ಬ್ಯಾಂಕ್ ಉದ್ಯೋಗಿಗಳಿಗೆ ಶೀಘ್ರದಲ್ಲೇ ವಾರಕ್ಕೆ 2 ರಜೆ, ಜುಲೈ 28 ರಂದು ನಿರ್ಧಾರ ಸಾಧ್ಯತೆ
ನವದೆಹಲಿ, ಜುಲೈ. 23: ಭಾರತೀಯ ಬ್ಯಾಂಕಿಂಗ್ ಅಸೋಸಿಯೇಷನ್ (ಐಬಿಎ) ಐದು ದಿನಗಳ ಕೆಲಸದ ವಾರ, ಸಂಬಳ ಹೆಚ್ಚಳ ಮತ್ತು ನಿವೃತ್ತಿ ವೇತನದಾರರಿಗೆ ಗುಂಪು ವೈದ್ಯಕೀಯ ವಿಮಾ ಪಾಲಿಸಿಗಳ ಅಗತ್ಯತೆಗಳ ಬಗ್ಗೆ ಮುಂದಿನ ವಾರ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಈ ಬಗ್ಗೆ ಬ್ಯಾಂಕ್ ನೌಕರರು ಹಲವು ದಿನಗಳಿಂದ ಬೇಡಿಕೆ ಇಟ್ಟಿದ್ದರು.
ಇದಕ್ಕಾಗಿ ಬ್ಯಾಂಕ್ ಒಕ್ಕೂಟಗಳು ಮತ್ತು ಬ್ಯಾಂಕ್‌ಗಳ ಸಂಘದ ನಡುವಿನ ಮೊದಲ ಸಭೆ ಜುಲೈ 28 ರಂದು ಅಂದರೆ ಶುಕ್ರವಾರ ನಡೆಯಲಿದೆ. ಒಮ್ಮೆ ಅನುಮೋದನೆಗೊಂಡರೆ, ಬ್ಯಾಂಕ್ ಉದ್ಯೋಗಿಗಳು ವಾರಕ್ಕೊಮ್ಮೆ 2 ದಿನಗಳ ರಜೆ ಪಡೆಯಬಹುದು. ಜುಲೈ 19 ರ ದಿನಾಂಕದ ಅಧಿಸೂಚನೆಯಲ್ಲಿ, ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ಅವರು ಹಿಂದಿನ ಚರ್ಚೆಯಲ್ಲಿ ಐದು ಬ್ಯಾಂಕಿಂಗ್ ದಿನಗಳ ಪರಿಚಯದ ಸಮಸ್ಯೆಯನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದೆ.

"ಈ ಸಮಸ್ಯೆಯು ವಿವಿಧ ಮಧ್ಯಸ್ಥಗಾರರ ಪರಿಗಣನೆಯಲ್ಲಿದೆ. ಅದನ್ನು ಅನುಸರಿಸಲಾಗುತ್ತಿದೆ ಎಂದು ಭಾರತೀಯ ಬ್ಯಾಂಕಿಂಗ್ ಅಸೋಸಿಯೇಷನ್ ಮಾಹಿತಿ ನೀಡಿದೆ. ಇದನ್ನು ಪರಿಹರಿಸಲು ಭಾರತೀಯ ಬ್ಯಾಂಕಿಂಗ್ ಅಸೋಸಿಯೇಷನ್‌ಗೆ ಸೂಚಿಸಿದ್ದೇವೆ. ಆದ್ದರಿಂದ ವಾರಕ್ಕೆ ಐದು ಬ್ಯಾಂಕಿಂಗ್ ದಿನಗಳನ್ನು ಮತ್ತಷ್ಟು ವಿಳಂಬವಿಲ್ಲದೆ ಪರಿಚಯಿಸಲಾಗುತ್ತದೆ" ಎಂದು ಯುಎಫ್‌ಬಿಯು ಹೇಳಿದೆ.
ಪ್ರಸ್ತುತ, ಬ್ಯಾಂಕ್ ಉದ್ಯೋಗಿಗಳು ಪರ್ಯಾಯವಾಗಿ ಶನಿವಾರದಂದು ಕೆಲಸ ಮಾಡುತ್ತಾರೆ. ಅಂದರೆ ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರದಂದು ಬ್ಯಾಂಕ್‌ಗಳು ತೆರೆದಿರುತ್ತವೆ. ಬ್ಯಾಂಕ್ ಯೂನಿಯನ್‌ಗಳು ಐದು ದಿನಗಳ ಕಾಲ ಕೆಲಸ ಮಾಡಲು ಮತ್ತು ಎರಡು ದಿನ ರಜೆ ನೀಡಬೇಕು ಎಂದು ಒತ್ತಾಯಿಸುತ್ತಿವೆ. ಭಾರತೀಯ ಜೀವ ವಿಮಾ ನಿಗಮದಲ್ಲಿ (ಎಲ್‌ಐಸಿ) ಐದು ಕೆಲಸದ ದಿನಗಳ ನಿಯಮವನ್ನು ಸರ್ಕಾರ ಜಾರಿಗೊಳಿಸಿದಾಗಿನಿಂದ ಈ ಬೇಡಿಕೆಯು ಮುನ್ನೆಲೆಗೆ ಬಂದಿದೆ.
ಬ್ಯಾಂಕ್ ನೌಕರರ ಈ ಬೇಡಿಕೆಗೆ ತಮ್ಮ ಅಭ್ಯಂತರವಿಲ್ಲ ಎಂದು ಹಣಕಾಸು ಸಚಿವಾಲಯ ಈ ಹಿಂದೆ ಹೇಳಿತ್ತು. ಈ ಬಗ್ಗೆ ಭಾರತೀಯ ಬ್ಯಾಂಕಿಂಗ್ ಅಸೋಸಿಯೇಷನ್ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿತ್ತು. ಪ್ರಸ್ತಾವನೆಯ ಪ್ರಕಾರ, ಬ್ಯಾಂಕ್ ಉದ್ಯೋಗಿಗಳ ದೈನಂದಿನ ಕೆಲಸದ ಸಮಯವನ್ನು 40 ನಿಮಿಷಗಳವರೆಗೆ ಹೆಚ್ಚಿಸಲಾಗುತ್ತದೆ. ನೆಗೋಶಿಯೇಬಲ್ ಇನ್‌ಸ್ಟ್ರುಮೆಂಟ್ ಆಕ್ಟ್‌ನ ಸೆಕ್ಷನ್ 25 ರ ಅಡಿಯಲ್ಲಿ ವೇತನ ಮಂಡಳಿಯ ಪರಿಷ್ಕರಣೆಯೊಂದಿಗೆ ಶೀಘ್ರದಲ್ಲೇ ಅಧಿಸೂಚನೆಯನ್ನು ಹೊರಡಿಸಬಹುದು.
"ವೈದ್ಯಕೀಯ ವಿಮಾ ಪಾಲಿಸಿಯಲ್ಲಿ, ಯುಎಫ್‌ಬಿಯು ಅವರು ನಿವೃತ್ತಿ ಹೊಂದಿದವರಿಗೆ ರೂ 2 ಲಕ್ಷಕ್ಕೆ ಪ್ರತ್ಯೇಕ ಏಕರೂಪದ ಬೇಸ್ ಪಾಲಿಸಿಯನ್ನು ಒಪ್ಪಿಕೊಂಡಿದ್ದಾರೆ ಮತ್ತು ಕೆಲವು ಸೀಲಿಂಗ್‌ಗಳು ಮತ್ತು ಹಾಸಿಗೆ ಶುಲ್ಕಗಳ, ಪ್ಯಾಕೇಜ್ ಚಿಕಿತ್ಸೆಗಳು ಇತ್ಯಾದಿಗಳ ಮೇಲಿನ ಪ್ರೀಮಿಯಂ ಅನ್ನು ಕಡಿಮೆ ಮಾಡಲಾಗುತ್ತದೆ. ಇದಕ್ಕಿಂತ ಹೆಚ್ಚಾಗಿ, 10 ಲಕ್ಷ ರೂ.ವರೆಗಿನ ಟಾಪ್ ಅಪ್ ಯೋಜನೆಯು ಐಚ್ಛಿಕ ಆಧಾರದ ಮೇಲೆ ಲಭ್ಯವಾಗಲಿದೆ" ಎಂದು ಯುಎಫ್‌ಬಿಯು ಹೇಳಿದೆ.
ಇನ್ನು, ಆಗಸ್ಟ್ 2023 ರಲ್ಲಿ ಶನಿವಾರ ಮತ್ತು ಭಾನುವಾರ ಸೇರಿದಂತೆ ಒಟ್ಟು 14 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಈ ರಜಾದಿನಗಳಲ್ಲಿ ಕೆಲವು ದೇಶಾದ್ಯಂತ ಬ್ಯಾಂಕ್‌ಗಳಿಗೆ ಅನ್ವಯಿಸುತ್ತವೆ, ಆದರೆ ಕೆಲವು ನಿರ್ದಿಷ್ಟ ರಾಜ್ಯಗಳು ಮತ್ತು ಪ್ರದೇಶಗಳಿಗೆ ಅನ್ವಯಿಸುತ್ತವೆ. ಬ್ಯಾಂಕ್ ಶಾಖೆಗಳನ್ನು ಮುಚ್ಚಿದಾಗ, ಗ್ರಾಹಕರು ಆನ್‌ಲೈನ್‌ನಲ್ಲಿ ವಹಿವಾಟು ನಡೆಸಲು ಮೊಬೈಲ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳು ಲಭ್ಯವಿವೆ. ಗ್ರಾಹಕರು ಎಟಿಎಂ ಯಂತ್ರಗಳು ಮತ್ತು ಬ್ಯಾಂಕಿಂಗ್ ಕಿಯೋಸ್ಕ್‌ಗಳಲ್ಲಿ ಸೇವೆಗಳನ್ನು ಪಡೆಯಬಹುದು.












Click it and Unblock the Notifications