಳು ಮಾಹಿತಿ ನೀಡಿದೆ.

Barringoton resort in which AIDMK MLAs reside raided

ಚೆನ್ನೈನಲ್ಲಿ ಸೋಮವಾರ ನಡೆದ ಎಐಎಡಿಎಂಕೆ ಸಭೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ಶಶಿಕಲಾ ಅವರನ್ನು ಪಕ್ಷದಿಂದಲೇ ಉಚ್ಛಾಟಿಸಲಾಯಿತು. ಇದರ ಬೆನ್ನಲ್ಲೇ ಕೊಡಗಿನಲ್ಲಿರುವ ರೆಸಾರ್ಟ್ ನ ಮೇಲೆ ಪೊಲೀಸ್ ದಾಳಿಯಾಗಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.

ಕೆಲ ದಿನಗಳ ಹಿಂದೆ, ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರ ಸರ್ಕಾರವನ್ನು ಉರುಳಿಸುವುದಾಗಿ ಪಣ ತೊಟ್ಟಿದ್ದ ಟಿಟಿವಿ ದಿನಕರನ್ (ಶಶಿಕಲಾ ಸಂಬಂಧಿ) ಅವರನ್ನು ಬೆಂಬಲಿಸುವ ಸುಮಾರು 17 ಶಾಸಕರು, ರೆಸಾರ್ಟ್ ರಾಜಕೀಯ ಆರಂಭಿಸಿದ್ದರು.

Barringoton resort in which AIDMK MLAs reside raided

ಶಶಿಕಲಾ ವಿರೋಧಿಯಾಗಿರುವ ಪನ್ನೀರ್ ಸೆಲ್ವಂ ಅವರೊಂದಿಗೆ ಪಳನಿಸ್ವಾಮಿ ಕೈಜೋಡಿಸಿದ್ದರಿಂದಾಗಿ ಪಕ್ಷಕ್ಕೆ ಅಪಚಾರವಾಗಿದ್ದು, ಪಳನಿಸ್ವಾಮಿಗೆ ತಾವು ನೀಡಿರುವ ಬೆಂಬಲವನ್ನು ಹಿಂಪಡೆಯುವುದಾಗಿ ಈ ಶಾಸಕರು ತಮಿಳುನಾಡು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು.

ಹೀಗೆ ಆರಂಭಗೊಂಡಿದ್ದ ರೆಸಾರ್ಟ್ ರಾಜಕೀಯ, ಆರಂಭದಲ್ಲಿ ಅವರು ಮಹಾಬಲಿಪುರಂ ನ ರೆಸಾರ್ಟ್ ನಲ್ಲಿ ಮುಂದುವರಿದಿತ್ತು. ಇತ್ತೀಚೆಗೆ, ಅದು ಕೊಡಗಿನಲ್ಲಿರುವ ಪ್ಯಾಡಿಂಗ್ಟನ್ ರೆಸಾರ್ಟ್ ಗೆ ಶಿಫ್ಟ್ ಆಗಿತ್ತೆಂದು ಹೇಳಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+