Bank Holiday Today: ಈ ಕಾರಣಕ್ಕೆ ಇಂದು ಬ್ಯಾಂಕ್‌ಗಳು ಬಂದ್, ಗ್ರಾಹಕರೇ ಗಮನಿಸಿ
Bank Holiday in April 2025: ಇಂದು ಸೋಮವಾರ ಕರ್ನಾಟಕ ಸೇರಿದಂತೆ ದೇಶದ ಎಲ್ಲ ಬ್ಯಾಂಕ್ ಗಳು ತೆರೆದಿರುತ್ತವೆಯಾ ಎಂಬ ಗೊಂದಲ ಅನೇಕರಲ್ಲಿರುತ್ತದೆ. ಅದಲ್ಲದೇ ಇಂದು 'ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ' ಮಾತ್ರವಲ್ಲದೇ ಇತರ ರಾಜ್ಯಗಳಲ್ಲಿ ಬೇರೆ ಬೇರೆ ನಿರ್ದಿಷ್ಟ ಹಬ್ಬಗಳು ಜರುಗಲಿವೆ. ಹೀಗಾಗಿ ಬ್ಯಾಂಕ್‌ಗಳಿಗೆ ಇಂದು ಮಾರ್ಗಸೂಚಿಯಂತೆ ರಜೆ ಇರಲಿವೆ. ಆದಾಗಿಯು ಕೆಲವು ರಾಜ್ಯಗಳ ಬ್ಯಾಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.
ಇಂದು ಏಪ್ರಿಲ್ 14 ರಂದು ಸೋಮವಾರ ವಾರದ ದಿನವಾಗಿದೆ. ಬೆಂಗಳೂರು, ಮುಂಬೈ ಸೇರಿದಂತೆ ಹೆಚ್ಚಿನ ನಗರಗಳಲ್ಲಿ 'ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ' ಆಚರಿಸಲಾಗುತ್ತದೆ. ನವದೆಹಲಿ, ಭೋಪಾಲ್ ಹಾಗೂ ಕೊಹಿಮಾ ಸೇರಿ ವಿವಿಧೆಡೆ ಬ್ಯಾಂಕ್‌ಗಳು ತೆರೆದಿರಲಿವೆ. RBI ಬ್ಯಾಂಕ್ ಅನುಮೋದಿತ ಅನೇಕ ಬ್ಯಾಂಕ್ ಶಾಖೆಗಳು ಇಂದು ಬಂದ್ ಆಗಿರುವುದಿಲ್ಲ.

ಬ್ಯಾಂಕ್ ಸೋಮವಾರ ಮಂಗಳವಾರ ಓಪನ್ ಇರುತ್ತಾ?
ಅಂಬೇಡ್ಕರ್ ಜಯಂತಿ ಜೊತೆಗೆ ವಿವಿಧ ರಾಜ್ಯಗಳಳ್ಲಿ ವಿಷು, ಬಿಜು, ಬುಯಿಸು ಉತ್ಸವ, ಮಹಾ ವಿಷುವ ಸಂಕ್ರಾಂತಿ, ತಮಿಳು ಹೊಸ ವರ್ಷದ ದಿನ ಆಚರಿಸಲಾಗುತ್ತಿದೆ. ಬೋಹಾಗ್ ಬಿಹು ಮತ್ತು ಚೀರೋಬಾ ಮುಂತಾದ ಇತರ ಪ್ರಾದೇಶಿಕ ಹಬ್ಬಗಳ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಬ್ಯಾಂಕ್ ಸ್ಥಗಿತಗೊಳ್ಳಲಿವೆ.
ಬೆಂಗಳೂರು, ಚೆನ್ನೈ, ಮುಂಬೈ, ಅಗರ್ತಲಾ, ಐಜ್ವಾಲ್, ಅಹಮದಾಬಾದ್, ಭುವನೇಶ್ವರ, ಚಂಡೀಗಢ, ಡೆಹ್ರಾಡೂನ್, ಹೈದರಾಬಾದ್, ಜೈಪುರ, ಗ್ಯಾಂಗ್ಟಾಕ್, ಗುವಾಹಟಿ,ಆಂಧ್ರಪ್ರದೇಶ, ತಿರುವನಂತಪುರಂ, ತೆಲಂಗಾಣ, ಇಂಫಾಲ್, ಇಟಾನಗರ, ಜಮ್ಮು, ಕಾನ್ಪುರ, ಕೊಚ್ಚಿ, ಕೋಲ್ಕತ್ತಾ, ಲಕ್ನೋ, ಬೇಲಾಪುರ, ನಾಗ್ಪುರ, ಗೋವಾ ರಾಜಧಾನಿ ಪಣಜಿ, ಶ್ರೀನಗರ ಹಾಗೂ ಪಾಟ್ನಾದಲ್ಲಿ ಬ್ಯಾಂಕ್‌ಗಳು ಇಂದು ಮುಚ್ಚಲ್ಪಡುತ್ತವೆ.
ಇಂದು ಎಲ್ಲೆಲ್ಲಿ ಬ್ಯಾಂಕ್ ಓಪನ್
ನವದೆಹಲಿ, ಮಧ್ಯಪ್ರದೇಶದ ಭೋಪಾಲ್, ನಾಗಾಲ್ಯಾಂಡ್‌ನ ಕೊಹಿಮಾ, ಛತ್ತೀಸ್‌ಗಢ ರಾಯ್ಪುರ್, ಮೇಘಾಲಯ ಶಿಲ್ಲಾಂಗ್ ಹಾಗೂ ಹಿಮಾಚಲ ಪ್ರದೇಶ ಶಿಮ್ಲಾ ಸೇರಿದಂತೆ ಹಲವಾರು ನಗರಗಳ ಶಾಖೆಗಳಲ್ಲಿ ಇಂದು ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುತ್ತವೆ. ಸಾರ್ವಜನಿಕರು, ಗ್ರಾಹಕರು ಭೇಟಿ ನೀಡಬಹುದಾಗಿದೆ.
ಬ್ಯಾಂಕ್ ರಜಾ ದಿನದಂದು ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಎಂದಿನಂತೆ ಕಾರ್ಯ ನಿರ್ವಹಿಸಲಿದೆ. ಬ್ಯಾಂಕಿಂಗ್ ಆಪ್, ಎಟಿಎಂಗಳು ಕೆಲಸ ಮಾಡುತ್ತವೆ. ಅವರ ಸೇವೆ ಸಹ ಜನರು ಪಡೆಯಬಹುದಾಗಿದೆ.
ಏಪ್ರಿಲ್ 15ರಂದು ಬ್ಯಾಂಕ್ ಒಪನ್? ಅಥವಾ ಬಂದ್?
ಭಾರತದ ಪ್ರಮುಖ ಬ್ಯಾಂಕ್‌ಗಳಾದ ಎಸ್‌ಬಿಐ, ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿ ಇನ್ನಿತರ ಬ್ಯಾಂಕ್‌ಗಳು ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಕಾರ್ಯ ನಿರ್ವಹಿಸಲಿವೆ. ಬೆಳಗ್ಗೆ 9.30 ರಿಂದ ಸಂಜೆ 4.30 ಅಥವಾ ಮಧ್ಯಾಹ್ನ 3.30 ಗಂಟೆವರೆಗೆ ತೆರೆದಿರಲಿವೆ. ಕೆಲವು ಬ್ಯಾಂಕ್‌ಗಳು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಕಾರ್ಯ ನಿರ್ವಹಿಸಲಿವೆ.












Click it and Unblock the Notifications