Bank holidays: ಸೆಪ್ಟೆಂಬರ್‌ನಲ್ಲಿ ಬ್ಯಾಂಕ್‌ಗಳಿಗೆ ಹಲವು ರಜೆ: ಯಾವ ದಿನ ಬ್ಯಾಂಕ್ ಬಂದ್? ಇಲ್ಲಿದೆ ಸಂಪೂರ್ಣ ಪಟ್ಟಿ
ನವದೆಹಲಿ: ಸೆಪ್ಟೆಂಬರ್ 2026ರಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಬ್ಯಾಂಕ್ ಶಾಖೆಗಳು ಹಲವು ದಿನಗಳ ಕಾಲ ಬಂದ್ ಆಗಲಿವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಕಟಿಸುವ ರಜಾ ಪಟ್ಟಿಯ ಪ್ರಕಾರ, ರಾಷ್ಟ್ರೀಯ ರಜೆಗಳ ಜೊತೆಗೆ ರಾಜ್ಯವಾರು ಹಬ್ಬಗಳು ಮತ್ತು ಪ್ರಾದೇಶಿಕ ಆಚರಣೆಗಳಿಗೆ ಅನುಗುಣವಾಗಿ ಬ್ಯಾಂಕ್ ರಜೆಗಳು ಬದಲಾಗುತ್ತವೆ. ಹೀಗಾಗಿ ಗ್ರಾಹಕರು ಬ್ಯಾಂಕ್‌ಗೆ ಸಂಬಂಧಿಸಿದ ಪ್ರಮುಖ ಕೆಲಸಗಳನ್ನು ಯೋಜಿಸುವ ಮುನ್ನ ತಮ್ಮ ರಾಜ್ಯದ ರಜಾ ಪಟ್ಟಿಯನ್ನು ಪರಿಶೀಲಿಸುವುದು ಅಗತ್ಯ.
ಸೆಪ್ಟೆಂಬರ್‌ನಲ್ಲಿ ದೇಶಾದ್ಯಂತ ಸಾಮಾನ್ಯವಾಗಿ ಅನ್ವಯಿಸುವ ಪ್ರಮುಖ ಬ್ಯಾಂಕ್ ರಜೆಯೆಂದರೆ ಸೆಪ್ಟೆಂಬರ್ 4ರಂದು ಶ್ರೀಕೃಷ್ಣ ಜನ್ಮಾಷ್ಟಮಿ , ಸೆಪ್ಟೆಂಬರ್ 12ರಂದು ಎರಡನೇ ಶನಿವಾರ ಮತ್ತು ಸೆಪ್ಟೆಂಬರ್ 26ರಂದು ನಾಲ್ಕನೇ ಶನಿವಾರ . ಈ ದಿನಗಳಲ್ಲಿ ಬ್ಯಾಂಕ್ ಶಾಖೆಗಳು ಸಂಬಂಧಿತ ನಿಯಮಗಳ ಪ್ರಕಾರ ಕಾರ್ಯನಿರ್ವಹಿಸುವುದಿಲ್ಲ. ಆದರೆ ಹಬ್ಬಗಳಿಗೆ ಸಂಬಂಧಿಸಿದ ಇತರ ರಜೆಗಳು ರಾಜ್ಯ ಮತ್ತು ನಗರವನ್ನು ಅವಲಂಬಿಸಿ ಬದಲಾಗಬಹುದು.

ಇದಲ್ಲದೆ, ಸೆಪ್ಟೆಂಬರ್ 14ರಂದು ಗಣೇಶ ಚತುರ್ಥಿ ಕೆಲವು ರಾಜ್ಯಗಳಲ್ಲಿ ಬ್ಯಾಂಕ್ ರಜೆಯಾಗಿರಲಿದೆ. ಸೆಪ್ಟೆಂಬರ್ 21ರಂದು ರಾಜಸ್ಥಾನ ಮತ್ತು ಕೇರಳ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಪ್ರಾದೇಶಿಕ ಆಚರಣೆಗಳಿಗೆ ಸಂಬಂಧಿಸಿದ ರಜೆಗಳಿವೆ. ಹೀಗಾಗಿ ಒಂದೇ ದಿನ ದೇಶದ ಎಲ್ಲ ಬ್ಯಾಂಕ್ ಶಾಖೆಗಳಿಗೂ ರಜೆ ಇರುವುದಿಲ್ಲ ಎಂಬುದನ್ನು ಗ್ರಾಹಕರು ಗಮನಿಸಬೇಕು.
ಸೆಪ್ಟೆಂಬರ್ 2026ರ ಪ್ರಮುಖ ಬ್ಯಾಂಕ್ ರಜೆಗಳು
ಸೆಪ್ಟೆಂಬರ್ 4, ಶುಕ್ರವಾರ: ಜನ್ಮಾಷ್ಟಮಿ (ವೈಷ್ಣವ) / ಕೃಷ್ಣ ಜಯಂತಿ - ಹಲವು ನಗರಗಳಲ್ಲಿ ಬ್ಯಾಂಕ್ ರಜೆ.
ಸೆಪ್ಟೆಂಬರ್ 12, ಶನಿವಾರ: ಎರಡನೇ ಶನಿವಾರ - ದೇಶಾದ್ಯಂತ ಬ್ಯಾಂಕ್ ಶಾಖೆಗಳು ಬಂದ್.
ಸೆಪ್ಟೆಂಬರ್ 14, ಸೋಮವಾರ: ಗಣೇಶ ಚತುರ್ಥಿ, - ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ರಜೆ.
ಸೆಪ್ಟೆಂಬರ್ 15, ಮಂಗಳವಾರ: ಸಂವತ್ಸರಿ, ನುಖೈ ಹಾಗೂ ಗಣೇಶ ಚತುರ್ಥಿಯ ಎರಡನೇ ದಿನ - ಅಹಮದಾಬಾದ್, ಭುವನೇಶ್ವರ, ಪಣಜಿಯಲ್ಲಿ ರಜೆ.
ಸೆಪ್ಟೆಂಬರ್ 21, ಸೋಮವಾರ: ಶ್ರೀಮಂತ ಶಂಕರದೇವ / ಶ್ರೀ ನಾರಾಯಣ ಗುರು ಸಮಾಧಿ ಜನ್ಮೋತ್ಸವ - ಗುವಾಹಟಿ, ಕೊಚ್ಚಿ, ತಿರುವನಂತಪುರಂನಲ್ಲಿ ರಜೆ.
ಸೆಪ್ಟೆಂಬರ್ 22, ಮಂಗಳವಾರ: ಕರ್ಮ ಪೂಜೆ - ರಾಂಚಿಯಲ್ಲಿ ರಜೆ.
ಸೆಪ್ಟೆಂಬರ್ 23, ಬುಧವಾರ: ಮಹಾರಾಜ ಹರಿ ಸಿಂಗ್ ಜಿ ಅವರ ಜನ್ಮದಿನ - ಜಮ್ಮು ಮತ್ತು ಶ್ರೀನಗರದಲ್ಲಿ ರಜೆ.
ಸೆಪ್ಟೆಂಬರ್ 25, ಶುಕ್ರವಾರ: ಇಂದ್ರ ಜಾತ್ರಾ - ಗ್ಯಾಂಗ್ಟಾಕ್‌ನಲ್ಲಿ ರಜೆ.
ಸೆಪ್ಟೆಂಬರ್ 26, ಶನಿವಾರ: ನಾಲ್ಕನೇ ಶನಿವಾರ - ದೇಶಾದ್ಯಂತ ಬ್ಯಾಂಕ್ ರಜೆ.
ಸೆಪ್ಟೆಂಬರ್ 6, 13, 20 ಮತ್ತು 27: ಭಾನುವಾರ - ದೇಶಾದ್ಯಂತ ಬ್ಯಾಂಕ್ ಶಾಖೆಗಳು ಬಂದ್.
RBIಯ ರಜಾ ಪಟ್ಟಿ ರಾಜ್ಯ ಮತ್ತು ನಗರವಾರು ಇರುವುದರಿಂದ ಕರ್ನಾಟಕ ಸೇರಿದಂತೆ ಪ್ರತಿಯೊಂದು ರಾಜ್ಯದಲ್ಲೂ ರಜೆಗಳ ಸಂಖ್ಯೆ ಮತ್ತು ದಿನಾಂಕದಲ್ಲಿ ವ್ಯತ್ಯಾಸ ಇರಬಹುದು. ಆದ್ದರಿಂದ ಬ್ಯಾಂಕ್ ಶಾಖೆಗೆ ತೆರಳುವ ಮುನ್ನ ಸ್ಥಳೀಯ ರಜಾ ಪಟ್ಟಿಯನ್ನು ಪರಿಶೀಲಿಸುವುದು ಸೂಕ್ತ. ಬ್ಯಾಂಕ್ ಶಾಖೆಗಳು ಮುಚ್ಚಿದ್ದರೂ ಇಂಟರ್‌ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, UPI ಹಾಗೂ ಇತರ ಡಿಜಿಟಲ್ ಸೇವೆಗಳು ಸಾಮಾನ್ಯವಾಗಿ ಲಭ್ಯವಿರುತ್ತವೆ. ಆದರೆ ಚೆಕ್ ಕ್ಲಿಯರಿಂಗ್, ನಗದು ವಹಿವಾಟು ಹಾಗೂ ಶಾಖೆಯಲ್ಲಿ ನೇರವಾಗಿ ಮಾಡಬೇಕಾದ ಕೆಲಸಗಳಿಗೆ ರಜೆಯ ಪರಿಣಾಮ ಬೀರಬಹುದು. ಆದ್ದರಿಂದ ಅಗತ್ಯ ಬ್ಯಾಂಕಿಂಗ್ ಕೆಲಸಗಳನ್ನು ರಜೆಯ ದಿನಗಳಿಗೂ ಮುನ್ನವೇ ಪೂರ್ಣಗೊಳಿಸುವುದು ಉತ್ತಮ.
ಕರ್ನಾಟಕದಲ್ಲಿ ಸೆಪ್ಟೆಂಬರ್ 2026ರ ಬ್ಯಾಂಕ್ ರಜೆಗಳು
ಸೆಪ್ಟೆಂಬರ್ 12 - ಎರಡನೇ ಶನಿವಾರ
ಸೆಪ್ಟೆಂಬರ್ 14 - ಗಣೇಶ ಚತುರ್ಥಿ
ಸೆಪ್ಟೆಂಬರ್ 26 - ನಾಲ್ಕನೇ ಶನಿವಾರ


Click it and Unblock the Notifications
