Bank Strike: ಭಾನುವಾರ ಬ್ಯಾಂಕ್ ಓಪನ್; 3 ದಿನ ಬ್ಯಾಂಕ್ ಮುಷ್ಕರಕ್ಕೂ ಮುನ್ನ ಗ್ರಾಹಕರಿಗೆ ಗುಡ್‌ನ್ಯೂಸ್

ಬೆಂಗಳೂರು: ವಾರದಲ್ಲಿ ಐದು ದಿನ ಕೆಲಸ ವ್ಯವಸ್ಥೆ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಸಂಬಂಧ ಇದೇ ತಿಂಗಳ ಸೆಪ್ಟೆಂಬರ್ 28ರಿಂದ ಮೂರು ದಿನ 'ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ (Bank Strike 2026) ನಡೆಯಲಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರ ತುರ್ತು ಹಣಕಾಸು ಕೆಲಸಗಳನ್ನು ತುರ್ತಾಗಿ ಪೂರ್ಣಗೊಳಿಸಲು ಇದೇ ಭಾನುವಾರ (ಸೆ.27) ರಂದು ಬ್ಯಾಂಕ್‌ಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಗ್ರಾಹಕರಿಗೆ ಈ ಬಾರಿ ಒಂದು ದಿನ ಹೆಚ್ಚುವರಿ ಸೇವೆ ಲಭ್ಯವಾಗಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಬ್ಯಾಂಕಿಂಗ್ ಮುಷ್ಕರ ದೃಢವಾಗುತ್ತಿದ್ದಂತೆ ಎಸ್‌ ಬಿ ಐ ಸೇರಿ ಕೆಲವು ಬ್ಯಾಂಕ್‌ಗಳು ಭಾನುವಾರ ಕೆಲಸ ಮಾಡುವಂತೆ ತಿಳಿಸಿತ್ತು. ಇದೀಗ ಅಧಿಕೃತವಾಗಿ ಸಚಿವಾಲಯವೇ ತಿಳಿಸಿರುವಮತೆ ಗ್ರಾಮೀಣ ಮತ್ತು ಎಲ್ಲ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಭಾನುವಾರ ಎಂದಿನಂತೆ ತೆರೆದಿರಲಿವೆ. ಅಂದು ಬ್ಯಾಂಕ್ ಶಾಖೆಗಳು, ಕಚೇರಿಗಳು, ಎಟಿಎಂ-ಸಂಯೋಜಿತ ಶಾಖೆಗಳು ಮತ್ತು ನಗದು ಸಂಗ್ರಹಣಾ ಕೇಂದ್ರ ಕೆಲಸ ನಿರ್ವಹಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಒಪ್ಪಿಗೆ ಕೊಟ್ಟಿದೆ. ತಿಂಗಳಾಂತ್ಯ ಹಿನ್ನೆಲೆಯಲ್ಲಿ ಮುಷ್ಕರ ಮುನ್ನ ಎಲ್ಲ ಕೆಲಸ ಮುಗಿಸಲು ಸೂಚಿಸಲಾಗಿದೆ.

Bank Holiday 2026

ಶನಿವಾರ ರಜೆ, ಭಾನುವಾರ ಓಪನ್

ಇನ್ನು ಸೆಪ್ಟೆಂಬರ್ 26 ರಂದು ನಾಲ್ಕನೇ ಶನಿವಾರ ಹಿನ್ನೆಲೆ ಅಂದು ಬ್ಯಾಂಕ್‌ಗಳು ಕ್ಲೋಸ್ ಆಗಿರಲಿದ್ದು, ಸೋಮವಾರದಿಂದ ಮೂರು ದಿನ ಮುಷ್ಕರ ನಡೆಯಲಿದೆ. 'ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್' (UFBU) ಈ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು, ಮುಷ್ಕರ ನೇತೃತ್ವ ವಹಿಸಲಿದೆ. ಮತ್ತೊಂದೆಡೆ ಗ್ರಾಹಕರಿಗೆ ಅನಾನುಕೂಲವಾಗುವ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಬ್ಯಾಂಕ್ ಆಡಳಿತ ಮಂಡಳಿಗಳು ಮುಷ್ಕರ ಮುಂದೂಡುವಂತೆ ಕೋರಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಮುಷ್ಕರ ಮುಂದೂಡುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ.

'ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್' (UFBU) ಪ್ರಮುಖವಾಗಿ ವಾರಕ್ಕೆ ಐದು ದಿನಗಳ ಬ್ಯಾಂಕಿಂಗ್ ಕಾರ್ಯ ನಿರ್ವಹಣೆ ವ್ಯವಸ್ಥೆ ಜಾರಿಗೊಳಿಸಬೇಕು. ಬ್ಯಾಂಕ್ ನೌಕರರು, ಸಿಬ್ಬಂದಿ ಹಿತ ಕಾಯಬೇಕೆಂದು ಆಗ್ರಹಿಸಿದೆ. ಮುಷ್ಕರಕ್ಕೆ ನಿರ್ಧರಿಸುತ್ತಿದ್ದಂತೆ ಮಂಗಳವಾರ UFBU ಪ್ರತಿನಿಧಿಗಳು ಮತ್ತು ಉಪ ಮುಖ್ಯ ಕಾರ್ಮಿಕ ಆಯುಕ್ತರ ಮಧ್ಯ ನಡೆದ ಸಂಧಾನ ಸಭೆ ವಿಫಲವಾಗಿದ್ದು, ಮುಷ್ಕರ ಖಚಿತವಾಗಿದೆ. ಬದಲಾಗಿ ವಾರದಲ್ಲಿ ಐದು ದಿನ ಕೆಲಸದ ವ್ಯವಸ್ಥೆ ಜಾರಿಗೆ ಬಂದಲ್ಲಿ, ಈ ಬಗ್ಗೆ ಸಕಾರಾತ್ಮಕ ಸ್ಪಂದನೆ ದೊರೆತರೆ ನಾವು ಮುಷ್ಕರ ಕೈ ಬಿಡುವ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಯೂನಿಯನ್‌ ಮುಖ್ಯಸ್ಥರು ತಿಳಿಸಿದ್ದಾರೆ.

ಇತರ ಬೇಡಿಕೆಗಳು ಏನು?

ಇತರ ಬೇಡಿಕೆ ನೋಡುವುದಾದರೆ ಪಿಂಚಣಿ ಪರಿಷ್ಕರಣೆ ಆಗುವುದರ ಜೊತೆಗೆ ಸುಧಾರಣೆ ಆಗಬೇಕು. ಎಲ್ಲಾ ಪಿಂಚಣಿದಾರರಿಗೆ ಏಕರೂಪದ ತುಟ್ಟಿಭತ್ಯೆ (DA) ನೀಡಬೇಕು. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (NPS) ವ್ಯಾಪ್ತಿಗೆ ಬರುವ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ಯೋಜನೆಗೆ (OPS) ಬದಲಾಯಿಸುವ ಆಯ್ಕೆಯನ್ನು ನೀಡುವುದು ಸೇರಿ ಹಲವು ಬೇಡಿಕೆ ಈಡೇರಿಕೆಗೆ ನೌಕರರು ಒತ್ತಾಯಿಸಿದ್ದಾರೆ.

ಮುಷ್ಕರ ಹಿನ್ನೆಲೆಯಲ್ಲಿ ಸಾರ್ವಜನಿಕರು, ಗ್ರಾಹಕರು ಬ್ಯಾಂಕ್ ಬಂದ್ ದಿನಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್, ಮೊಬೈಲ್ ಆಪ್, ಯುಪಿಐ ವಹೀವಾಟು, ಎಟಿಎಂ ಬಳಸುವಂತೆ ಸಚಿವಾಲಯ ಮನವಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+