ರಾಮ ಜನ್ಮಭೂಮಿ ವಿವಾದ : ಡಿ.5ರಿಂದ ಅಂತಿಮ ವಿಚಾರಣೆ ಆರಂಭ

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 11 : ಅಯೋಧ್ಯಯ ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಡಿಸೆಂಬರ್ 5ರಿಂದ ಅಂತಿಮ ವಿಚಾರಣೆ ಆರಂಭಿಸಲಿದೆ.

ಸುಪ್ರೀಂ ಆದೇಶ: ಮುರಳಿ ಭೇಟಿ ಮಾಡಿದ ಆಡ್ವಾಣಿ

ಅಯೋಧ್ಯ ವಿವಾದಕ್ಕೆ ಸಂಬಂಧಿಸಿದಂತೆ ಅಲಹಬಾದ್ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಇಂದು (ಶುಕ್ರವಾರ) ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ, ದಾಖಲೆಗಳ ಭಾಷಾಂತರಕ್ಕೆ ಮೂರು ತಿಂಗಳ ಕಾಲಾವಕಾಶ ನೀಡಿ, ಡಿಸೆಂಬರ್ 5ಕ್ಕೆ ವಿಚಾರಣೆಯನ್ನು ಮುಂದೂಡಿದೆ.

Ayodhya land dispute: Supreme Court fixes December 5 for final hearing

ಸುಮಾರು 90 ಸಾವಿರ ಪುಟಗಳನ್ನು ಒಳಗೊಂಡಿರುವ ಐತಿಹಾಸಿಕ ದಾಖಲೆಗಳು 7 ಭಾಷೆಗೆ ಭಾಷಾಂತರಿಸಲು ಕಾಲಾವಕಾಶ ಬೇಕಾಗಿರುವ ಹಿನ್ನೆಲೆಯಲ್ಲಿ ಸುನ್ನಿ ವಕ್ಫ್ ಬೋರ್ಡ್ ಗೆ ಮೂರು ತಿಂಗಳ ಕಾಲಾವಕಾಶ ನೀಡಿದೆ. ಡಿಸೆಂಬರ್ 5ರಿಂದ ನಿರಂತರವಾಗಿ ವಿಚಾರಣೆ ನಡೆಯಲಿದೆ ಎಂದು ಸುಪ್ರೀಂ ಪೀಠ ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Whether a temple to Lord Ram can be built in Ayodhya at the site where the Babri Masjid was razed will be taken up by the Supreme Court at the end of the year. Judges today said they will start final hearings in the case on December 5 and have asked for all relevant documents to be translated by the Uttar Pradesh government into English within the next three months.
Please Wait while comments are loading...