ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಿಎಚ್ ಪಿ ವಾಗ್ದಾಳಿ

ಅಮರ್ ನಾಥ್ ಯಾತ್ರೆ ಮೇಲೆ ಉಗ್ರದ ದಾಳಿ ಹಿನ್ನೆಲೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಿಎಚ್ ಪಿ ವಾಗ್ದಾಳಿ. ಸರ್ಕಾರದ ವೈಫಲ್ಯವೇ ದಾಳಿಗೆ ಕಾರಣ ಎಂದ ವಿಶ್ವ ಹಿಂದೂ ಪರಿಷತ್.

ನವದೆಹಲಿ, ಜುಲೈ 11: ಭಯೋತ್ಪಾದನೆ ಹುಟ್ಟಗಡಿಸುವ ಪ್ರಯತ್ನದಲ್ಲಿ ಮೋದಿ ಸರ್ಕಾರ ವಿಫಲವಾಗಿರುವುದೇ ಅಮರ್ ನಾಥ ಯಾತ್ರೆಯ ಮೇಲೆ ಉಗ್ರರು ದಾಳಿ ನಡೆಸಲು ಮೂಲ ಕಾರಣ ಎಂದು ವಿಶ್ವ ಹಿಂದೂ ಪರಿಷತ್ ಕಿಡಿ ಕಾರಿದೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಿಎಚ್ ಪಿ ನಾಯಕ ಪ್ರವೀಣ್ ತೊಗಾಡಿಯಾ, '' ಜಮ್ಮು ಕಾಶ್ಮೀರದಲ್ಲಿ ಅಧಿಕಾರದಲ್ಲಿರುವ ಮೆಹಬೂಬಾ ಮುಫ್ತಿ ಅವರ ಸರ್ಕಾರ ಉಗ್ರರೊಂದಿಗೆ ಸ್ನೇಹ ಹೊಂದಿದೆ. ಅಲ್ಲದೆ, ಉಗ್ರವಾದಕ್ಕೆ ಆ ಸರ್ಕಾರ ಪರೋಕ್ಷ ಪ್ರೋತ್ಸಾಹವನ್ನೂ ನೀಡುತ್ತಿದೆ. ಅದರ ಪರಿಣಾಮವಾಗಿಯೇ ಅಮರ್ ನಾಥ ಯಾತ್ರಿಕರ ಮೇಲೆ ಸೋಮವಾರ ಉಗ್ರರು ದಾಳಿ ನಡೆಸಿದೆ'' ಎಂದು ಹೇಳಿದ್ದಾರೆ.

ತಮ್ಮ ಮಾತನ್ನು ಮುಂದುವರಿಸಿ, ''ಕಾಶ್ಮೀರವನ್ನು ಉಗ್ರವಾದಿಗಳಿಂದ ಮುಕ್ತಿಗೊಳಿಸಲು ಕಣಿವೆ ರಾಜ್ಯವನ್ನು ಸಂಪೂರ್ಣವಾಗಿ ಭಾರತೀಯ ಸೇನೆಗೆ ಒಪ್ಪಿಸಬೇಕು'' ಎಂದು ಅವರು ಆಗ್ರಹಿಸಿದರು.

125 ಕೋಟಿ ಭಾರತೀಯರ ರಕ್ಷಣೆ ಪ್ರತ್ಯೇಕ ಸಚಿವ

125 ಕೋಟಿ ಭಾರತೀಯರ ರಕ್ಷಣೆ ಪ್ರತ್ಯೇಕ ಸಚಿವ

ಇದೇ ವೇಳೆ, ''ದೇಶದ 125 ಕೋಟಿ ಭಾರತೀಯರನ್ನು ರಕ್ಷಿಸಲು ಪ್ರತ್ಯೇಕ ರಕ್ಷಣಾ ಸಚಿವರನ್ನು ನೇಮಿಸಬೇಕು'' ಎಂದು ತೊಗಾಡಿಯಾ ಆಗ್ರಹಿಸಿದರು.

ಹಾಲಿ ವಿತ್ತ ಸಚಿವ ಅರುಣ್ ಜೇಟ್ಲಿ ಹೆಗಲಿಗೆ ರಕ್ಷಣಾ ಇಲಾಖೆ

ಹಾಲಿ ವಿತ್ತ ಸಚಿವ ಅರುಣ್ ಜೇಟ್ಲಿ ಹೆಗಲಿಗೆ ರಕ್ಷಣಾ ಇಲಾಖೆ

ಈ ಹಿಂದೆ ರಕ್ಷಣಾ ಇಲಾಖೆ ನಿರ್ವಹಿಸುತ್ತಿದ್ದ ಹಾಲಿ ಗೋವಾ ಸಿಎಂ ಮನೋಹರ್ ಪಾರಿಕ್ಕರ್ ಅವರು ಆ ಸ್ಥಾನ ತ್ಯಜಿಸಿದ ನಂತರ, ಅದರ ಉಸ್ತುವಾರಿ ಹಾಲಿ ಹಣಕಾಸು ಸಚಿವ ಅರುಣ್ ಜೇಟ್ಲಿಯವರಿಗೆ ಸಂದಿದೆ.

ಬೇಸರ ವ್ಯಕ್ತಪಡಿಸಿದ ಪ್ರವೀಣ್

ಬೇಸರ ವ್ಯಕ್ತಪಡಿಸಿದ ಪ್ರವೀಣ್

ಅಮರ್ ನಾಥ್ ಯಾತ್ರಿಗಳ ಮೇಲೆ ಆಗಿರುವ ಉಗ್ರರ ದಾಳಿಯಿಂದ ಈ ದೇಶದಲ್ಲಿ ಹಿಂದೂಗಳಿಗೆ ರಕ್ಷಣೆಯಿಲ್ಲ ಎಂಬುದು ಸಾಬೀತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಅನಿವಾರ್ಯತೆಯಲ್ಲಿದೆಯೇ ಬಿಜೆಪಿ: ತೊಗಾಡಿಯಾ ಪ್ರಶ್ನೆ

ಅನಿವಾರ್ಯತೆಯಲ್ಲಿದೆಯೇ ಬಿಜೆಪಿ: ತೊಗಾಡಿಯಾ ಪ್ರಶ್ನೆ

ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ವಿರುದ್ಧ ಮತ್ತೆ ಮಾತನಾಡಿದ ಅವರು, ''ಮುಫ್ತಿಯವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಸಲು ಬಿಜೆಪಿ ಇನ್ನೂ ಏಕೆ ಮುಂದುವರಿಸುತ್ತಿದೆ. ಅದ್ಯಾವ ಅನಿವಾರ್ಯತೆಗೆ ಸಿಲುಕಿ ಅಲ್ಲಿನ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳದೇ ಕೇಂದ್ರ ಸರ್ಕಾರ ಕುಳಿತಿದೆ ಎಂಬುದು ಗೊತ್ತಾಗಬೇಕು'' ಎಂದು ಅವರು ಪ್ರಶ್ನೆ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+