ಮತದಾರರ ಪಟ್ಟಿಯಿಂದ ವಾಜಪೇಯಿ ಹೆಸರು ಹೊರಕ್ಕೆ
ಲಕ್ನೋ, ಸೆ. 28: ಮಾಜಿ ಪ್ರಧಾನಿ, ಬಿಜೆಪಿ ಹಿರಿಯ ಮುಖಂಡ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ.
ಹಲವು ವರ್ಷಗಳಿಂದ ಅವರು ಲಕ್ನೋದಲ್ಲಿ ವಾಸವಾಗಿಲ್ಲವಾದ್ದರಿಂದ ಅವರ ಹೆಸರನ್ನು ಲಕ್ನೋ ಮುನಿಸಿಪಲ್ ಕಾರ್ಪೋರೇಷನ್‌ನ (ಎಲ್ಎಂಸಿ) ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕಳೆದ ಕೆಲ ವರ್ಷಗಳಿಂದ ಅನಾರೋಗ್ಯಕ್ಕೆ ಈಡಾಗಿದ್ದು, ಅವರು ನವದೆಹಲಿಯಲ್ಲಿ ವಾಸವಾಗಿದ್ದಾರೆ.
Ex-PM Atal Bihari Vajpayee's name removed from Lucknow Municipal Corporation voter list,officer says he wasn't living at his local residence pic.twitter.com/lJ01ZUcusG
— ANI UP (@ANINewsUP) September 28, 2017
ಸದ್ಯ ಲಕ್ನೋದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗಿದ್ದು, ಹೊಸ ಮತದಾರರ ಪಟ್ಟಿ ಬಿಡುಗಡೆಗೊಂಡಿದೆ. ಹೊಸ ಪಟ್ಟಿಯಿಂದ ವಾಜಪೇಯಿ ಹೆಸರನ್ನು ತೆಗೆದುಹಾಕಲಾಗಿದೆ.
2004ರ ಲೋಕಸಭಾ ಚುನಾವಣೆ ನಂತರ ವಾಜಪೇಯಿ ಅವರು ಇಲ್ಲಿ ಮತ ಚಲಾವಣೆ ಮಾಡಿಲ್ಲ.












Click it and Unblock the Notifications