Bank Holiday: ಫೆಬ್ರವರಿ 26 ಮತ್ತು 28ರಂದು ಬ್ಯಾಂಕ್‌ಗಳಿಗೆ ರಜೆ ಘೋಷಣೆ: RBI
ಬೆಂಗಳೂರು, ಫೆಬ್ರವರಿ 24: ಫೆಬ್ರವರಿ ಎಂದ ಕೂಡಲೇ ಈ ತಿಂಗಳು ಕಡಿಮೆ ದಿನಗಳಿವೆ ಎಂದು ನೆನಪಾಗುತ್ತದೆ. ಈ ಕಡಿಮೆ ದಿನಗಳಲ್ಲಿಯೇ ಬ್ಯಾಂಕ್, ಶಾಲಾ- ಕಾಲೇಜುಗಳಿಗೆ ಹಬ್ಬದ ಪ್ರಯುಕ್ತ ರಜೆ ನೀಡಲಾಗುತ್ತಿದೆ. ಕರ್ನಾಟಕ ಸೇರಿದಂತೆ ದೇಶದ ಅನೇಕ ಭಾಗಗಳಲ್ಲಿ ಎರಡು ದಿನ ಬ್ಯಾಂಕ್‌ಗಳು ಸ್ಥಗಿತಗೊಳ್ಳಲಿವೆ. ಪ್ರಮುಖ ಹಬ್ಬಗಳ ಕಾರಣ ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಯಂತೆ ಎರಡು ದಿನ ಬ್ಯಾಂಕ್ ಬಾಗಿಲು ಮುಚ್ಚಲಿವೆ. ಸಾರ್ವಜನಿಕರು ಸಹಕರಿಸಬೇಕಿದೆ.
2025ರ ಫೆಬ್ರವರಿ ತಿಂಗಳು ಹಲವು ಬ್ಯಾಂಕ್‌ಗಳು ರಜಾದಿನಗಳಲ್ಲಿಯೇ ಕಳೆದುಹೋಗಿವೆ. ಕೆಲವೆಡೆ ಚುನಾವಣೆ, ಇನ್ನೂ ಕೆಲವೆಡೆ ಹಬ್ಬಗಳ ಹಿನ್ನೆಲೆ ಆಗಾಗ ಬಂದ್ ಆಗಿದ್ದವು. ಇದೀಗ ಫೆಬ್ರವರಿ 26 ಬುಧ್ವಾರ ಮತ್ತು ಫೆಬ್ರವರಿ 28 ಶುಕ್ರವಾರ ಕರ್ನಾಟಕ ಸೇರಿದಂತೆ ದೇಶ ಈ ರಾಜ್ಯಗಳಲ್ಲಿ ಸಾವಿರಾರು ಬ್ಯಾಂಕ್‌ಗಳಿಗೆ ರಜೆ ಘೋಷಿಸಲಾಗಿದೆ.

ಫೆಬ್ರವರಿ 26 ಮಹಾಶಿವರಾತ್ರಿ ಹಾಗೂ ಫೆಬ್ರವರಿ 28 ಶುಕ್ರವಾರ ಲೋಸಾರ್ ಹಬ್ಬ ಪ್ರಯುಕ್ತ ಎರಡು ದಿನ ರಾಜ್ಯಗಳಾದ್ಯಂತ ಬ್ಯಾಂಕ್‌ಗಳ ಕಾರ್ಯಚಟುವಟಿಕೆಗೆ ಸ್ಥಗಿತಗೊಳ್ಳಲಿದೆ. ಇದರ ಮಾಹಿತಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಧಿಕೃತ ವೆಬ್‌ಸೈಟ್ ನಲ್ಲಿ ವೀಕ್ಷಿಸಬಹುದಾಗಿದೆ. ಆದರೆ ಗ್ರಾಹಕರು/ಸಾರ್ವಜನಿಕರಿಗೆ ಆನ್‌ಲೈನ್ ಮೂಲಕ ನೆಟ್ ಬ್ಯಾಂಕಿಂಗ್, ಬ್ಯಾಂಕಿಂಗ್ ಆಪ್ ಮೂಲಕ ಹಣಕಾಸು ವ್ಯವಹಾರಗಳಿಗೆ ಯಾವುದೇ ತೊಂದರೆ ಇರುವುದಿಲ್ಲ ಎಂದು ತಿಳಿಸಲಾಗಿದೆ.
ಈ ರಾಜ್ಯಗಳಲ್ಲಿ ಬ್ಯಾಂಕ್‌ಗಳು ಬಂದ್, ವಿವರ
ಭಾರತೀಯ ರಿಸರ್ವ್ ಬ್ಯಾಂಕ್ (RBI) ನೀಡಿರುವ ಮಾಹಿತಿ ಪ್ರಕಾರ, ಮಹಾ ಶಿವರಾತ್ರಿ ಪ್ರಯುಕ್ತ ಕರ್ನಾಟಕ, ಆಂಧ್ರಪ್ರದೇಶ, ಕೇರಳ ತೆಲಂಗಾಣ, ಗುಜರಾತ್, ಒಡಿಶಾ, ಮಹಾರಾಷ್ಟ್ರ, ಮಧ್ಯಪ್ರದೇಶ, ಚಂಡೀಗಢ, ಉತ್ತರಾಖಂಡ, ಜಮ್ಮು-ಶ್ರೀನಗರ, ಉತ್ತರ ಪ್ರದೇಶ, ಜಾರ್ಖಂಡ್, ಹಿಮಾಚಲ ಪ್ರದೇಶ ಮತ್ತು ಛತ್ತೀಸ್‌ಗಢ ಗಳಲ್ಲಿ ಫೆಬ್ರವರಿ 26 ರಂದು ಬ್ಯಾಂಕುಗಳು ಮುಚ್ಚಲಿವೆ. ಇನ್ನೂ ಲೋಸಾರ್ ಹಬ್ಬ ಪ್ರಯುಕ್ತ ಸಿಕ್ಕಿಂ (ಗ್ಯಾಂಗ್‌ಟಾಕ್) ನಲ್ಲಿನ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುವುದಿಲ್ಲ ಎಂದು RBI ಮಾಹಿತಿ ನೀಡಿದೆ.

ನೀವಿರುವ ರಾಜ್ಯಗಳು, ನಗರ ಮತ್ತು ಪಟ್ಟಣಗಳಲ್ಲಿ ಬ್ಯಾಂಕಿಂಗ್ ಸೇವೆ ಇಲ್ಲದಿರಬಹುದು. ಆದರೆ ಆನ್‌ಲೈನ್ ಸೇವೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ದೇಶಾದ್ಯಂತ ಆನ್‌ಲೈನ್ ಬ್ಯಾಂಕಿಂಗ್ ಸೇವೆ ಇರುತ್ತದೆ. ಎಟಿಎಂಗಳು ಸಹ ಲಭ್ಯ ಇರುತ್ತವೆ. ಹಣಕಾಸು ವ್ಯವಹಾರಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ.
ಸಾರ್ವಜನಿಕರು ಬ್ಯಾಂಕ್‌ಗಳ ರಜಾ ದಿನ ನೋಡಿಕೊಂಡು ನಿಮ್ಮ ಹಣಕಾಸು ವ್ಯವಹಾರಗಳನ್ನು ಹೊಂದಾಣಿಕೆ ಮಾಡಿಕೊಳ್ಳಬೇಕು. ರಜಾ ದಿನದಂದು ಹಣ ಪಾವತಿ, ಹಿಂತೆಗೆತ, ಮುಂತಾದ ವಹೀವಾಟು ಇಟ್ಟುಕೊಂಡಲ್ಲಿ ಸಮಸ್ಯೆ ಆಗುವುದು ಖಚಿತವಾಗಿದೆ. ಹೀಗಾಗದಂತೆ ಮುನ್ನೆಚರಿಕೆ ವಹಿಸಬೇಕು ಎಂದು ತಿಳಿಸಲಾಗಿದೆ.
ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆಗಳು
ಹೌದು, ಫೆಬ್ರವರಿ ಕೊನೆಯ ಒಂದೇ ವಾರದಲ್ಲಿ ಎರಡು ರಜೆಗಳು ಬಂದಿವೆ. ಇನ್ನು ಬುಧವಾರ, ಶುಕ್ರವಾರ ಎರಡು ದಿನ ಅಲ್ಲದೇ, ನಾಲ್ಕನೇ ಶನಿವಾರ (ಮಾರ್ಚ್ 1) ಮತ್ತು ಮರು ದಿನ ಭಾನುವಾರ (ಮಾರ್ಚ್ 2) ರಂದು ಮತ್ತೆ ಎರಡು ದಿನ ರಜೆಗಳು ಇವೆ. ಇದೆಲ್ಲ ನೋಡಿದರೆ, ಕಳೆದ ಭಾನುವಾರದಿಂದ ಮುಂದಿನ ಭಾನುವಾರದವರೆಗೆ ನಾಲ್ಕು ಸಾಲು ಸಾಲು ರಜೆಗಳು ಬ್ಯಾಂಕ್‌ಗಳಿಗೆ ಅನ್ವಯಿಸುತ್ತವೆ.
ಪ್ರತಿ ಭಾರಿ ಹಬ್ಬ ಬಂದಾಗ ಘೋಷಣೆ ಆಗುವ ರಜೆಗಳು ಆಯಾ ರಾಜ್ಯಗಳಲ್ಲಿ ನಡೆಯುವ ಆಚರಣೆಯ ಅನುಗುಣವಾಗಿ ಅಲ್ಲಿಗೆ ಅನ್ವಯಿಸುತ್ತವೆ. ಎಲ್ಲ ರಾಜ್ಯಗಳಿಗೆ ಒಂದೇ ತೆರನಾಗಿ ಇರುವುದಿಲ್ಲ ಎಂಬುದನ್ನು ಸಾರ್ವಜನಿಕರು ಗಮನಿಸಬೇಕು..












Click it and Unblock the Notifications