Ayodhya: ರಾಮ ಮಂದಿರ ಪ್ರತಿಷ್ಠಾಪನೆಗೆ ಒಂದು ವರ್ಷ: ಇಂದಿನಿಂದ ಮೂರು ದಿನ ಆಚರಣೆ

ಅಯೋಧ್ಯೆ ಜನವರಿ 11: ಉತ್ತರಪ್ರದೇಶ ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಾಗಿ ಒಂದು ವರ್ಷ ಪೂರ್ಣಗೊಂಡಿದೆ. ಹೀಗಾಗಿ ರಾಮಮಂದಿರದ ಮೊದಲ ವಾರ್ಷಿಕೋತ್ಸವ ಇಂದು ನಡೆಯಲಿದೆ. ಶನಿವಾರದಿಂದ ಅಯೋಧ್ಯೆಯಲ್ಲಿ ಮೂರು ದಿನಗಳ ಉತ್ಸವ ಪ್ರಾರಂಭವಾಗಲಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಮ ಲಲ್ಲಾ ಮೂರ್ತಿಗೆ ಮಹಾ ಅಭಿಷೇಕ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಉದ್ಘಾಟನೆ ಬಳಿಕ ಸಿಎಂ ಆದಿತ್ಯನಾಥ್ ಅವರು ದೇವಾಲಯದ ಆವರಣದಲ್ಲಿ ಮೊದಲು ಅಂಗದ್ ತಿಲಾದ ಮಠಾಧೀಶರು ಮತ್ತು ಸಭಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಉಪಮುಖ್ಯಮಂತ್ರಿಗಳಾದ ಬ್ರಜೇಶ್ ಪಾಠಕ್ ಮತ್ತು ಕೇಶವ್ ಪ್ರಸಾದ್ ಮೌರ್ಯ ಇಬ್ಬರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ayodhya one year since the construction of ram temple three-day celebration from today

ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭ ಮೇಳಕ್ಕೆ ಭರ್ಜರಿ ತಯಾರಿ ನಡೆದರೆ ಇತ್ತ ಅಯೋಧ್ಯೆಯಲ್ಲಿ ರಾಮಮಂದಿರದ ಮೊದಲ ವಾರ್ಷಿಕೋತ್ಸವ ನಡೆಯುತ್ತಿದೆ. ಕಳೆದ ವರ್ಷ ಜನವರಿ 22ರಂದು ರಾಮ ಲಲ್ಲಾ ಮೂರ್ತಿಯನ್ನು ದೇವಾಲಯದಲ್ಲಿ ವಿಧ್ಯುಕ್ತವಾಗಿ ಇರಿಸಲಾಗಿತ್ತು. ಈ ವರ್ಷ 'ಪ್ರತಿಷ್ಠಾ ದ್ವಾದಶಿ ಉತ್ಸವ' ಜನವರಿ 11ರಂದು ಬರುತ್ತದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ಸಂದರ್ಭದ ಸ್ಮರಣಾರ್ಥ ಜನವರಿ 11 ರಿಂದ 13 ರವರೆಗೆ ಮೂರು ದಿನಗಳ ಆಚರಣೆಯನ್ನು ಆಯೋಜಿಸಿದೆ. ಈ ಮೂರು ದಿನದ ಉತ್ಸವದಲ್ಲಿ ಸಂಗೀತ, ಕಲೆ ಮತ್ತು ಸಾಹಿತ್ಯ ವ್ಯಕ್ತಿಗಳ ಪ್ರದರ್ಶನಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಈ ಕಾರ್ಯಕ್ರಮಕ್ಕಾಗಿ ಹೆಚ್ಚಿನ ಜನಸಂದಣಿಯನ್ನು ನಿಯಂತ್ರಿಸಲು ದೇವಾಲಯ ಭೇಟಿಗಾಗಿ ಎಲ್ಲಾ ರೀತಿಯ ಪಾಸ್‌ಗಳನ್ನು ಮೂರು ದಿನಗಳವರೆಗೆ ಸ್ಥಗಿತಗೊಳಿಸಲಾಗಿದೆ. ಇನ್ನೂ ಈ ಉತ್ಸವದಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವವರಿಗಾಗಿ ದೂರದರ್ಶನದ ಮೂಲಕ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲು ನಿರ್ಧರಿಸಲಾಗಿದೆ. ಹೀಗೆ ದೇಶಾದ್ಯಂತ ಭಕ್ತರು ಆಚರಣೆಗಳನ್ನು ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ.

ಮೊದಲ ವಾರ್ಷಿಕೋತ್ಸವದ ಗೌರವಾರ್ಥವಾಗಿ ದೇವಾಲಯದ ಆವರಣವನ್ನು 50 ಕ್ವಿಂಟಾಲ್‌ಗೂ ಹೆಚ್ಚು ಹೂವುಗಳಿಂದ ಅಲಂಕರಿಸಲಾಗಿದೆ. ವಿಐಪಿ ಗೇಟ್ ಸಂಖ್ಯೆ 11 ಅನ್ನು ಇತರ ಪ್ರವೇಶ ದ್ವಾರಗಳೊಂದಿಗೆ ಅದ್ದೂರಿಯಾಗಿ ಅಲಂಕರಿಸಲಾಗಿದೆ. ಜೊತೆಗೆ ಕಾರ್ಯಕ್ರಮ ಮತ್ತು ಮಹಾಕುಂಭಕ್ಕೆ ಸಿದ್ಧತೆಗಾಗಿ ಮರಗಳ ಮೇಲೆ ದೀಪಗಳನ್ನು ಅಳವಡಿಸಲು ಪುರಸಭೆ ಸೂಚನೆ ನೀಡಿದೆ.

ಎಸ್‌ಎಸ್‌ಪಿ ರಾಜ್‌ಕರನ್ ನಯ್ಯರ್, "ರಾಮ ಮಂದಿರ ಮೊದಲ ವಾರ್ಷಿಕೋತ್ಸವಕ್ಕೆ ಮಹಿಳಾ ಸಿಬ್ಬಂದಿ ಸೇರಿದಂತೆ ಹೆಚ್ಚಿನ ಪೊಲೀಸ್ ತುಕಡಿಯನ್ನು ನಿಯೋಜಿಸಲಾಗುವುದು. ಪ್ರವೇಶ ದ್ವಾರಗಳಲ್ಲಿ ಭದ್ರತಾ ಚೆಕ್‌ಪೋಸ್ಟ್‌ಗಳು ಇದ್ದು ಕಟ್ಟುನಿಟ್ಟಿನ ತಪಾಸಣೆಗೆ ಭಕ್ತರನ್ನು ಒಳಪಡಿಸಲಾಗುತ್ತದೆ" ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+