ಬಾಂಬ್ರಿ ಮಸೀದಿ ಧ್ವಂಸ ಪ್ರಕರಣ, ಇಂದು ಕೋರ್ಟ್ ಮುಂದೆ ಅಡ್ವಾಣಿ ಹಾಜರ್

ನವದೆಹಲಿ, ಮೇ 30: ಹಿರಿಯ ಬಿಜೆಪಿ ನಾಯಕ ಎಲ್.ಕೆ ಅಡ್ವಾಣಿ ಇದೇ ಮೊದಲ ಬಾರಿಗೆ ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ. ಬಾಂಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಅವರು ಕೋರ್ಟ್ ಮುಂದೆ ಹಾಜರಾಗಲಿದ್ದಾರೆ.

ಇನ್ನುಅವರ ಜತೆ ಕೇಂದ್ರ ಸಚಿವೆ ಉಮಾ ಭಾರತಿ ಹಾಗೂ ಹಿರಿಯ ನಾಯಕ ಮುರಳಿ ಮನೋಹರ್ ಜೋಷಿ ಕೂಡಾ ಕೋರ್ಟ್ ಗೆ ಹಾಜರಾಗುವ ಸಾಧ್ಯತೆ ಇದೆ. ಈ ಹಿಂದೆ ಮೇ 25 ರಂದು ನ್ಯಾಯಾಲಯ ಮೂವರು ಆರೋಪಿಗಳಿಗೆ ಕೋರ್ಟ್ ಮುಂದೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಅವರ ಮೇಲೆ ಆರೋಪಗಳನ್ನು ಪಟ್ಟಿ ಮಾಡಲು ಹಾಜರಾಗುವಂತೆ ಹೇಳಿತ್ತು.

Babri case: Advani and others to appear in court today

ಖುದ್ದು ಹಾಜರಾತಿಯಿಂದ ವಿನಾಯಿತಿ ಕೋರಿ ಮೂವರು ನಾಯಕರು ಕೋರ್ಟ್ ಮೊರೆ ಹೋಗಿದ್ದರು. ಆದರೆ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿತ್ತು. ಸದ್ಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆಯನ್ನು ಕೋರ್ಟ್ ಪ್ರತಿದಿನ ನಡೆಸುತ್ತಿದೆ.

ಕಳೆದ ಏಪ್ರಿಲ್ ನಲ್ಲಿ ಈ ನಾಯಕರ ವಿರುದ್ಧ ಕ್ರಿಮಿನಲ್ ಸಂಚಿನ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮರು ಸ್ಥಾಪಿಸಿದ ನಂತರ ಈ ವಿಚಾರಣೆಗಳು ಆರಂಭವಾಗಿದ್ದವು.

ಇನ್ನು ಕೋರ್ಟ್ ಮುಂದೆ ಹಾಜರಾಗಬೇಕಾದ ಇತರ ನಾಯಕರೆಂದರೆ ಬಿಜೆಪಿಯ ವಿನಯ್ ಕಟಿಯಾರ್, ವಿಶ್ವ ಹಿಂದೂ ಪರಿಷತ್ ನ ವಿಷ್ಣು ಹರಿ ದಾಲ್ಮಿಯಾ, ರಾಮ್ ವಿಲಾದ್ ವೇದಾಂತಿ, ಸಾಧ್ವಿ ರಿತಂಬರ, ಮಹಂತ್ ನಿತ್ಯ ಗೋಪಾಲದಾಸ್, ಮಹಂತ್ ಧರ್ಮಾದಾಸದ, ಚಂಪಟ್ ರೈ ಮತ್ತು ಸತೀಶ್ ಪ್ರಧಾನ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+