Atiq, Ashraf Murder Case: ಅತೀಕ್, ಅಶ್ರಫ್ ಹತ್ಯೆ ಪ್ರಕರಣ: 5 ಯುಪಿ ಪೊಲೀಸರ ಅಮಾನತು
ಲಕ್ನೋ ಏಪ್ರಿಲ್ 19: ಕ್ರಿಮಿನಲ್ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಯಾಗರಾಜ್‌ನ ಐವರು ಪೊಲೀಸ್ ಅಧಿಕಾರಿಗಳನ್ನು ಬುಧವಾರ ಅಮಾನತುಗೊಳಿಸಲಾಗಿದೆ. ಅಧಿಕಾರಿಗಳನ್ನು ಶಹಗಂಜ್ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಗಿದೆ.
ಏಪ್ರಿಲ್ 16 ರಂದು ಕ್ರಿಮಿನಲ್ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅವರನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯತ್ತದ್ದ ವೇಳೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಿದ್ದಾಗ ಪತ್ರಕರ್ತರಂತೆ ನುಗ್ಗಿ ಬಂದ ಮೂವರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಅತೀಕ್, ಅಶ್ರಫ್ ಮೇಲೆ ಸರಿಣಿ ಗುಂಡಿನ ದಾಳಿ ಮಾಡಿದ್ದರಿಂದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದರಿಂದ ಸ್ಥಳದಲ್ಲಿ ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣ ಎಚ್ಚತ್ತ ಪೊಲೀಸರು ಮೂವರು ದಾಳಿಕೋರರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಪ್ರಕರಣ MLN ವೈದ್ಯಕೀಯ ಕಾಲೇಜು ಆವರಣದಲ್ಲಿ ನಡೆದಿತ್ತು. ಇದು ಶಹಗಂಜ್ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುತ್ತದೆ. ಮೂವರು ಶೂಟರ್‌ಗಳಾದ ಹಮೀರ್‌ಪುರದ ಸನ್ನಿ ಸಿಂಗ್ (23), ಬಂಡಾದ ಲವಲೇಶ್ ತಿವಾರಿ (22) ಮತ್ತು ಕಾಸ್‌ಗಂಜ್‌ನ ಅರುಣ್ ಮೌರ್ಯ (18) ಅವರನ್ನು ಬುಧವಾರ ಏಪ್ರಿಲ್ 23 ರವರೆಗೆ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.
ಮಾಧ್ಯಮದವರು ಹಾಗೂ ಪೊಲೀಸರ ಮುಂದೆ ಯಾವುದೇ ಭಯಭೀತಿಯಿಲ್ಲದೆ ಗುಂಡು ಹಾರಿಸಿರುವ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಇದು ಉತ್ತರಪ್ರದೇಶದಲ್ಲಿ ಸುರಕ್ಷತೆಯ ಬಗ್ಗೆ ಪ್ರಶ್ನೆಯನ್ನು ಹುಟ್ಟುಹಾಕಿದೆ. ಇದರಿಂದ ಘಟನೆಯ ದಿನವೇ ಸಭೆ ನಡೆಸಿದ ಸಿಎಂ ಯೋಗಿ ಆದಿತ್ಯನಾಥ್ ನಡೆಸಿದರು. ಮರುದಿನವೇ ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಉಮೇಶ್ ಪಾಲ್ ಹತ್ಯೆಯ ಎಫ್‌ಐಆರ್‌ನಲ್ಲಿ ಹೆಸರಿಸಲಾದ 10 ಜನರಲ್ಲಿ ಗುಡ್ಡು ಮುಸ್ಲಿಂ ಒಬ್ಬರು. ಅವರಲ್ಲಿ ಆರು ಮಂದಿ ಸಾವನ್ನಪ್ಪಿದ್ದು, ಪರಾರಿಯಾಗಿರುವ ನಾಲ್ವರಲ್ಲಿ ಗುಡ್ಡು ಮುಸ್ಲಿಂ ಕೂಡ ಒಬ್ಬರು.

ಸಿಎಂ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಉತ್ತರ ಪ್ರದೇಶ ಪೊಲೀಸ್ ಎಸ್‌ಟಿಎಫ್ ಮುಖ್ಯಸ್ಥ ಅಮಿತಾಬ್ ಯಶ್, ವಿಶೇಷ ಡಿಜಿ ಪ್ರಶಾಂತ್ ಕುಮಾರ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು. ಶೈಸ್ತಾ ಮತ್ತು ಗುಡ್ಡು ಮುಸ್ಲಿಂರನ್ನು ತ್ವರಿತವಾಗಿ ಬಂಧಿಸುವುದು ಹೇಗೆ ಎಂದು ಅಧಿಕಾರಿಗಳೊಂದಿಗೆ ಸಿಎಂ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಶೈಸ್ತಾ ಪರ್ವೀನ್‌ಗೆ ಸಹಾಯ ಮಾಡಿದ ಶಂಕಿತ 20 ಕ್ಕೂ ಹೆಚ್ಚು ಜನರನ್ನು ಪೊಲೀಸರು ಇದುವರೆಗೆ ಗುರುತಿಸಿದ್ದಾರೆ. ಗುಡ್ಡು ಮುಸಲ್ಮಾನರ ಕೊನೆಯ ಸ್ಥಳ ಕರ್ನಾಟಕದಲ್ಲಿತ್ತು ಎಂದು ತಿಳಿದು ಬಂದಿದೆ.












Click it and Unblock the Notifications