ನೋಟು ನಿಷೇಧ ಕ್ರಮ: ಮೋದಿಯನ್ನು ಟೀಕಿಸಿದ ಬಾಬಾ ರಾಮ್‌ದೇವ್

ನವದೆಹಲಿ, ಮೇ 3: ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುವ ಪ್ರಮುಖರಲ್ಲಿ ಒಬ್ಬರಾಗಿರುವ ಬಾಬಾ ರಾಮ್‌ದೇವ್, ಮೋದಿ ಅವರು ತೆಗೆದುಕೊಂಡ ಒಂದು ನಿರ್ಧಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'ದಿ ಕ್ವಿಂಟ್' ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮೋದಿ ಅವರ ಅಪನಗದೀಕರಣ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದಾರೆ. ಪ್ರಧಾನಿ ಅವರನ್ನು ಭ್ರಷ್ಟ ಬ್ಯಾಂಕರ್‌ಗಳು ತಪ್ಪು ದಾರಿಗೆ ಎಳೆದಿದ್ದರು. ಆರ್ಥಿಕತೆಯಲ್ಲಿ ಅಪನಗದೀಕರಣವು 3-5 ಲಕ್ಷ ಕೋಟಿ ರೂಪಾಯಿ ಹಗರಣವನ್ನು ಹೊರಗೆಳೆಯುತ್ತದೆ ಎಂದು ರಾಮ್‌ದೇವ್ ಆರೋಪಿಸಿದ್ದಾರೆ.

ಅಪನಗದೀಕರಣದಿಂದಾಗಿ ಬ್ಯಾಂಕರ್‌ಗಳು ಕೋಟ್ಯಂತರ ರೂಪಾಯಿ ಹಣ ಮಾಡಿದರು. ಅವರಲ್ಲಿನ ಭ್ರಷ್ಟಾಚಾರದ ಮಟ್ಟವನ್ನು ಮೋದಿ ಅವರೂ ಅಂದಾಜಿಸಲು ಸಾಧ್ಯವಿಲ್ಲ. 3-5 ಲಕ್ಷ ಕೋಟಿ ರೂಪಾಯಿಯಷ್ಟು ಹಗರಣ ಹೊರಬೀಳುತ್ತದೆ ಎಂದಿದ್ದಾರೆ.

Baba Ramdev unhappy Prime Minister Narendra Modi note ban demonetization

ಭ್ರಷ್ಟ ಬ್ಯಾಂಕರ್‌ಗಳಿಂದ ಮೋದಿ ಇದರಲ್ಲಿ ಸಿಕ್ಕಿಬಿದ್ದರು. ನಗದು ಪೂರೈಕೆ ಸಮಸ್ಯೆಯಾಗಿರಲಿಲ್ಲ. ಆದರೆ ಎಲ್ಲ ನಗದೂ ಭ್ರಷ್ಟರ ಬಳಿಗೇ ಹೋಗುತ್ತಿದೆ. ನೋಟು ನಿಷೇಧವನ್ನು ಹೆಚ್ಚು ಪರಿಣಾಮಕಾರಿಯಾಗಿ ಅಳವಡಿಸಬಹುದಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಆರ್‌ಬಿಐ ಅಧಿಕಾರಿಗಳನ್ನೂ ಪರಿಶೀಲನೆಗೆ ಒಳಪಡಿಸಲಾಗಿದೆ. ಇದು ತುಂಬಾ ದುರದೃಷ್ಟಕರ. ಇದು ನಮ್ಮ ವ್ಯವಸ್ಥೆಯ ಬಗ್ಗೆ ಗಂಭೀರ ಅನುಮಾನ ಮೂಡಿಸುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+