ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಣ್ಯ ನಿಷೇಧದ ಮೂಲಕ ಹೊಸ ಶಾಕ್ ಕೊಡಲು ಮೋದಿ ಸಿದ್ಧತೆ

By ಚೆನ್ನಬಸವೇಶ್ವರ್
|
Google Oneindia Kannada News

ನಾಣ್ಯಗಳ ಮೇಲೆ ನಿಷೇಧ ಹೇರಲು ಪ್ರಧಾನಿ ನರೇಂದ್ರ ಮೋದಿ ಚಿಂತನೆ ನಡೆಸಿದ್ದಾರಾ? ಅಪನಗದೀಕರಣದಿಂದ ಚೇತರಿಸಿಕೊಳ್ಳುವಾಗಲೇ ಮತ್ತೊಂದು ಶಾಕ್ ನೀಡುವ ಸಾಧ್ಯತೆ ಇದೆ ಎಂದು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ವರದಿಯಾಗಿದೆ.

ಎರಡು ಸಾವಿರದ ನೋಟು ಮತ್ತು 10, 5, 2, 1 ರುಪಾಯಿ ನಾಣ್ಯ ಕೂಡ ಅಮಾನ್ಯ ಮಾಡಲು ಚಿಂತನೆ ನಡೆಸಿದ್ದಾರೆ. ವರದಿಗಳ ಪ್ರಕಾರ, ತೆರಿಗೆಗಳ್ಳರು ಎರಡು ಸಾವಿರ ರುಪಾಯಿ ನೋಟುಗಳನ್ನು ಇಟ್ಟುಕೊಂಡಿದ್ದಾರೆ ಎಂಬ ಬಗ್ಗೆ ಮೋದಿ ಅವರಿಗೆ ಗೊತ್ತಿದೆ. ಆದ್ದರಿಂದಲೇ ಶೀಘ್ರದಲ್ಲೇ ಎರಡು ಸಾವಿರ ರುಪಾಯಿ ನೋಟುಗಳನ್ನು ಹಿಂಪಡೆಯುವುದಕ್ಕೆ ಚಿಂತಿಸಿದ್ದಾರೆ.[ಜಿಡಿಪಿ ಕುಸಿತವು ಹಿಂದಿನ ಸರಕಾರಗಳ ಪಾಪದ ಫಲ: ಜೇಟ್ಲಿ]

ನಾಣ್ಯಗಳನ್ನು ನಿಷೇಧಿಸುವುದರ ಹಿಂದಿರುವ ತರ್ಕವನ್ನು ಕೂಡ ವರದಿಯಲ್ಲಿ ತೆರೆದಿಡಲಾಗಿದೆ. ನೋಟುಗಳ ಮುದ್ರಣಕ್ಕಿಂತ ನಾಣ್ಯಗಳಿಗೆ ಹೆಚ್ಚಿನ ಖರ್ಚು ತಗುಲತ್ತದೆ. ಒಂದು ನಾಣ್ಯ ಟಂಕಿಸುವುದರ ಖರ್ಚಿನಲ್ಲಿ ಆರು ನೋಟುಗಳ ಮುದ್ರಣ ಮಾಡಬಹುದು. ಉದಾಹರಣೆಗೆ ಹತ್ತು ರುಪಾಯಿಯ ನಾಣ್ಯ ಟಂಕಿಸುವುದಕ್ಕೆ ಆರು ರುಪಾಯಿ ಖರ್ಚಾಗುತ್ತದೆ.

Ban on coins: Is this the new surprise from Narendra Modi

ಅದೇ ಹತ್ತು ರುಪಾಯಿಯ ನೋಟು ಮುದ್ರಣಕ್ಕೆ ತೊಂಬತ್ನಾಲ್ಕು ಪೈಸೆ ಖರ್ಚು ತಗುಲುತ್ತದೆ. ಹಾಗಾದರೆ ಒಂದು, ಎರಡು, ಐದು ರುಪಾಯಿಯ ನಾಣ್ಯ ಟಂಕಿಸುವುದಕ್ಕೆ ಎಷ್ಟು ಖರ್ಚಾಗಬಹುದು ಎಂಬುದನ್ನು ಊಹಿಸಿ. ಆದ್ದರಿಂದಲೇ ಸರಕಾರವು ನಾಣ್ಯಗಳನ್ನು ಟಂಕಿಸುವುದನ್ನು ನಿಲ್ಲಿಸಿ, ನೋಟುಗಳ ಮುದ್ರಣ ಹೆಚ್ಚಿಸಲು ನಿರ್ಧರಿಸಿದೆ.[ಭೂ ಸೇನೆಯ ನೆರವು ಪಡೆದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ]

ಈ ವರದಿಯೇ ನಿಜವಾದರೆ ದೇಶದಾದ್ಯಂತ ನಾಣ್ಯಗಳೇ ಕಣ್ಮರೆಯಾಗಲಿವೆ. ಹ್ಞಾಂ, ಒಂದ್ನಿಮಿಷ. ಯಾವ ನೋಟು ಮುದ್ರಣಕ್ಕೆ ಎಷ್ಟು ಖರ್ಚಾಗುತ್ತದೆ ಎಂಬುದರ ವಿವರ ಇಲ್ಲಿದೆ.

ರು 10- 94 ಪೈಸೆ

ರು 20- 1.16

ರು 50- 1.65

ರು 100- 1.70

ರು 500- 2.90

ರು 2000- 3.80

ಆದರೆ, ಸರಕಾರ ಏಕೆ ನಾಣ್ಯಗಳ ರದ್ದು ಮಾಡುವುದಕ್ಕೆ ಯೋಚಿಸುತ್ತಿದೆ? ಏಕೆಂದರೆ ನೋಟುಗಳ ಆಯುಷ್ಯ ಒಂಬತ್ತರಿಂದ ಹತ್ತು ತಿಂಗಳು ಮಾತ್ರ. ಆದರೆ ನಾಣ್ಯಗಳು ದೀರ್ಘಾವಧಿ ಬಳಸಬಹುದು. ಆದ್ದರಿಂದಲೇ ನೋಟು ಮುದ್ರಣಕ್ಕಿಂತ ನಾಣ್ಯ ಉತ್ತಮ ಅನ್ನುತ್ತಾರೆ ತಜ್ಞರು. ಆದ್ದರಿಂದಲೇ ನಾಣ್ಯಗಳು ಇನ್ನೂ ಚಲಾವಣೆಯಲ್ಲಿವೆ. ಸರಕಾರವು ನಾಣ್ಯಗಳ ನಿಷೇಧಕ್ಕೆ ಹಿಂದೆ-ಮುಂದೆ ಯೋಚಿಸುತ್ತಿದೆ.

ಒನ್ ಇಂಡಿಯಾ ನ್ಯೂಸ್

English summary
As India is still recovering from the effect of demonetization Prime Minister Narendra Modi and team is reportedly ready with another big bang surprise, say TV reports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X