
ನವದೆಹಲಿ: ಆಟೋ-ಟ್ಯಾಕ್ಸಿ ದರದಲ್ಲಿ ಏರಿಕೆ ಹಿಂದೆ ಎಷ್ಟಿತ್ತು? ಈಗ ಎಷ್ಟಾಯಿತು?
ನವದೆಹಲಿ, ಅಕ್ಟೋಬರ್ 28: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಟೋ ಪ್ರಯಾಣಿಕರಿಗೆ ದರ ಏರಿಕೆ ಶಾಕ್ ನೀಡಲಾಗಿದ್ದು, ನಗರದಲ್ಲಿ ಕನಿಷ್ಠ ಆಟೋ ದರವನ್ನು 25ರ ಬದಲು 30 ರೂಗಳಿಗೆ ಏರಿಕೆ ಮಾಡಲಾಗಿದೆ.
ಸಿಎನ್‌ಜಿ (ನೈಸರ್ಗಿಕ ಅನಿಲ) ಬೆಲೆ ಏರಿಕೆಯ ಪರಿಣಾಮ ಆಟೋ, ಟ್ಯಾಕ್ಸಿ ದರಗಳನ್ನು ಹೆಚ್ಚಿಸಲಾಗಿದೆ. ಇದಕ್ಕೆ ದೆಹಲಿ ಸರಕಾರ ಕೂಡ ದರ ಪರಿಷ್ಕರಣೆಗೆ ಒಪ್ಪಿಗೆ ನೀಡಿದೆ, ಶೀಘ್ರದಲ್ಲೇ ಇದಕ್ಕೆ ಅಧಿಕೃತ ಅಧಿಸೂಚನೆ ಹೊರಬೀಳಲಿದೆ. ದೆಹಲಿಯಲ್ಲಿ ಕೊನೆಯ ಬಾರಿಗೆ ಆಟೋ ದರಗಳನ್ನು 2020 ರಲ್ಲಿ ಪರಿಷ್ಕರಿಸಲಾಗಿತ್ತು. ಆದರೆ ಟ್ಯಾಕ್ಸಿಗೆ 2013 ರಲ್ಲಿ ದರ ಪರಿಷ್ಕರಣೆ ಮಾಡಲಾಗಿತ್ತು.
ಜೆಫ್ ಬೆಜೋಸ್ ಮತ್ತು ಮಾರ್ಕ್ ಜುಕರ್ಬರ್ಗ್ ಬೊಕ್ಕಸದಲ್ಲಿ 1.3 ಲಕ್ಷ ಕೋಟಿ ನಷ್ಟ
ದೆಹಲಿ ಸರಕಾರದ ನಿರ್ಧಾರದ ಪ್ರಕಾರ, ಆಟೋ ಏರುವ ಪ್ರಯಾಣಿಕರು ಮೊದಲ 1.5 ಕಿಲೋಮೀಟರ್‌ಗೆ ಈಗಿರುವ 25 ರೂಗಳ ಬದಲು ಪರಿಷ್ಕೃತ 30 ರೂ ಪಾವತಿಸಬೇಕಾಗುತ್ತದೆ. ನಂತರದ ಪ್ರತಿ ಕಿಲೋಮೀಟರ್‌ಗೆ, ಪ್ರಯಾಣಿಕರು ಪ್ರಸ್ತುತ 9 ರೂ ಬದಲಿಗೆ 11ರೂಗಳನ್ನು ಪಾವತಿಸಬೇಕಾಗುತ್ತದೆ.
ಟ್ಯಾಕ್ಸಿಗಳಿಗೆ, ಮೊದಲ ಕಿಲೋಮೀಟರ್‌ಗೆ, ಎಸಿ ಮತ್ತು ನಾನ್ ಎಸಿ ವಾಹನಗಳ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ನಂತರ ಪ್ರತಿ ಕಿಲೋಮೀಟರ್ ನಾನ್ ಎಸಿ ವಾಹನಗಳಿಗೆ 14 ರಿಂದ 17ರೂಗಳಿಗೆ ಮತ್ತು ಎಸಿ ವಾಹನಗಳಿಗೆ 16 ರೂ.ಗಳಿಂದ 20 ರೂ. ಹೆಚ್ಚಿಸಲಾಗಿದೆ. ಆದರೆ ವೇಯ್ಟಿಂಗ್ ಚಾರ್ಜ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. ಇದು ಹಿಂದಿನ ಪ್ರತಿ ಗಂಟೆಗೆ ಇರುವ 30ರೂ ಮುಂದುವರಿಯಲಿದೆ.
ದೆಹಲಿ ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ ನಗರದ ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಅಸೋಸಿಯೇಷನ್‌ಗಳು ಮತ್ತು ಯೂನಿಯನ್‌ಗಳಿಂದ ಪ್ರಯಾಣ ದರಗಳ ಹೆಚ್ಚಳದ ಕುರಿತು ಕುರಿತು ಸಾಕಷ್ಟು ಮನವಿಗಳಿನ್ನು ಸ್ವೀಕರಿಸಿದ್ದರು, ಇದೀಗ ಆಟೋ ಚಾಲಕರ ಮನವಿ ಸರಕಾರ ಸ್ಪಂದಿಸಿದೆ.
Delhi government approves revised fares for Auto Rickshaws and Taxis in Delhi pic.twitter.com/AhukmleoBv
— ANI (@ANI) October 28, 2022