Get Updates
Get notified of breaking news, exclusive insights, and must-see stories!

ಹಾಸಿಗೆ ಹಂಚಿಕೊಳ್ಳುವ 'ಕೆಟ್ಟ' ನಟಿಯರಿದ್ದಾರೆ : ಸಂಸದ ಕಮ್ ನಟ

ತಿರುವನಂತಪುರಂ, ಜುಲೈ 06: ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷ, ಜನಪ್ರಿಯ ನಟ ಹಾಗೂ ಕೇರಳದ ಸಂಸದ ಇನ್ನೋಸೆಂಟ್ ವರೀದ್ ತೆಕ್ಕತಾಲ ಅವರ ಹೇಳಿಕೆ ವಿವಾದವನ್ನು ಹುಟ್ಟಿ ಹಾಕಿದೆ.

ಮಲಯಾಳಂ ಚಲನಚಿತ್ರೋದ್ಯಮದ ಬಗ್ಗೆ ಮಾತನಾಡುತ್ತ "ಕೆಟ್ಟ ನಟಿಯರು ಹಾಸಿಗೆ ಹಂಚಿಕೊಳ್ಳಲೂ ಸಿದ್ಧ" ಅಂತಾ ಹೇಳಿದ್ದಾರೆ. 2014ರಲ್ಲಿ ಇನ್ನೋಸೆಂಟ್ ವರೀದ್ ಸಂಸದರಾಗಿದ್ದಾರೆ. ಇದರ ಜೊತೆಗೆ Association of Malayalam Movie Artists AMMA ಅಧ್ಯಕ್ಷರಾಗಿದ್ದುಕೊಂಡು ಇಂತಹ ಹೇಳಿಕೆ ನೀಡಿರುವುದನ್ನು ಹಲವಾರು ಮಂದಿ ಟೀಕಿಸಿದ್ದಾರೆ.

'Bad Women May Go To Bed', Kerala Actor-MP Innocent Vareed Shocker On Casting Couch,
ಮಲಯಾಳಂ ನಟಿಯ ಅಪಹರಣ, ಚಿತ್ರೋದ್ಯಮದ ಬಗ್ಗೆ Women In Cinema Collective (WCC) ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ 72 ವರ್ಷ ವಯಸ್ಸಿನ ಇನ್ನೋಸೆಂಟ್, 'ಮಲಯಾಳಂ ಚಿತ್ರೋದ್ಯಮ ಈಗ ಸ್ವಚ್ಛವಾಗಿದೆ. ಯಾವುದೇ ಮಹಿಳೆಯೊಂದಿಗೆ ಯಾರಾದ್ರೂ ಕೆಟ್ಟದಾಗಿ ವರ್ತಿಸಿದ್ರೆ ತಕ್ಷಣ ಅದು ಮಾಧ್ಯಮದವರಿಗೆ ಗೊತ್ತಾಗುತ್ತದೆ. ಆದ್ರೆ ಮಹಿಳೆಯೇ ಕೆಟ್ಟವಳಾಗಿದ್ರೆ, ಆಕೆ ಹಾಸಿಗೆ ಹಂಚಿಕೊಳ್ಳಲು ಹಿಂಜರಿಯುವುದಿಲ್ಲ' ಎಂದಿದ್ದಾರೆ.

ಈ ರೀತಿ ಹಾಸಿಗೆ ಹಂಚಿಕೊಳ್ಳುವ ವ್ಯವಸ್ಥೆ, ನಟಿಯರ ಮೇಲಿನ ದೌರ್ಜನ್ಯದ ಬಗ್ಗೆ ಈ ಹಿಂದೆ ಪಾರ್ವತಿ, ಲಕ್ಷ್ಮಿ ರೈ ಕೂಡಾ ಎಚ್ಚರಿಸಿದ್ದರು. ಆದರೆ, ಇನ್ನೋಸೆಂಟ್ ಅವರ ಹೇಳಿಕೆ ಬಗ್ಗೆ ನಮ್ಮ ಸಮರ್ಥನೆ ಇಲ್ಲ. ಆದರೆ, ಲೈಂಗಿಕ ಕಿರುಕುಳ ಮುಕ್ತ ವಾತಾವರಣ ಇದೆ ಎಂದು ಘೋಷಿಸಲೂ ಸಾಧ್ಯವಾಗುತ್ತಿಲ್ಲ ಎಂದು WCC ತನ್ನ ಫೇಸ್ ಬುಕ್ ಪುಟದಲ್ಲಿ ಪ್ರತಿಕ್ರಿಯಿಸಿದೆ. ಈ ಸಂಸ್ಥೆಗೆ ನಟಿ ಮಂಜು ವಾರಿಯರ್ ಅಧ್ಯಕ್ಷೆಯಾಗಿದ್ದು, ಚಿತ್ರರಂಗದಲ್ಲಿ ಮಹಿಳಾ ನಟಿಯರ ಸುರಕ್ಷತೆ ಬಗ್ಗೆ ಹೋರಾಟ ನಡೆಸುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+