70 ವರ್ಷಗಳ ಬಳಿಕ 'ಭಾರತ-ಬಾಂಗ್ಲಾದೇಶ' ರೈಲು ಸಂಪರ್ಕ, 5 ಮುಖ್ಯಾಂಶಗಳು
ನವದೆಹಲಿ, ನವೆಂಬರ್ 01: ಸುಮಾರು 70 ವರ್ಷಗಳ (ಏಳು ದಶಕ) ಭಾರತ ಈಶಾನ್ಯ ರಾಜ್ಯಗಳಲ್ಲಿ ಒಂದಾಗಿರುವ ತ್ರಿಪುರ- ಬಾಂಗ್ಲಾದೇಶಕ್ಕೆ ರೈಲು ಸಂಪರ್ಕ ಸೇವೆ ಸಾಧಿಸಲಾಗಿದೆ. ಈ ಮೂಲಕ ಭಾರತೀಯ ರೈಲ್ವೆ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಈ ನೂತನ ರೈಲು ಸಂಪರ್ಕವು ಅಖೌರಾ-ಅಗರ್ತಲಾ ಗಡಿಯಾಚೆಗಿನ ರೈಲು ಸಂಪರ್ಕ, ಕೋಲ್ಕತ್ತಾ ಮತ್ತು ಅಗರ್ತಲಾ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಈ ಭಾಗದ ವ್ಯಾಪಾರ ವಹೀವಾಟನ್ನು ಸಧಾರಿಸಲಿದೆ.
ಹಾಗಾದರೆ ಬಹುವರ್ಷಗಳ ಬಳಿಕ ಎರಡು ದೇಶಗಳ ಮಧ್ಯೆ ಆರಂಭವಾದ ಈ ಭಾರತ-ಬಾಂಗ್ಲಾದೇಶ ಮಧ್ಯೆದ ರೈಲು ಪ್ರಯಾಣ ಹೇಗಿರಲಿದೆ ಎಂಬ ಐದು ಪ್ರಮುಖ ಅಂಶಗನ್ನು ಇಲ್ಲಿ ತಿಳಿಯೋಣ.

* ಕೋಲ್ಕತ್ತಾದಿಂದ ತ್ರಿಪುರಾದ ರಾಜಧಾನಿ ಅಗರ್ತಲಾಕ್ಕೆ ರೈಲು ಮಾರ್ಗದ ಮೂಲಕ ಪ್ರಯಾಣಿಸುವವರು ಉತ್ತರ ಪಶ್ಚಿಮ ಬಂಗಾಳದ ಮೂಲಕ ಅಸ್ಸಾಂನ ಗುವಾಹಟಿಗೆ ಸರ್ಕ್ಯೂಟ್ ಮಾರ್ಗದಲ್ಲಿ ಪ್ರಯಾಣ ಮಾಡಬಹುದಾಗಿದೆ. ಅಲ್ಲಿಂದ ಮುಂದೆ ದಕ್ಷಿಣದ ಕಡೆಗೆ ರೈಲು ಪ್ರಯಾಣ ಮಾಡಿ ತ್ರಿಪುರಾ ಕಡೆಗೆ ತಿರುಗುತ್ತದೆ. ಈ ಪ್ರಯಾಣದ ಸಮಯ ಸುಮಾರು 38 ಗಂಟೆಗಳು ಎಂದು ಇಲಾಖೆ ತಿಳಿಸಿದೆ.
* ಅಖೌರಾ-ಅಗರ್ತಲಾ ಕ್ರಾಸ್-ಬಾರ್ಡರ್ ರೈಲು ಸಂಪರ್ಕ ಸಂಪರ್ಕ ಇದೆ. ನೂತನ ಮಾರ್ಗದ ರೈಲುಗಳು ಕೋಲ್ಕತ್ತಾದಿಂದ ಬಾಂಗ್ಲಾದೇಶದ ಮೂಲಕ ಅಗರ್ತಲಾಕ್ಕೆ ಚಲಿಸಬಹುದು. ಬಾಂಗ್ಲಾ ದೇಶಕ್ಕೆ ಭಾರತದ ಈಶಾನ್ಯ ಮತ್ತು ದೇಶದ ಉಳಿದ ಭಾಗಗಳ ನಡುವಿನ ಭೂಪ್ರದೇಶದ ವ್ಯಾಪ್ತಿಯಲ್ಲಿ ಸಂಪರ್ಕಿಸುತ್ತದೆ.
* ಬಾಂಗ್ಲಾ ದೇಶಕ್ಕೆ ಸಂಪರ್ಕಿಸುವ ಈ ರೈಲು ಪ್ರಯಾಣದ ಸಮಯವನ್ನು ಹಿಂದಿನ 38 ಗಂಟೆಗಳಿಂದ 12 ಗಂಟೆಗೆ ಇಳಿಕೆ ಮಾಡುತ್ತದೆ. ಹೀಗಾಗಿ ಇದು ಪ್ರಯಾಣಿಕರ ದಟ್ಟಣೆಯನ್ನು ಬೃಹತ್ ಪ್ರಮಾಣದಲ್ಲಿ ಹೆಚ್ಚಳದ ನಿರೀಕ್ಷೆ ಇದೆ.
* ದಿನಗಳ ಕಾಲ ಈ ಮಾರ್ಗದಲ್ಲಿ ಪ್ರಯಾಣಿಸುವ ಮಾರ್ಗ ಬಿಟ್ಟು ಪ್ರಯಾಣಿಕರ ಇನ್ನುಮುಂದೆ ಈ ಹೊಸ ಮಾರ್ಗವನ್ನು ಹೆಚ್ಚು ಪ್ರಾಯೋಗಿಕ ಮತ್ತು ಅನುಕೂಲಕರವೆಂದು ಬಳಕೆ ಮಾಡಲು ಶುರು ಮಾಡುತ್ತಾರೆ.
* ಭಾರತ-ಬಾಂಗ್ಲಾ ಈ ರೈಲು ಸಂಪರ್ಕದಿಂದ ಪ್ರಯಾಣಿಕರಿಗೆ ಮಾತ್ರವಲ್ಲದೇ ಬೃಹತ್ ಪ್ರಮಾಣದ ಸರಕುಗಳನ್ನು ಸಾಗಿಸಬಹುದಾಗಿದೆ. ಇದರಿಂದ ವ್ಯಾಪಾರವು ಈ ಪ್ರದೇಶದಲ್ಲಿ ಅಭಿವೃದ್ಧಿ ಹೊಂದಲಿವೆ. ಈ ರೈಲು ಸಂಪರ್ಕದ ಒಟ್ಟ ಉದ್ದ 12.24 ಕಿಮೀ ಇದೆ. ಬಾಂಗ್ಲಾದೇಶದಲ್ಲಿ 6.78 ಕಿಮೀ ಡ್ಯುಯಲ್ ಗೇಜ್ ರೈಲು ಮಾರ್ಗ ಮತ್ತು ತ್ರಿಪುರಾದಲ್ಲಿ 5.46 ಕಿಮೀ. ಉದ್ದವಿದೆ ಎಂದು ಇಲಾಖೆ ಮಾಹಿತಿ ನೀಡಿದೆ.












Click it and Unblock the Notifications