Get Updates
Get notified of breaking news, exclusive insights, and must-see stories!

ಮಲಯಾಳಂ ನಟಿ ದೌರ್ಜನ್ಯದ ವಿಡಿಯೋ ಕಾವ್ಯಾ ಬಳಿ?

ತಿರುವನಂತಪುರಂ, ಜುಲೈ 03 : ಖ್ಯಾತ ಮಲಯಾಳಂ ನಟಿಯ ಮೇಲಾಗಿದ್ದ ಲೈಂಗಿಕ ದೌರ್ಜನ್ಯವನ್ನು ಚಿತ್ರೀಕರಿಸಿದ ವಿಡಿಯೋ ಇರುವ ಮೆಮೊರಿ ಕಾರ್ಡ್ ಬಗ್ಗೆ ಮಾಹಿತಿ ದೊರೆತಿದ್ದು, ಪ್ರಕರಣ ದಿನದಿಂದ ದಿನಕ್ಕೆ ವಿಚಿತ್ರ ತಿರುವನ್ನು ಪಡೆಯುತ್ತಿದೆ.

ಈ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿರುವ ಪಲ್ಸರ್ ಸುನಿ, ಲೈಂಗಿಕ ದೌರ್ಜನ್ಯದ ವಿಡಿಯೋವನ್ನು ತನ್ನ ಮೊಬೈಲಲ್ಲಿ ಚಿತ್ರೀಕರಿಸಿಕೊಂಡಿದ್ದರೂ, ಮೊಬೈಲ್ ಎಲ್ಲೋ ಕಳೆದಿರುವುದಾಗಿ ಹೇಳಿ ಪೊಲೀಸರ ದಾರಿ ತಪ್ಪಿಸಿದ್ದ.

Atrocity on Malayalam actress : Kerala police raid Kavya Madhavan

ಆದರೆ, ನಂತರದ ವಿಚಾರಣೆಯಲ್ಲಿ ಆ ಲೈಂಗಿಕ ದೌರ್ಜನ್ಯದ ವಿಡಿಯೋ ಇರುವ ಮೆಮೊರಿ ಕಾರ್ಡನ್ನು ಮಲಯಾಳಂನ ಮತ್ತೊಬ್ಬ ಖ್ಯಾತ ನಟಿ ಕಾವ್ಯಾ ಮಾಧವನ್ ಅವರಿಗೆ ಒಪ್ಪಿಸಿದ್ದಾಗಿ ಬಹಿರಂಗಪಡಿಸಿದ್ದ. ಕಾವ್ಯಾ ಮಾಧವನ್ ಮತ್ತಾರೂ ಅಲ್ಲ, ಈ ಪ್ರಕರದ ಸುಳಿಯಲ್ಲಿ ಸಿಲುಕಿರುವ ನಟ ದಿಲೀಪ್ ಅವರ ಪತ್ನಿ.

ಈ ಮಾಹಿತಿ ಬಹಿರಂಗವಾಗುತ್ತಿದ್ದಂತೆ, ಪೊಲೀಸರು ಕಾವ್ಯಾ ಮಾಧವನ್ ಅವರಿಗೆ ಸೇರಿದ ಬಟ್ಟೆ ಮಳಿಗೆ 'ಲಕ್ಷ್ಯ'ದ ಮೇಲೆ ದಾಳಿ ನಡೆಸಿದ್ದಾರೆ. ಸುಮಾರು 3 ಗಂಟೆಗಳ ಕಾಲ ನಡೆದ ದಾಳಿಯಲ್ಲಿ ವಿಡಿಯೋ ಇರುವ ಮೆಮೊರಿ ಕಾರ್ಡ್ ಸಿಕ್ಕಿದೆಯೆ ಇಲ್ಲವೆ ಎಂಬುದನ್ನು ಗೌಪ್ಯವಾಗಿ ಇಡಲಾಗಿದೆ.

Atrocity on Malayalam actress : Kerala police raid Kavya Madhavan

ವಿಡಿಯೋ ಇರುವ ಮೆಮೊರಿ ಕಾರ್ಡನ್ನು ಕಕ್ಕನಾಡ್ ನಲ್ಲಿರುವ ಇ-ಕಾಮರ್ಸ್ ಅಂಗಡಿಗೆ ತಲುಪಿಸಿರುವುದಾಗಿ ಪಲ್ಸರ್ ಸುನಿ ನಟ ದಿಲೀಪ್ ಅವರಿಗೆ ಪತ್ರ ಬರೆದಿದ್ದ. ಆ ಪತ್ರದಲ್ಲಿ ತಾನು ಕಕ್ಕನಾಡ್ ನಲ್ಲಿರುವ ಅಂಗಡಿಗೆ ಎರಡು ಬಾರಿ ಹೋಗಿದ್ದಾಗಿ ತಿಳಿಸಿದ್ದಾನೆ. ಆ ಅಂಗಡಿ ಕಾವ್ಯಾ ಮಾಧವನ್ ಅವರಿಗೆ ಸೇರಿರುವುದರಿಂದ ಭಾರೀ ಕುತೂಹಲ ಕೆರಳಿಸಿದೆ.

ಕಳೆದ ವಾರ ಈ ಪ್ರಕರಣದಲ್ಲಿ ಕೇಳಿ ಬಂದಿರುವ ಪ್ರಮುಖ ವ್ಯಕ್ತಿಯಾಗಿರುವ ದಿಲೀಪ್ ರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಜೈಲಿನಲ್ಲಿ ಬಂದಿಯಾಗಿರುವ ಪಲ್ಸರ್ ಸುನಿ ತನ್ನ ಸಹೋದ್ಯೋಗಿಯೊಂದಿಗೆ ಮಾತನಾಡುವಾಗ ದಿಲೀಪ್ ಅವರ ಹೆಸರನ್ನು ಪ್ರಸ್ತಾಪಿಸಿದ್ದ. ಈ ಹಿನ್ನೆಲೆಯಲ್ಲಿ ದಿಲೀಪ್ ವಿಚಾರಣೆ ನಡೆದಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+